ಟಿಪ್ಪು ಬ್ರಿಟಿಷರ ವಿರುದ್ಧ ಅಪ್ರತಿಮ ಶೂರ: ಘೋಟ್ನೇಕರ

ಲೋಕದರ್ಶನ ವರದಿ

ಹಳಿಯಾಳ 10: ಬ್ರಿಟಿಷರ ವಿರುದ್ಧ ತನ್ನ ಸರ್ವಸ್ವವನ್ನು ಪಣಕ್ಕಿಟ್ಟು ಹೋರಾಡಿದ ಅಪ್ರತಿಮ ಶೂರ ಟಿಪ್ಪುಸುಲ್ತಾನ ಮಹಾನ್ ಅರಸ ಎಂದು ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ಹೇಳಿದರು.

ಹಳಿಯಾಳ ತಾಲೂಕಾಡಳಿತ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜಗಜೀವನರಾಮ ಭವನದಲ್ಲಿ ಏರ್ಪಡಿಸಲಾಗಿದ್ದ ಟಿಪ್ಪುಸುಲ್ತಾನ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತಿಹಾಸವನ್ನು ಅವಲೋಕಿಸಿ ನೋಡಿದರೆ ಟಿಪ್ಪುಸುಲ್ತಾನನ ಹಲವಾರು ಸಾಧನೆಗಳನ್ನು ಗಮನಿಸಬಹುದಾಗಿದೆ. ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಕೇವಲ ಮೂರು ವರ್ಷ ಹುಲಿಯಂತೆ ಜೀವಿಸಬೇಕು ಎಂದು ಹೇಳಿದ ಅವರ ಘೋಷವಾಕ್ಯವು ಎಲ್ಲರಿಗೂ ಪ್ರೇರಣಾದಾಯಿಯಾಗಿದೆ. ಯುದ್ಧ ಕೌಶಲ್ಯ, ಫಿರಂಗಿಗಳ ಬಳಕೆಯ ಮೂಲಕ ಬ್ರಿಟಿಷ್ ಸಾಮ್ರಾಜ್ಯವನ್ನು ನಲುಗಿಸಿರುವುದು ತನ್ಮೂಲಕ ನಮ್ಮ ದೇಶವನ್ನು ಗುಲಾಮ ರಾಷ್ಟ್ರವನ್ನಾಗಿಸಿದ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದನು ಎಂದರು.

ಕಂದಾಯ ಸಚಿವ ಆರ್.ವಿ. ದೇಶಪಾಂಡೆಯವರು ರವಾನಿಸಿದ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚಿಸಲಾಯಿತು. ಬ್ರಿಟಿಷರ ವಿರುದ್ಧ ಕೆಚ್ಚಿನಿಂದ ಹೋರಾಡಿದ ಟಿಪ್ಪುವು ದೇಶಕ್ಕೆ ಸ್ವತಂತ್ರ ಗಳಿಸಿಕೊಡುವುದನ್ನು ದೊಡ್ಡ ಕನಸಾಗಿ ಕಟ್ಟಿಕೊಂಡಿದ್ದನು ಎಂದು  ಸಂದೇಶದಲ್ಲಿ ತಿಳಿಸಿದ್ದಾರೆ.

ಸಮಾರಂಭದ ವೇದಿಕೆಯಲ್ಲಿ ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಅಬ್ದುಲಹೈ ಪಟೇಲ್, ಮುಫ್ತಿ ಫಯಾಜ್ ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಮಹೇಶ್ರೀ ಮಿಶ್ಯಾಳಿ, ಕೃಷ್ಣಾ ಪಾಟೀಲ, ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ಧಿ, ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಖಯಾಂ ಮುಗದ, ಉಪನ್ಯಾಸಕರಾಗಿ ಆಗಮಿಸಿದ್ದ ನರಗುಂದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕ ಇಬ್ರಾಹಿಂ ಸೌದಾಗರ, ಜಯಂತೋತ್ಸವ ಸಮಿತಿಯ ಅಧ್ಯಕ್ಷ ತಹಶೀಲ್ದಾರ ವಿದ್ಯಾಧರ ಗುಳಗುಳಿ, ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಮಹೇಶ ಕುರಿಯವರ, ಡಿವೈಎಸ್ಪಿ ಮೋಹನ ಪ್ರಸಾದ, ಅಂಜುಮನ್ ಸಂಸ್ಥೆಯ ಆಡಳಿತಾಧಿಕಾರಿ ಆದಂಸಾಬ ದೇಸಾಯಿ, ಮುಖಂಡರಾದ ಗುಲಾಬಶ್ಯಾ ಲತೀಫನವರ, ಅಲೀಂ ಬಸರಿಕಟ್ಟಿ, ಅಬ್ದುಲರಹೀಮ ದಲಾಲ, ಪುರಸಭೆ ಸದಸ್ಯರಾದ ಅಝರ ಬಸರಿಕಟ್ಟಿ, ಪ್ರಭಾಕರ ಗಜಾಕೋಶ, ಸುವಣರ್ಾ ಮಾದರ ಮೊದಲಾದವರಿದ್ದರು.