ಇಂದು ದಿ. ಡಾ. ಎಸ್‌. ಎಂ. ವೃಷಭೇಂದ್ರಸ್ವಾಮಿಗಳ ಸಂಸ್ಮರಣ ದತ್ತಿ ಉಪನ್ಯಾಸ ಕಾರ್ಯಕ್ರಮ

ಇಂದು ದಿ. ಡಾ. ಎಸ್‌. ಎಂ. ವೃಷಭೇಂದ್ರಸ್ವಾಮಿಗಳ ಸಂಸ್ಮರಣ ದತ್ತಿ ಉಪನ್ಯಾಸ ಕಾರ್ಯಕ್ರಮ Today the Dr. S. M. Memorial Endowment Lecture Program of Vrishabendraswamy

ಧಾರವಾಡ 27 : ಕರ್ನಾಟಕ ವಿದ್ಯಾವರ್ಧಕ ಸಂಘವು ದಿನಾಂಕ: 28-1-2026 ರಂದು ಸಾಯಂಕಾಲ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ದಿ. ಡಾ. ಎಸ್‌. ಎಂ. ವೃಷಭೇಂದ್ರಸ್ವಾಮಿಗಳ ಸಂಸ್ಮರಣ ದತ್ತಿ ಉಪನ್ಯಾಸ ಕಾರ್ಯಕ್ರಮ ಏರಿ​‍್ಡಸಿದೆ. 

ಸಿಂಧನೂರಿನ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕರು ಹಾಗೂ ಬೆಂಗಳೂರು ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯರಾದಡಾ. ಜಾಜಿದೇವೇಂದ್ರ​‍್ಪ ಅವರು“ಈ ಕಾಲದಕನ್ನಡ ಕಾವ್ಯದ ಆಶಯ ಅಭಿವ್ಯಕ್ತಿ” ವಿಷಯದ ಕುರಿತು ಅತಿಥಿ ಉಪನ್ಯಾಸ ನೀಡುವರು.  

ಮುಖ್ಯ ಅತಿಥಿಗಳಾಗಿ ಹೊನ್ನಾವರದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಬರಹಗಾರರು ಡಾ. ಶ್ರೀಪಾದ ಶೆಟ್ಟಿ ಆಗಮಿಸುವರುಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತಗುರ​‍್ಪ ಬೆಲ್ಲದ ಅಧ್ಯಕ್ಷತೆ ವಹಿಸುವರು. 

ಧಾರವಾಡದ ಭಾರತೀಯತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರಾಧ್ಯಾಪಕ ಡಾ. ಎಸ್‌. ಎಂ. ಶಿವಪ್ರಸಾದ ಉಪಸ್ಥಿತರಿರುವರು. ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿಕೋರಿದ್ದಾರೆ. 

ದಿ. ಡಾ. ಎಸ್‌.ಎಂ. ವೃಷಭೇಂದ್ರಸ್ವಾಮಿ 

ಕನ್ನಡ ಸಾರಸ್ವತ ಲೋಕದ ಧೀಮಂತ ವ್ಯಕ್ತಿ ಡಾ.ಎಸ್‌.ಎಂ.ವೃಷಭೇಂದ್ರ ಸ್ವಾಮಿ. ನಾಡು ಕಂಡ ಅಪರೂಪದ ಕನ್ನಡ ವಿದ್ವಾಂಸರು ಮತ್ತು ಬಹುಮುಖ ಪ್ರತಿಭೆ ಎಂದು ಖ್ಯಾತ ನಾಮರಾದವರು. ಅವರು ಸಾಹಿತಿಗಳಾಗಿ,  ಪ್ರಾಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಕ.ವಿ.ವಿ.ಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿ, ವಾಗ್ಮಿಗಳಾಗಿ, ಗೋಕಾಕ ಚಳುವಳಿಯ ನೇತಾರರಾಗಿ ಮತ್ತು ಕನ್ನಡದ ಕಟ್ಟಾಳಾಗಿ ನಾಡಿಗೆ ಚಿರ ಪರಿಚಿತರಾಗಿದ್ದರು. 

