ನುಡಿ ನಡೆಯಲ್ಲಿ ಸಾಮರಸ್ಯವಿರುವವರು ನಿಜವಾದ ಶರಣರು- ಶ್ರೀಗಳು

ನುಡಿ ನಡೆಯಲ್ಲಿ ಸಾಮರಸ್ಯವಿರುವವರು ನಿಜವಾದ ಶರಣರು- ಶ್ರೀಗಳು Those who are harmonious in speech and action are true devotees - Sri

ನುಡಿ ನಡೆಯಲ್ಲಿ ಸಾಮರಸ್ಯವಿರುವವರು ನಿಜವಾದ ಶರಣರು- ಶ್ರೀಗಳು 

 ರಾಣೇಬೆನ್ನೂರು 06:  ಮನೆಯೊಳಗೆ ಮನೆಯೊಡೆಯನಿದ್ದಾನೊಇಲ್ಲವೊ, ಹೊಸ್ತಿಲಲ್ಲಿ ಹುಲ್ಲು ಹುಟ್ಟಿಮನೆಯೊಳಗೆ ರಜ ತುಂಬಿಮನೆಯೊಳಗೆ ಮನೆಯೊಡೆಯನಿದ್ದಾನೊಇಲ್ಲವೊ, ತನುವಿನಲ್ಲಿ ಹುಸಿ ತುಂಬಿಮನದೊಳಗೆ ವಿಷಯ ತುಂಬಿ ಮನದೊಳಗೆ ಮನದೊಡೆಯನಿದ್ದಾನೊಇಲ್ಲವೊ ಇಲ್ಲಕೂಡಲಸಂಗಮದೇವಾ. ಎನ್ನುವಂತೆ ಮನದಲ್ಲಿ ಸಕಾರಾತ್ಮಕ ವಿಚಾರಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿರುವವನು ಮಾತ್ರ ಸಮಾಜದಲ್ಲಿಯೂ ಕೂಡ ಸಕಾರಾತ್ಮಕತೆಯನ್ನು ತರಬಲ್ಲರು ಎಂದು ಲಿಂಗನಾಯಕನಹಳ್ಳಿ ಚನ್ನವೀರ  ಮಹಾಶಿವಯೋಗಿಗಳವರು ನುಡಿದರು. ಅವರು, ಇಲ್ಲಿನ ಈಶ್ವರ ನಗರದ ಶಿವಯೋಗಿಗಳವರ ಗುರುಭವನದಲ್ಲಿ ನಡೆದ "ಮನೆಯಲ್ಲಿ ಮಹಾಮನೆ" ಮತ್ತು "ಚಿಂತನ ಮಂಥನ" ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ  ಮಾತನಾಡಿದರು. ಶರಣರು ನುಡಿದಂತೆ  ಸಮಾನ ಮನಸ್ಸುಗಳನ್ನು ಒಂದೆಡೆ ಕೂಡಿಸುವುದೇ ಕೂಡಲಸಂಗಮವಾಗಿದೆ. ಕಾಯಕ ಮಾಡುತ್ತಾ ಕಾಯಕದ ಚಿಂತನ ಮಂಥನವನ್ನು ಮಾಡಬೇಕು. ಕೈತುಂಬ ಕೆಲಸ ಮನಸ್ಸಿನ ತುಂಬಾ ಇತರರ ಬಗೆಗಿನ ಪ್ರೀತಿ ಜೀವನವನ್ನು ಸುಗಮಗೊಳಿಸುವುದು ನಿಜವಾದ ಮಾನವೀಯ ಧರ್ಮವಾಗಿದೆ ಎಂದು ಶ್ರೀಗಳು ನುಡಿದರು.  

ಕಾರ್ಯಕ್ರಮದ ಯಶಸ್ವಿಗೆ ಕದಳಿ ಮಹಿಳಾ ವೇದಿಕೆ,   ದಾನೇಶ್ವರಿ ಅಕ್ಕನ ಬಳಗ,  ಪೂರ್ಣಿಮಾ ಶಿವಾನಂದ ಬೆನ್ನೂರು ಪರಿವಾರದವರು ಸಹಯೋಗ ನೀಡಿದ್ದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷ  ಸುನಂದಮ್ಮ ಶಿ.ತಿಳವಳ್ಳಿ,  ದಾನೇಶ್ವರಿ ಅಕ್ಕನ ಬಳಗ ಗಾಯತ್ರಮ್ಮ ಚಂ.ಕುರುವತ್ತಿ , ಶರಣಸಾಹಿತ್ಯ ಪರಿಷತ್ತು  ಅಧ್ಯಕ್ಷ ರಾಜೇಶ್ವರಿ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ನಗರಸಭಾ ಸದಸ್ಯರಾದ ಮಂಜುಳಾ ಹತ್ತಿ ಮತ್ತಿತರರು ಉಪಸ್ಥಿತರಿದ್ದರು.