ಕಮಿಷನ್ ವ್ಯವಹಾರ ಗೊತ್ತಿದ್ದವರು ಬಾಯಲ್ಲಿ ಇನ್ನೇನು ಬರಲು ಸಾಧ್ಯ ?

ಕಮಿಷನ್ ವ್ಯವಹಾರ ಗೊತ್ತಿದ್ದವರು ಬಾಯಲ್ಲಿ ಇನ್ನೇನು ಬರಲು ಸಾಧ್ಯ ? 

ಕಾರವಾರ : ಆನಂದ ಅಸ್ನೋಟಿಕರ್ ಶಾಸಕ, ಸಚಿವರಾಗಿದ್ದಾಗ ಕಮಿಷನ್ ವ್ಯವಹಾರ ಮಾಡಿ ಗೊತ್ತಿರಬೇಕು. ಹಾಗಾಗಿ ಅವರು ಶೇ.20 ಕಮಿಷನ್ ಬಗ್ಗೆ ಅಪಾದಿಸಿದ್ದಾರೆ. ತಾವು ಮಾಡಿದ ದಂಧೆಯನ್ನು ಇನ್ನೊಬ್ಬರಲ್ಲಿ ಸಹ ಕಾಣುವುದು ಅಪಹಾಸ್ಯ. ನಮ್ಮಲ್ಲಿ ಅಂಥ ವ್ಯವಹಾರವಿಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಮಾಡಿದ ಅಪಾದನೆಯನ್ನು ಶಾಸಕಿ ರೂಪಾಲಿ ನಾಯ್ಕ ತಳ್ಳಿ ಹಾಕಿದರು.

ಕಾರವಾರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವರು ಆಧಾರರಹಿತ ಅಪಾದನೆ ಮಾಡಿದ್ದಾರೆ. ಅದರ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ನಾವು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರ ಯೋಚಿಸುವೆ ಎಂದು ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ನುಡಿದರು. 

ರಾಕ್ ಗಾರ್ಡನ್ ನಿಮರ್ಾಣ, ನಿರ್ವಹಣೆಯ ಹಗರಣದ ಬಗ್ಗೆ ಸುದ್ದಿಗಾರರು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕಿ ಜಿಲ್ಲಾಧಿಕಾರಿ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ರಾಕ್ ಗಾರ್ಡನ್ ಬಗ್ಗೆ ಕೇಳಿ ಬರುತ್ತಿರುವ ಅಪಾದನೆ ಬಗ್ಗೆ ಗಮನಿಸಲು ಸೂಚಿಸಿದ್ದೆ. ಅಲ್ಲದೇ ಈ ಸಂಬಂಧ ಸಕರ್ಾರಕ್ಕೆ ದೂರು ನೀಡಿರುವೆ. ತನಿಖೆ ನಡೆಯಲಿದೆ. ತಪ್ಪು ಮಾಡಿದವರು ಅನುಭವಿಸಲಿದ್ದಾರೆ. ಅಲ್ಲದೇ ಕಾರವಾರ ನಗರಸಭೆಯಲ್ಲಿ ಕೆಲಸಗಳಾಗುತ್ತಿಲ್ಲ ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳ ಅಧಿಕಾರ ಸ್ವೀಕಾರ ಮತ್ತು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಕರ್ಾರದ ಹೊಸ ಮೀಸಲಾತಿ ನಿಗದಿ ಆದ ಕೂಡಲೇ ನಡೆಯಲಿದೆ. ಅಲ್ಲಿ ಅಭಿವೃದ್ಧಿ ಕೆಲಸಗಳು ನಂತರ ಸುಗಮವಾಗಲಿವೆ. ಅಲ್ಲಿ ಸಹ ಕೆಲ ದೂರುಗಳು ಬಂದಿವೆ. ತಪ್ಪಿತಸ್ಥರಿಗೆ ವಗರ್ಾವಣೆ ಕಾದಿದೆ, ಕಾದು ನೋಡಿ ಎಂದರು. ಅವರ ಜೊತೆ ಬಿಜೆಪಿ ವಕ್ತಾರ ರಾಜೇಶ್ ನಾಯಕ್, ನಿತಿನ್ ಪಿಕಳೆ, ಅರುಣ್ ನಾಡಕಣರ್ಿ, ನಯನಾ ನೀಲಾವರ, ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರು, ಶಾಸಕರು ಬೆಂಬಲಿಗರು ಪತ್ರಿಕಾಗೋಷ್ಠಿಯಲ್ಲಿದ್ದರು.