ಇಂದು ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ದಾಸರಾಗಿದ್ದಾರೆ

 ಇಂದು ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ದಾಸರಾಗಿದ್ದಾರೆ Today, students are slaves to technologies like artificial intelligence

                    ಧಾರವಾಡ 06: ಕೃತಕ ಬುದ್ಧಿಮತ್ತೆಯ ದಾಸರಾದರೆ ಅಪಾಯ- ಪ್ರೊ. ವಸುದೇವ ಪರ್ವತಿಡಿಜಿಟಲ್ ಪ್ರಪಂಚದ ಬೆಳವಣಿಗೆಯಿಂದಾಗಿ ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನಗಳಿವೆ. ಇಂದು ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ದಾಸರಾಗಿದ್ದಾರೆ. ಯಾವುದೇ ತಂತ್ರಜ್ಞಾನಗಳು ಮಾನವ ಲೋಕಕ್ಕೆ ವರದಾನವಾಗಬೇಕೇ ಹೊರತು ಅದರ ದುರ್ಬಳಕೆ ಸಲ್ಲದು. ವಿದ್ಯಾರ್ಥಿಗಳು ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಂಡಲ್ಲಿ ಜೀವನದಲ್ಲಿ ಸಫಲತೆ ಕಾಣಬಹುದು ಧಾರವಾಡದ ಐ.ಐ.ಐ.ಟಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೊ.ವಸುದೇವ ಪರ್ವತಿ ಹೇಳಿದರು.

                        ಅವರು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಸಾಯಿ ಶಿಕ್ಷಣ ಸಂಸ್ಥೆಯ   ಸಾಯಿ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಏರಿ​‍್ಡಸಿದ್ದ ಎಐ ತಂತ್ರಜ್ಞಾನದ ಇತ್ತೀಚಿನ ಪ್ರಗತಿಗಳು ಎಂಬ ವಿಷಯದ  ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಲಿಕೆಗೆ ಪೂರಕವಾದ ವಾತಾವರಣಕ್ಕೆ ಎಐ ತಂತ್ರಜ್ಞಾನದ ಸೃಷ್ಟಿಸಿಕೊಳ್ಳಿ, ಅದರ ಋಣಾತ್ಮಕ ಆಯಾಮಗಳನ್ನು ಬಿಟ್ಟು ಧನಾತ್ಮಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.ಉದ್ಘಾಟನೆ ಮಾಡಿದ ನಿವೃತ್ತ ಬ್ಯಾಂಕ ಅಧಿಕಾರಿ ಚಂದ್ರಕಾಂತ ಪೂಜಾರಿ ಮಾತನಾಡಿ ಕೇವಲ ಓದು ಮಾತ್ರ ಜೀವನಕ್ಕೆ ಸಾಲದು. ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯ, ನೈತಿಕ ಶಿಕ್ಷಣ, ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಇವು ವಿದ್ಯಾರ್ಥಿಗಳಲ್ಲಿ ಮನೋ ಸ್ಥೈರ್ಯ ಬೆಳೆಸುತ್ತದೆ, ಮಾತ್ರವಲ್ಲದೆ ಜೀವನದಲ್ಲಿಮುಂದೊಂದು ದಿನ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ವೀಣಾ ಬಿರಾದಾರ ಮಾತನಾಡಿ ಕಲಿಕೆಯ ಪ್ರಾಮುಖ್ಯತೆ ಮತ್ತು ಪ್ರಸ್ತುತ ಶೈಕ್ಷಣಿಕ ಆಯ್ಕೆಗಳ ಮಿತಿಗಳಿಂದಾಗಿ, ಶಿಕ್ಷಣವು ಕೃತಕ ಬುದ್ಧಿಮತ್ತೆ (ಂಋ) ಹೆಚ್ಚಿನ ಪರಿಣಾಮ ಬೀರುವ ಕ್ಷೇತ್ರವಾಗಿದೆ.. ಇದಕ್ಕೆ ಕಡಿಮೆ ಮಾನವ ಶ್ರಮ ಬೇಕಾಗುತ್ತದೆ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ. 

                     ಆದಾಗ್ಯೂ, ನಾವು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾದಾಗ ನಾವು ನಿಜವಾಗಿಯೂ ಕಲಿಯುತ್ತಿದ್ದೇವೆಯೇ ಎಂಬ ಬಗ್ಗೆ ಕಳವಳವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಅಭಿಯಂತರರಾದ ಸಂತೋಷ ಮೇಸ್ರ್ತಿ, ಸರ್ವಾಧ್ಯಕ್ಷರಾದ ಸುನೀಲ ಬಾಗೇವಾಡಿ, ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ ಮಾತನಾಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮೌನೇಶ ಬಡಿಗೇರ ನಿರೂಪಿಸಿದರು. ಕು. ಉಷಾ ಹಿರೇಮಠ ಮತ್ತು ಕು. ಸೃಷ್ಟಿ ಸವಣೂರ ಪ್ರಾರ್ಥಿಸಿದರು. ಸಮಾವೇಶದ ಸಂಚಾಲಕರಾದ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಬೇಟಗೇರಿ ವಂದಿಸಿದರು.ಈ ಕಾರ್ಯಕ್ರಮದಲ್ಲಿ ಶ್ರೀಮತಿ ಅನ್ನಪೂರ್ಣ ಸಿ ಪೂಜಾರಿ, ಶ್ರೀಮತಿ ಪ್ರಮೀಳಾ ಜಕ್ಕಣ್ಣವರ, ಶ್ರೀಮತಿ ನೇಹಾ ಬುದ್ನಿ, ಡಾ ದೀಕ್ಷಾ ಪೂಜಾರಿ ಜ್ಯೋತಿ ಗಡೆಣ್ಣವರ, ಬೋದಕೇತರ ಸಿಬ್ಬಂದಿಗಳಾದ ವೀರೇಶ ಅರ್ಕಸಾಲಿ, ಅರ್ಚನಾ ಅಳಗವಾಡಿ ಹಾಗೂ ಕಾಲೇಜಿನ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು ಇದ್ದರು.