ಇಂದು ಮುದೇನೂರು ಸಂಸ್ಥಾನ ಹಿರೇಮಠದಲ್ಲಿ ಧರ್ಮ ಜಾಗೃತಿ ಸಮಾವೇಶ. ಪಂಚಪೀಠಾಧೀಶ್ವರರ ಆಗಮನ
Today, a religious awareness conference is being held at the Mudenur Sansthan Hiremath. Arrival of
ರಾಣೇಬೆನ್ನೂರು 28 : ಹಾವೇರಿ ಜಿಲ್ಲೆ ಮತ್ತು ರಾಣಿಬೆನ್ನೂರು ತಾಲೂಕು ಸಾಧು, ಸಂತರ, ಧರ್ಮಜ್ಞಾನಿಗಳ ಮಠಪೀಠಗಳಿಗೆ ತಮ್ಮದೇ ಆದ ಧಾರ್ಮಿಕ ಕೊಡುಗೆಯನ್ನು ನೀಡಿರುವ ತವರೂರು. ತಾಲೂಕಿನ ಮುದೇನೂರು ಕ್ಷೇತ್ರ ದೇಶಕ್ಕೆ ಎರಡು ಜಗದ್ಗುರುಗಳನ್ನು ಕೊಟ್ಟ ಗ್ರಾಮವಾಗಿದೆ ಅಂತಹ ಗ್ರಾಮದಲ್ಲಿ ಇಂದಿನ ಉಜ್ಜಯನಿ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ಅವರ ಮೂಲಾಶ್ರಮದ ವೇ.ಮೋ: ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರ ಶಿವಗಣಾರಾಧನೆ ಮತ್ತು ಧರ್ಮ ಜಾಗೃತಿ ಧಾರ್ಮಿಕ ಸಮಾರಂಭವು ಮುದೇನೂರು ಗ್ರಾಮದ ಹಿರೇಮದ ಆವರಣದಲ್ಲಿ ನವೆಂಬರ್ 29, 2025 ರಂದು ಶನಿವಾರ ಜರುಗಲಿದೆ ಎಂದು ದಿಂಡದಹಳ್ಳಿ ಹಿರೇಮಠದ ಪಶುಪತಿ ಶಿವಾಚಾರ್ಯರು ಹೇಳಿದರು. ಅವರು ಇಲ್ಲಿನ ಮಠದ ಭವನದಲ್ಲಿ ಕರೆಯಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಂದು ನಡೆಯುವ ಧರ್ಮ ಜಾಗೃತಿ ಸಮಾವೇಶದಲ್ಲಿ ರಂಭಾಪುರಿ ಜಗದ್ಗುರು ರೇಣುಕ ಡಾ. ವೀರ ಸೋಮೇಶ್ವರ ರಾಜ ದೇಶ ಕೇಂದ್ರ ಶಿವಾಚಾರ್ಯರು ಉಜ್ಜಯನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು, ಮತ್ತು ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು. ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಮಠಾಧೀಶರ ಧರ್ಮ ಪರ ಪರಿಷತ್ ನ ಪೂಜ್ಯರು ಪಾಲ್ಗೊಳ್ಳುವರು. ಸಾರಂಗಮಠ ಸಿಂದಗಿ ಅಧ್ಯಕ್ಷರಾದ ಷ.ಬ್ರ. ಡಾ. ಪ್ರಭು ಸಾರಂಗ ದೇವ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ನಾಡಿನ ಅನೇಕ ಗಣ್ಯಮಾನ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವಿ.ಎಸ್.ಹಿರೇಮಠ, ಪರಮೇಶ್ ಮಠದ, ಜಗದೀಶ್ ಮಳಿಮಠ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 