ಜಲ ಸಂಪನ್ಮೂಲ ಸಂರಕ್ಷಣೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ
Training program for farmers on water resource conservation
ಧಾರವಾಡ 27: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡದಲ್ಲಿ ಸಮಗ್ರ ಜಲ ಸಂಪನ್ಮೂಲ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಮಲಪ್ರಭಾ- ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ಬೆಳೆಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರೈತರಿಗೆ ದಿ. 27ರಿಂದ 29ರ ವರೆಗೆ ಆಯೋಜಿಸಲಾಗಿರುವ ಮೂರು ದಿನಗಳ ತರಬೇತಿಯ ‘ಉದ್ಘಾಟನಾ ಕಾರ್ಯಕ್ರಮ’ ಇಂದು ದಿ. 27 ನೆರವೇರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಮ್. ಸತೀಶ ಕುಮಾರ, ಆಡಳಿತಾಧಿಕಾರಿಗಳು, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು, ಕಾಡಾ, ಬೆಳೆಗಾವಿ ರವರು ವಹಿಸಿದ್ದರು. ಇವರು ಅಚ್ಚುಕಟ್ಟು ಪ್ರದೇಶದಡಿ ಬರುವ ಎಲ್ಲ ರೈತರು ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಿಕೊಂಡ ಸಹಭಾಗಿತ್ವ ಪದ್ಧತಿಯಡಿಯಲ್ಲಿ ಸಮರ್ಕ ನೀರಿನ ಬಳಕೆ ಮತ್ತು ಮಣ್ಣಿನ ಫಲವತ್ತತೆ ನಿರ್ವಹಣೆ ಕುರಿತು ಅವಶ್ಯವಿರುವ ತರಬೇತಿಯನ್ನು ಕಾಡಾ ಮತ್ತು ವಾಲ್ಮಿ, ಧಾರವಾಡ ಸಂಸ್ಥೆಯ ಸಹಯೋಗದೊಂದಿಗೆ ನೀಡಲಾಗುತ್ತಿದ್ದು, ರೈತರು ಅದರ ಉಪಯೋಗ ತೆಗೆದುಕೊಳ್ಳಬೇಕು ಎಂದರು. ವಾಲ್ಮಿ ಸಂಸ್ಥೆಯಲ್ಲಿ ಪರಿಣಾಮಕಾರಿಯಾಗಿ ಅಧುನಿಕ ಕೃಷಿ ತಾಂತ್ರಿಕತೆ, ಸಹಭಾಗಿತ್ವದ ನೀರಾವರಿ ಪದ್ಧತಿ ಅಳವಡಿಕೆ, ನೀರು ಬಳಕೆದಾರರ ಸಹಕಾರ ಸಂಘಗಳ ರಚನೆ, ನಿರ್ವಹಣೆ, ಕರ ಸಂಗ್ರಹಣೆ ಮತ್ತು ಆಕರಣೆ,
ನೀರಾವರಿ ಕಾಯ್ದೆ ಇತ್ಯಾದಿ ವಿಷಯಗಳ ಕುರಿತು ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ ಕೈಗೊಳ್ಳುತ್ತಿದ್ದಾರೆ. ಅಲ್ಲದೆ ವಾಲ್ಮಿ ಆವರಣದಲ್ಲಿ ಪ್ರಾತ್ಯಕ್ಷಿಕೆ ತಾಕುಗಳು, ಸೂಕ್ಷ್ಮ ನೀರಾವರಿ ಘಟಕ, ಹೈಡ್ರಾಲಿಕ್, ಮಣ್ಣು ಮತ್ತು ನೀರು ಪರೀಕ್ಷೆ ಪ್ರಯೋಗಾಲಯ, ಜಾನುವಾರು ಘಟಕ, ಎರೆಹುಳು ಗೊಬ್ಬರ ಘಟಕ, ಮಳೆ ನೀರು ಕೊಯ್ಲು ಘಟಕ ಭೇಟಿ ಮಾಡಿ ತರಬೇತಿಯ ಪೂರ್ಣ ಪ್ರಯೋಜನ ಪಡೆದು ನೀ.ಬ.ಸ.ಸಂಘಗಳ ಬಲವರ್ಧನೆಯಾಗಬೇಕು ತಾವು ಇತರ ರೈತರಿಗೆ ಮಾದರಿಯಾಗಿ ತರಬೇತಿ ಯಶಸ್ವಿಗೊಳಿಸಲು ಕರೆ ನೀಡಿದರು. ಕೇಂದ್ರ ಸರ್ಕಾರದ ಎಂಕ್ಯಾಡ್ ಯೋಜನೆ ಎಲ್ಲ ರೈತರು ಪ್ರಯೋಜನ ಪಡೆಯಬೇಕು ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಪ್ರಾಧ್ಯಾಪಕರಾದ ಇಂ. ಬಿ. ವೈ. ಬಂಡಿವಡ್ಡರ ರವರು ವಹಿಸಿದ್ದರು. ಇವರು ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಗೆ ಅವಶ್ಯವಿರುವ ನೀರನ್ನು ಪೂಜನೀಯ ಆಣೆಕಟ್ಟುಗಳಿಂದ ಪಡೆಯಲಾಗುತ್ತವೆ. ಗುಣಾತ್ಮಕ ಬೀಜ, ಮಣ್ಣು ಮತ್ತು ಹಿತಮಿತದಲ್ಲಿ ನೀರಿನ ಸದ್ಬಳಕೆಯಿಂದ ಒಳ್ಳೆಯ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ರೈತ ಕೇವಲ ಭತ್ತ ಮತ್ತು ಕಬ್ಬು ಬೆಳೆಯದೇ ಭೂಮಿ, ಪರಿಸರಕ್ಕನುಗುಣವಾಗಿ ಬೆಳೆ ಬೆಳೆಯಬೇಕು. ಕಾಡಾ ಇಲಾಖೆಯಿಂದ ಇರುವ ಸರ್ಕಾರದ ಸೌಲತ್ತುಗಳನ್ನು ತಿಳಿದುಕೊಂಡು, ನೀರಿನ ಕರ ಆಕರಣೆ ಮತ್ತು ಸಂಗ್ರಹಣೆ ಹಾಗೂ ಕೇಂದ್ರ ಸರ್ಕಾರದ ಎಂಕ್ಯಾಡ್ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ನೀರು ಬಳಕೆದಾರರ ಸಹಕಾರ ಸಂಘಗಳು ಆರ್ಥಿಕ ಬಲವರ್ಧನೆಗೊಳ್ಳಬೇಕು. ಕೊನೆಯ ತೂಬಿನ ರೈತನು ಕೂಡ ನೀರು ಪಡಯುವಂತೆ ಸಹಕಾರದಿಂದ ನೀರು ನಿರ್ವಹಣೆ ಮಾಡಿ ತರಬೇತಿಯ ಪ್ರಯೋಜನ ಪಡೆದು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಪ್ರಗತಿಪರ ರೈತರಾಗಬೇಕು ಎಂದು ಕರೆ ನೀಡಿದರು. ಜೊತೆಗೆ ವಾಲ್ಮಿ ಸಂಸ್ಥೆಯಿಂದ ಪ್ರಗತಿ ಪರ ರೈತರ ವಿಶೇಷ ವರದಿಯ ತಯಾರಿಸಲಾಗುವುದು ಎಂದು ರೈತರನ್ನು ಪ್ರೋತ್ಸಾಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 