ಇಂದು ಪ್ರೊ. ಕೃಷ್ಣಪ್ಪ ರವರ 88 ನೇ ಜನ್ಮದಿನಾಚರಣೆ: ಬಳ್ಳಾರಿಯಲ್ಲಿ ಸಮಾವೇಶ

ಇಂದು ಪ್ರೊ. ಕೃಷ್ಣಪ್ಪ ರವರ 88 ನೇ ಜನ್ಮದಿನಾಚರಣೆ: ಬಳ್ಳಾರಿಯಲ್ಲಿ ಸಮಾವೇಶ Today is Prof. Krishnappa's 88th birthday celebration: Conference in Bellary

ಇಂದು ಪ್ರೊ. ಕೃಷ್ಣಪ್ಪ ರವರ 88 ನೇ ಜನ್ಮದಿನಾಚರಣೆ: ಬಳ್ಳಾರಿಯಲ್ಲಿ ಸಮಾವೇಶ

ಕೊಪ್ಪಳ 07: ಎರಡನೇ ಅಂಬೇಡ್ಕರ್ ಎಂದೇ ಹೆಸರು ವಾಸಿಯಾಗಿರುವ ಪ್ರೂ. ಬಿ ಕೃಷ್ಣಪ್ಪ ರವರ 88 ನೇ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕರ್ತರ ರಾಜ್ಯ ಮಟ್ಟದ ಸ್ವಾಭಿಮಾನ ಸಂಘರ್ಷ ಚೈತನ್ಯ ಸಮಾವೇಶ ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಬಿ ಕೃಷ್ಣಪ್ಪ ಬಣ)ದ ಜಿಲ್ಲಾಧ್ಯಕ್ಷ ಪರಶುರಾಮ್ ಕೇರಹಳ್ಳಿ, ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.  

ಕರ್ನಾಟಕದಲ್ಲಿ 70ರ ದಶಕದಲ್ಲಿ ದಲಿತರ ಮೇಲೆ ಜಾತಿ ಬೇದ, ಲಿಂಗಭೇದ ದೌರ್ಜನ್ಯ ದಬ್ಬಾಳಿಕೆಗಳು ಉತ್ತುಂಗ ಸ್ಥಿತಿಯಲ್ಲಿದ್ದ ಸಂದರ್ಭದಲಿತರ ಭೂಬಳಕೆ ದಲಿತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಸಾಮಾಜಿಕ ಅಸಮಾನತೆ ಸಜೀವ ದಹನ ನೋಡಿ ಸಹಿಸದ ಅಸ್ಪೃಶ್ಯತೆಯನ್ನ ಅನುಭವಿಸಿ, ಸಿಡಿದೆದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ ಸಿದ್ದಿಪುರ ಬೂಹೋರಾಟ ಚಂದ್ರಗುತ್ತಿ ಬೆತ್ತಲೆ ಸೇವೆ ದೇವದಾಸಿ ಪದ್ಧತಿ, ಕುಂಬಾರ ಅನುಸೂಯಮ್ಮಳ ಅತ್ಯಾಚಾರ ವಿರೋಧಿಸಿದ ತಂದೆ ಶೇಷಗಿರಿಯಪ್ಪನ ಕೊಲೆ ಮಾಡಿ ಸಟ್ಟುಹಾಕ್ಕಿದ್ದನ್ನು ಖಂಡಿಸಿ ಹಲವಾರು ಹೋರಾಟಗಳನ್ನು ರೂಪಿಸಿ ನೊಂದ ದೌರ್ಜನ್ಯ ಕೊಳಗಾದ ವರಿಗೆ ದನಿಯಾಗಿ ಭೂ ಮಾಲೀಕರು ಬಂಡವಾಳ ಶಾಹಿಗಳಿಗೆ ಹಾಗೂ ಆಳುವ ಸರ್ಕಾರಗಳಿಗೆ ಸಿಂಹ ಸ್ವಪ್ನವಾಗಿ ಕಾಡಿ ದಲಿತಪರ ಕಾನೂನುಗಳು ಜಾರಿಯಾಗಲು ಕಾರಣಕರ್ತರಾದರು ಪ್ರೋ ಬಿ. ಕೃಷ್ಣಪ್ಪ ಎಂದು ಹೇಳಿದರು.ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ಸಿಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಬಿ ಕೃಷ್ಣಪ್ಪ ಬಣ ರಾಜ್ಯ ಸಮಿತಿ ಮನವಿ ಮಾಡುತ್ತದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಗವಿಸಿದ್ದಪ್ಪ ಕುಣಿಕೇರಿ, ಮಾರಕಂಡೆಪ್ಪ ಹಲಗಿ,ಶರಣಪ್ಪ ಓಜನಹಳ್ಳಿ, ಶಿವು, ಮಂಜುನಾಥ್ ನಡವಲಮನಿ, ರಮೇಶ ಕೇರಹಳ್ಳಿ, ನಾಗರಾಜ್ ಹುಲಿಕೆರಿ, ಇನ್ನು ಅನೇಕರು ಉಪಸ್ಥಿತರಿದ್ದರು.