ರಸ್ತೆ ಬದಿ ಅಂಗಡಿಗಳ ತೆರವು ಽ ನಗರಸಭೆ ವ್ಯಾಪ್ತಿಯ ಖುಲ್ಲಾ ಜಾಗೆ ನೀಡುವಂತೆ ವ್ಯಾಪಾರಸ್ತರ ಮನವಿ

ರಸ್ತೆ ಬದಿ ಅಂಗಡಿಗಳ ತೆರವು ಽ ನಗರಸಭೆ ವ್ಯಾಪ್ತಿಯ ಖುಲ್ಲಾ ಜಾಗೆ ನೀಡುವಂತೆ ವ್ಯಾಪಾರಸ್ತರ ಮನವಿ Traders request to vacate roadside shops and provide vacant land within the municipal limits


ರಾಣೆಬೆನ್ನೂರು 13: ಇಲ್ಲಿನ ಸಿದ್ದೇಶ್ವರ ನಗರದ ದೇವಸ್ಥಾನದ ಪಿ.ಬಿ.ರಸ್ತೆ ಒಳಗೊಂಡಂತೆ ತಹಶೀಲ್ದಾರ್ ಕಚೇರಿ ಎದುರುಗಡೆ ಕಳೆದ 30 ವರ್ಷಗಳಿಂದ ಗೊಡಂಗಡಿಗಳ ಮೂಲಕ, ಬೀದಿ ಬದಿ,  ಅಂಗಡಿಗಳು, ಹೋಟೆಲಗಳು  ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುತ್ತಾ ತಮ್ಮ ಜೀವನ ನಿರ್ವಹಣೆ ಮಾಡುತ್ತಾ ಬಂದಿದ್ದೇವೆ.  

 ಸದ್ಯ ತಾಸಿಲ್ದಾರ್ ಕಚೇರಿ ಎದುರುಗಡೆ ದೇಶಭಕ್ತಿಯ ಸಂಕೇತವಾಗಿ ಯುದ್ಧ ವಿಮಾನ ಪ್ರತಿಷ್ಠಾಪಿಸಲಾಗಿದ್ದು ಇದರಿಂದಾಗಿ ನಮ್ಮ ಬಹುತೇಕ  ಅಂಗಡಿಗಳು ತೆರವು ಗೊಂಡಿವೆ. ಅಲ್ಲದೆ ಬೇರೆ ಬೇರೆ ಭಾಗಗಳಲ್ಲಿ ಅಂಗಡಿಗಳು ಇಲ್ಲದಂತಾಗಿದೆ. ಇದರಿಂದ ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಮತ್ತು ನಗರಸಭೆ ಪೌರಾಯುಕ್ತರು ಈ ಕೂಡಲೇ ನಮ್ಮ ಮನವಿಯನ್ನು ಪರಿಗಣಿಸಿ ಪರಂಪರೆ ಇಂದ ನಾವು ನಡೆಸಿಕೊಂಡು ಬಂದಿರುವ, ವ್ಯಾಪಾರ ವಹಿವಾಟು ನಡೆಸಲು ಖಾಲಿ ಇರುವ ನಗರಸಭೆ ಖುಲ್ಲಾ ಜಾಗೆಯಲ್ಲಿ ವ್ಯಾಪಾರ ವಹಿವಾಟು  ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಸ್ವಾಕರವೇ  ಸೇರಿದಂತೆ ವಿವಿಧ ಕನ್ನಡಪರ ಸಂಘ ಸಂಸ್ಥೆಗಳ ಅಧ್ಯಕ್ಷರು ಮುಖಂಡರುಗಳ ನೇತೃತ್ವದಲ್ಲಿ  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೆಶ ದಾನಮ್ಮನವರ ಮತ್ತು ನಗರಸಭೆ ಪೌರಾಯುಕ್ತ ಎಫ್ ಐ ಇಂಗಳಗಿ ಅವರಿಗೆ ತಮ್ಮ   ಮನವಿ ಸಲ್ಲಿಸಿ, ಒತ್ತಾಯಿಸಿದರು.  

 ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ, ಮೃತುಂಜಯ ಕರಿಯಜ್ಜಿ, ಚಂದ್ರ​‍್ಪ ಬಣಕಾರ,   ಮಲ್ಲಿಕಾರ್ಜುನ, ಗೋಪಿ ಕುಂದಾಪುರ, ಪರಶುರಾಮ, ಕೊಟ್ರೇಶಪ್ಪ ಎಮ್ಮಿ, ಬಸವರಾಜ ದಳವಾಯಿ, ರೇವಣಸಿದ್ಧಯ್ಯ ಸಣ್ಣಸಂಗಾಪುರ, ಆನಂದ ಲಮಾಣಿ, ಮಂಜುನಾಥ್ ಹಡಗಲಿ, ಬಸವರಾಜ ಮಣ್ಣೂರು, ಮಾಂತೇಶ ಲಮಾಣಿ, ಚಂದ್ರು ಜೋಗರ, ಬಸವರಾಜ ಕರ್ಜಿಗಿ, ದೀಪು ದೇಸಾಯಿ, ಮಾರುತಿ ಮಡಿವಾಳರ ಮತ್ತಿತರರು ಪಾಲ್ಗೊಂಡಿದ್ದರು.