ಇಂದು ‘ಬಾಗಿನಾಡು’ ಗ್ರಂಥ ಲೋಕಾರೆ್ಣ
Today, the book 'Baginadu' is a world-famous work
ಲೋಕದರ್ಶನ ವರದಿ
ಹಾರೂಗೇರಿ, 06 : ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ರಾಯಬಾಗ ಆಶ್ರಯದಲ್ಲಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ, ಲೇಖಕಿ ಡಾ.ರತ್ನಾ ಬಾಳಪ್ಪನವರ ಅವರ ಬಾಗಿನಾಡು ಗ್ರಂಥಲೋಕಾರೆ್ಣ ಸಮಾರಂಭ ಮಾ.7ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಶರಣ ವಿಚಾರ ವಾಹಿನಿ ಅಧ್ಯಕ್ಷ ಆಯ್.ಆರ್.ಮಠಪತಿ ಸಾನಿಧ್ಯ ಹಾಗೂ ರಾಯಬಾಗ ತಾಲೂಕು ಕಸಾಪ ಅಧ್ಯಕ್ಷ ಈರನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಚಿಂತಕ ಡಿ.ಎಸ್.ನಾಯಕ ಅವರು ಬಾಗಿನಾಡು ಗ್ರಂಥವನ್ನು ಲೋಕಾರೆ್ಣಗೊಳಿಸಲಿದ್ದಾರೆ. ಕಸಾಪ ಕಾರ್ಯದರ್ಶಿ ಶಂಕರ ಕ್ಯಾಸ್ತಿ ಗ್ರಂಥವನ್ನು ಪರಿಚಯಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ, ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಸಾಹಿತಿ ಶಿವಾನಂದ ಬೆಳಕೂಡ, ಲೇಖಕ ಬಾಲಕೃಷ್ಣ ಜಂಬಗಿ, ಆರ್.ಎಂ.ಗಸ್ತಿ, ಜಿನ್ನಪ್ಪ ಅಸ್ಕಿ, ಮಕ್ಕಳ ಸಾಹಿತಿ ಎಲ್.ಎಸ್.ಚೌರಿ, ಜೆ.ಎ.ನಿಲಜಗಿ, ಡಾ.ಆರ್.ಎಸ್.ಕಾಗವಾಡೆ ಆಗಮಿಸಲಿರುವರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 