ಇಂದು ಹಾಯ್ ಕೊಪ್ಪಳ ಪಾಕ್ಷಿಕ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ

Today is the 13th year anniversary of Hi Koppal fortnightly magazine

ಇಂದು ಹಾಯ್ ಕೊಪ್ಪಳ ಪಾಕ್ಷಿಕ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ 

ಯಲಬುರ್ಗಾ 06: ಇಂದು ಶುಕ್ರವಾರ ದಂದು ಹಾಯ್ ಕೊಪ್ಪಳ ಪಾಕ್ಷಿಕ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ತಾಲೂಕಿನ ಕರಮುಡಿ ಗ್ರಾಮದ ಬಯಲು ರಂಗ ಮಂದಿರದ ಆವರಣದಲ್ಲಿ ಜರುಗಲಿದೆ.  

ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಯಲಬುರ್ಗಾ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ, ಕುಷ್ಟಗಿ ಶಾಸಕ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್‌. ಪಾಟೀಲ್, ಕೊಪ್ಪಳ ಸಂಸದ ರಾಜಶೇಖರ  ಹಿಟ್ನಾಳ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಕೊಪ್ಪಳ ಶಾಸಕ ರಾಜಶೇಖರ ಹಿಟ್ನಾಳ, ಮಾಜಿ ಸಚಿವರಾಜ ಹಾಲಪ್ಪ ಬಸಪ್ಪ ಆಚಾರ,  

ಮಾಜಿ ಸಚಿವರಾದ ಅಮರೇಗೌಡ ಬೈಯ್ಯಾಪೂರ, ಬಿ.ಜೆ.ಪಿ. ಕಾರ್ಯಕಾರಣಿ ಸದಸ್ಯ ಡಾಽಽ ಬಸವರಾಜ ಕ್ಯಾವಟರ್, ಜೆ.ಡಿ.ಎಸ್‌. ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ಕರ್ನಾಟಕ ಕಿಸಾನ್ ಕಾಂಗ್ರೇಸ್ ಸಂಚಾಲಕ ಮತು ಕೆ.ಪಿ.ಸಿ.ಸಿ. ಸಂಯೋಜಕ ಕೆ.ಎಮ್‌. ಸೈಯದ್, ಹಿರಿಯ ಬಿ.ಜೆ.ಪಿ ಮುಖಂಡರಾದ ಬಸಲಿಂಗಪ್ಪ ಭೂತೆ, ಶ್ರೀಪಾದಪ್ಪ ಎನ್‌. ಅಧಿಕಾರಿ, ಮಾಜಿ ಜಿ.ಪಂ. ಸದಸ್ಯ ಸಿ.ಹೆಚ್‌.ಪಾಟೀಲ್, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಅರವಿಂದಗೌಡ್ರ ಶಿವಶರಣಪ್ಪ ಪಾಟೀಲ್ ಇನ್ನಿತರ ಗಣ್ಯ ಮಾನ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಹಾಯ್ ಕೊಪ್ಪಳ ಪತ್ರಿಕೆ ಸಂಪಾದಕ ಸ.ಶರಣಪ್ಪ ಪಾಟೀಲ್ ಕರಮುಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.