ಬೀಳಗಿ ತಾಲೂಕಿನ - ಕುಂದರಗಿಯಲ್ಲಿ ತೊಟ್ಟಿಲೋತ್ಸವ ಸಂಭ್ರಮ

ಬೀಳಗಿ ತಾಲೂಕಿನ - ಕುಂದರಗಿಯಲ್ಲಿ ತೊಟ್ಟಿಲೋತ್ಸವ ಸಂಭ್ರಮ Thottilotsava celebration in Kundaragi - Bilagi taluk

ಬೀಳಗಿ 02 : ಕುಂದರಗಿ-ಗ್ರಾಮದ ಆರಾಧ್ಯ ದೇವರಾದ ಸಂಜೀವ ಮುಖ್ಯ ಪ್ರಾಣದೇವರು (ಮಾರುತೇಶ್ವರ ದೇವರು ) ದೇವಸ್ಥಾನದಲ್ಲಿ  ಮತ್ತು ಯಾದವಾಡ ಓಣಿಯಲ್ಲಿರುವ ಶ್ರೀಮನ್ನಾರಾಯಣ ದೇವಸ್ಥಾನದಲ್ಲಿ ವಿಪ್ರ ಸಮಾಜ ಬಾಂಧವರು ಹನುಮ ಜನ್ಮದಿನೋತ್ಸವನ್ನು ಅದ್ದೂರಿಯಿಂದ ಆಚರಿಸಲಾಯಿತು. ಮುಂಜಾನೆ ದೇವಸ್ಥಾನದಲ್ಲಿ ಶ್ರೀ ಮನ್ನಾರಾಯಣ ದೇವರಿಗೆ, ಬ್ಯಾಟಿ ತಿಮ್ಮಪ್ಪ ದೇವರಿಗೆ ಮತ್ತು ಹನುಮಂತ ದೇವರಿಗೆ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಎಲೆ ಪೂಜೆ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿತು,

ಸಮಾಜದ ಹಿರಿಯರಾದ ಪ್ರಾಣೇಶಾಚಾರ್ಯ ಕುಂದರಗಿ, ಚಂದ್ರಕಾಂತಭಟ್ಟ ಜೋಶಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ದಲ್ಲಿ ನಡೆಯಿತು,   ಸಾನ್ವಿ ಹರ್ಷಾ ದಂಪತಿಯಿಂದ ತೊಟ್ಟಿಲೋತ್ಸವದ ಪೂಜಾ ಕಾರ್ಯಕ್ರಮ ನೆರವೇರಿತು. ನಂತರ ಹನುಮಂತ ದೇವರ ತೊಟ್ಟಿಲು ಹಾಕುವ ಕಾರ್ಯಕ್ರಮ  ಸಂಪ್ರದಾಯದಂತೆ ಸಾಗಿ ಬಂದಿತು, ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ ನಡೆಯಿತು, ಶ್ರೀಮನ್ನಾರಾಯಣ ದೇವಸ್ಥಾನ ಮತ್ತು ಮಾರುತೇಶ್ವರ  ದೇವಸ್ಥಾನದಲ್ಲಿ ಬಂದ ಭಕ್ತರಿಗೆ ಕೋಸಂಬರಿ ಪಾನಕ ವಿತರಣೆ ಮಾಡಲಾಯಿತು. ಮಧ್ಯಾಹ್ನ ದೇವರಿಗೆ ನೈವೇದ್ಯ ಮತ್ತು ಭಕ್ತರಿಗೆ ಮಹಾಪ್ರಸಾದ ಕಾರ್ಯಕ್ರಮ ಜರಗಿ ಬಂದಿತ್ತು, ಸಂಜೆ ಶ್ರೀಮನ್ನಾರಾಯಣ ದೇವಸ್ಥಾನದಲ್ಲಿ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. 

ವಿಪ್ರ ಸಮುದಾಯದವರು ಸುರೇಶರಾವ್ ಯಾದವಾಡ ಚಂದ್ರಕಾಂತ ಜೋಶಿ ನಾರಾಯಣ ಜೋಶಿ ರಾಘವೇಂದ್ರ ಜೋಶಿ ಚಿದಂಬರ ಶತಪತಿ ಭೀಮರಾವ ದೇಶಪಾಂಡೆ ಭೀಮರಾವ ಕುಲಕರ್ಣಿ ಚಿದಂಬರ ಕುಲಕರ್ಣಿ ಪಾದ ಜೋಶಿ ಶ್ರೀಪಾದ ಯಾದವಾಡ ಶ್ರವಣ ಜೋಶಿ ಸಾಗರ ಶತಪತಿ ಪ್ರಬಂಜನ ಯಾದವಾಡ ಶಶಿಕಲಾ ಪ್ರಾ ಕುಂದರಗಿ ಶ್ರೇಯಾ ಕುಂದರಗಿ ವಿಜಯಲಕ್ಷ್ಮಿ ಚಂ ಜೋಶಿ ಗೀತಾ ಜೋಶಿ  ವಿಜಯಲಕ್ಷ್ಮಿ ರಾ ಜೋಶಿ ಶಾರದಾ ಜೋಶಿ ವೇದಾ ಗುಡಿ ಶ್ರೀನಿಧಿ ಯಾದವಾಡ ಮೇಘಾ ಶತಪತಿ ಮುಂತಾದವರು ಪಾಲ್ಗೊಂಡಿದ್ದರು.