ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ: ನಾಯ್ಕ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 29: ಧಾಮರ್ಿಕ ಆಚರಣೆಗಳಲ್ಲಿ ಗ್ರಾಮೀಣ ಭಾಗದ ಜನರು ಬಡವರ ಕಲ್ಯಾಣಕ್ಕಾಗಿ ಸಾಮೂಹಿಕ ವಿವಾಹಗಳನ್ನು ಪ್ರತಿ ವರ್ಷ ಆಯೋಜಿಸಿ ಬಡವರಿಗೆ ಆಥರ್ಿಕ ಹೊರೆಯನ್ನು ತಗ್ಗಿ ಸುವುದರ ಜೊತೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮುಜರಾಯಿ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು. 

ತಾಲೂಕಿನ ಏಣಿಗಿ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಏರ್ಪಡಿಸಿದ್ದ ಶ್ರೀದುರ್ಗಮ್ಮ ದೇವಿ ದೇಗುಲ ಜೀಣರ್ೋದ್ಧಾರ, ಶ್ರೀಬೀರಲಿಂಗೇಶ್ವರ ದೇಗುಲದ ಅಡಿಗಲ್ಲು ಸಮಾರಂಭ ಮತ್ತು ಶ್ರೀಕಲ್ಲೇಶ್ವರ ದೇಗುಲ ಉದ್ಘಾಟನೆ ಸಮಾರಂಭ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಹಜವಾಗಿ ಖಾಸಗಿ ವಿವಾಹ ಕಾರ್ಯಕ್ರಮಗಳನ್ನು ನಡೆಸಲು ಜನ ದುಬಾರಿ ವೆಚ್ಚ ವ್ಯಯಿಸಿ ಪ್ರತಿಷ್ಠೆಯನ್ನು ಪ್ರದರ್ಶನ ಮಾಡುತ್ತಾರೆ. ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ಸಂಬಂಧಿಕರು ಹಿತೈಷಿಗಳು ಭಾಗವಹಿಸಿ ವಧುವರರಿಗೆ ಆಶರ್ೀವಾದ ಮಾಡಬಹುದು. ಆದರೆ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವ ಎಲ್ಲಾ ವಧುವರರಿಗೆ ಪೂಜ್ಯರ ಆಶರ್ಿವಾದ ಸಾವಿರಾರು ಜನರ ಆಶರ್ಿವಾದ ದೊರಕಲಿದೆ. ನವಜೋಡಿಗಳು ವೈವಾಹಿಕ ಜೀವನದ ಸಿಹಿಕಹಿಗಳನ್ನು ಸಮಾನಾಂತರವಾಗಿ ಸ್ವೀಕರಿಸಿ ಸಂಬಂಧಗಳ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. 

ಹಂಪಸಾಗರದ ನವಲಿ ಹಿರೇಮಠದ ಶಿವಲಿಂಗರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.  ಇದಕ್ಕೂ ಮುನ್ನಾ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಬೀರಲಿಂಗೇಶ್ವರ ದೇಗುಲಕ್ಕೆ ಅಡಿಗಲ್ಲು ಸ್ಥಾಪಿಸಲು ಭೂಮಿಪೂಜೆ ನೆರವೇರಿಸಿದರು. 

ಈ ವೇಳೆ ತಾಪಂ ಅಧ್ಯಕ್ಷೆ ಕೆ.ನಾಗಮ್ಮ, ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ, ತಾಪಂ ಸದಸ್ಯೆ ರಮೀಜಾಭೀ, ಎಪಿಎಂಸಿ ಅಧ್ಯಕ್ಷ ದೊಡ್ಡಬಸಪ್ಪ, ಗ್ರಾಪಂ ಅಧ್ಯಕ್ಷೆ ಹಾಲಮ್ಮ, ಮುಖಂಡರಾದ ಬಸವನಗೌಡ, ಕರೆಂಗಿ ಸುಭಾಷ್, ಏಣಿಗಿ ಪಕ್ಕಿರಸಾಬ್, ಬಿಡಿ ಕೊಟ್ರೇಶಪ್ಪ, ಬಿ.ತಿಪ್ಪಮ್ಮ ಅಶೋಕ ಇತರರಿದ್ದರು.