ಕ.ವಿ.ವಿ.ಯ ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ಹಲವಾರು ಪ್ರತಿಷ್ಠಿತ ವಿ.ವಿ.ಗಳ ನೇಮಕಾತಿ ಮಂಡಳಿಯ ಸದಸ್ಯರಾಗಿ, ಸಂಶೋಧಕರಾಗಿ, ಸಂಶೋಧಕರಿಗೆ ಶ್ರೇಷ್ಠ ಮಾರ್ಗದರ್ಶಕರಾಗಿ, ತಮ್ಮ ಸಾಧನೆಯ ಮೂಲಕ ಚಿರಸ್ಥಾಯಿಯಾಗಿದ್ದಾರೆ. ಸೊನ್ನದ ಮುರಡಿ ಮಠ ಕೊಟ್ರ​‍್ಪಯ್ಯ ಮತ್ತು ಬಸಮ್ಮ ಆದರ್ಶ ದಂಪತಿಗಳ ಉದರದಿಂದ ದಿನಾಂಕ:  19-02-1927 ರಂದು ಬಳ್ಳಾರಿ ಜಿಲ್ಲೆಕೂಡ್ಲಿಗಿ ತಾಲೂಕಿನ ಎಂ.ಬಿ. ಅಯ್ಯನಹಳ್ಳಿಯಲ್ಲಿ ಜನಿಸಿದ ಡಾ.ವೃಷಭೇಂದ್ರ ಸ್ವಾಮಿ ಕಾನಾಮಡುಗು, ಕೊಟ್ಟೂರುಗಳಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಾಗೂ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಇಂಟರ್ ಮಿಡಿಯಟ್ ವಿದ್ಯಾಭ್ಯಾಸ ಪೂರೈಸಿ, ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷಾ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ರಾಷ್ಟ್ರಕವಿ ಕುವೆಂಪು’ ಅವರ ಶಿಷ್ಯರಾಗಿ ಎಂ.ಎ. ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ‘ಸಿದ್ದಪ್ಪ’ ಬಂಗಾರದ ಪದಕ ಪಡೆದಿದ್ದರು. (1955) ಶ್ರೀಮತಿ ಲಲಿತಾಂಬಾರೊಡನೆ 13-5-1956 ರಲ್ಲಿ ವಿವಾಹವಾದರು. 1961 ರಲ್ಲಿಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೇವೆಗೆ ಸೇರಿ 1988 ರಲ್ಲಿ ನಿವೃತ್ತಿ ಹೊಂದಿದರು. 

        ಬರೆಯುವ ದಾರಿ, ಸಂಶೋಧನಾ ಪ್ರಬಂಧಗಳು, ತ್ರಿವಿಧ ಕ್ರಾಂತಿಮೂರ್ತಿ ಬಸವಣ್ಣ, ಕನ್ನಡ ಸಾಹಿತ್ಯದಲ್ಲಿ ಅಲ್ಲಮ ಪ್ರಭು (ಪಿ.ಎಚ್‌.ಡಿ. ಮಹಾಪ್ರಬಂಧ), ಕುವೆಂಪು: ನನ್ನ ದಿನಚರಿಯ ಕನ್ನಡಿಯಲ್ಲಿ, ತರಗತಿಯಲ್ಲಿ ಕುವೆಂಪು, ಮರೆಯಲಾಗದ ಮಹನೀಯರು, ಸಹೃದಯ ವಿಮರ್ಶೆ, ಇನ್ನೂಇಂಥ ಹಲವು  ಕೃತಿಗಳನ್ನು ರಚಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ. ಧಾರವಾಡದಲ್ಲಿ ದಿನಾಂಕ 28-1-2015 ರಂದು ಲಿಂಗೈಕ್ಯರಾದರು. ಇವರ ಸುಪುತ್ರ ಪ್ರೊ.ಎಸ್‌.ಎಂ.ಶಿವಪ್ರಸಾದ ತಮ್ಮತಂದೆಯ ಸಂಸ್ಮರಣೆಗಾಗಿ ಈ ದತ್ತಿ ಇರಿಸಿದ್ದಾರೆ, ಬನ್ನಿ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.