ಇದೇನು ಸುವರ್ಣ ಬಳ್ಳಾರಿಯಾ ಗುಂಡಿಗಳ ಬಳ್ಳಾರಿಯಾರಸ್ತೆಗಳ ಗುಂಡಿ ಮುಚ್ಚಲು ಆಗ್ರಹಿಸಿ ಕರವೇ ಪ್ರತಿಭಟನೆ
This is the golden Bellaria potholes, a protest demanding the closure of potholes on Bellaria roads
ಬಳ್ಳಾರಿ 23: ನಗರದಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಆಗ್ರಹಿಸಿ ಇಂದು ಇಲ್ಲಿ ರಸ್ತೆಯಲ್ಲಿನ ಕುಣಿಗಳಲ್ಲಿ ಗಿಡಗಳನ್ನು ಇಡುವ ಮೂಲಕ ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು, ಕಾರ್ಯಕ್ರತರು ಪ್ರತಿಭಟನೆ ನಡೆಸಿ ಕೂಡಲೇ ಕುಣಿಗಳನ್ನು ಮುಚ್ಚಲು ಮುಂದಾಗ ಬೇಕೆಂದು ಪಾಲಿಕೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.ಇದೇನು ಸುವರ್ಣ ಬಳ್ಳಾರಿಯಾ ಇಲ್ಲಾ ಗುಂಡಿಗಳ ಬಳ್ಳಾರಿಯಾ ಎಂದು ಘೋಷಣೆ ಕೂಗುತ್ತ. ನಗರದ ನಾರಾಯಣ ರಾವ್ ಪಾರ್ಕ್ ನಿಂದ ಗಡಗಿ ಚೆನ್ನಪ್ಪ ಸರ್ಕಲ್ ಗೆ ಆಗಮಿಸಿ ಪ್ರತಿಭಟನೆ ನಡೆಸಲಾಯ್ತು.ಜನರು ಮತ್ತು ವಾಹನಗಳು ನೆಮ್ಮದಿಯಾಗಿ ಓಡಾಡಬೇಕೆಂದರೆ ರಸ್ತೆಗಳು ಉತ್ತಮವಾಗಿರಬೇಕು.
ಉತ್ತಮ ರಸ್ತೆಗಳನ್ನು ಹೊಂದಿದ ನಗರ ಅಭಿವೃದ್ದಿಯ ಸಂಕೇತವಾಗಿರುತ್ತದೆ. ಆದರೆ ಗಣಿನಾಡು ನಮ್ಮ ಬಳ್ಳಾರಿ ಇದಕ್ಕೆ ಅಪವಾದ ಎನ್ನುವಂತಿದೆ.ಒಂದಡೆ ಜನಪ್ರತಿನಿಗಳು, ಶಾಸಕರು, ಪಾಲಿಕೆ ಸದಸ್ಯರು, ಸಂಸದರು ಬಳ್ಳಾರಿಯನ್ನು ಸುವರ್ಣ ಬಳ್ಳಾರಿ ಮಾಡುತ್ತೇವೆಂದು ಬೃಹತ್ ಗೋಪುರ ನಿರ್ಮಿಸಿದ್ದಾರೆ. ಒಂದೆರೆಡು ರಸ್ತೆ, ಸರ್ಕಲ್ ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಿದ್ದಾರೆ ಅವು ಸಹ ಇನ್ನು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.ಮಾತ್ತೆತ್ತಿದರೆ ನಮ್ಮದು ಸುವರ್ಣ ಬಳ್ಳಾರಿ ಎಂದು ಮಾತನಾಡುವವರು. ನಗರದಲ್ಲಿನ ನೂರಾರು ರಸ್ತೆಗಳಲ್ಲಿನ ಕುಣಿಗಳನ್ನು ಮಾತ್ರ ಮುಚ್ಚಲು ಮನಸ್ಸು ಮಾಡುತ್ತಿಲ್ಲ.
ಮಳೆಗಾಲ ಹೋಯ್ತು, ಚಳಿಗಾಲಾನೂ ಹೋಗುತ್ತಿದೆ. ಬೇಸಿಗೆ ಕಾಲಬರುತ್ತಿದ್ದರೂ ರಸ್ತೆಗಳಲ್ಲಿನ ಗುಂಡಿಗಳಿಗೆ ಮಾತ್ರ ಮುಕ್ತಿ ಇಲ್ಲ. ಇದರಲ್ಲಿ ಪಾಲಿಕೆಗೆ, ಪಿಡಬ್ಲುಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳೂ ಸೇರಿವೆ.ನಗರದ ಏರ್ ಪೋರ್ಟ್ ರಸ್ತೆ, ಕೆ.ಸಿ.ರಸ್ತೆ, ಬ್ರಾಹ್ಮಣ ರಸ್ತೆ, ಕಾಳಮ್ಮ ರಸ್ತೆ, ಕಣೇಕಲ್ ರಸ್ತೆ, ರೂಪನಗುಡಿ ರಸ್ತೆ, ಬೆಂಗಳೂರು ರಸ್ತೆ, ತೇರು ಬೀದಿ, ರೇಡಿಯೋ ಪಾರ್ಕ್ ರಸ್ತೆ, ಹೀಗೆ ಯಾವುದೇ ರಸ್ತೆಗೆ ಹೋದರೂ ಗುಂಡಿಗಳ ಸ್ವಾಗತ ದೊರೆಯುತ್ತಿದೆ.ರಸ್ತೆಯಲ್ಲಿನ ಗುಂಡಿಗಳಿಂದ ವಾಹನಗಳೂ ಹಾಳಾಗುತ್ತಿವೆ, ಸಮಯಕ್ಕೆ ಸರಿಯಾಗಿ ಕಚೇರಿ, ಮನೆ, ಶಾಲೆ, ಕಾಲೇಜಿಗೆ ಹೋಗಲೂ ಆಗುತ್ತಿಲ್ಲ. ಇನ್ನು ಗುಂಡಿ ತಪ್ಪಿಸಲು ವಾಹನಗಳು ಆಕಡೆ ಈ ಕಡೆ ಹೋಗಿ ಅಪಘಾತಗಳಿಗೂ ಕಾರಣ ವಾಗುತ್ತಿದೆ.
ಪಾಲಿಕೆಯಲ್ಲಿ ಸಭೆಯಲ್ಲಿ ಗುಂಡಿ ಮುಚ್ಚಲು 40 ಲಕ್ಷ ರೂ ತೆಗೆದಿರಿಸಿದ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟ ಆಗಿತ್ತು. ಆ ಹಣ ಏನಾಯ್ತು. ಕೆಲವುಕಡೆ ವೆಟ್ ಮಿಕ್ಸ್ ಹಾಕಿ, ಇಲ್ಲಾ ಗರಸು ಹಾಕಿ ಬಿಡಲಾಗಿದೆ. ಇದು ಸಹ ವಾಹನಗಳ ಓಡಾಟಕ್ಕೆ ಅನಾನೂಕೂಲವಾಗುತ್ತದೆ.ಡಾಂಬರ್ ಮೂಲಕ ನಗರದ ನೂರಾರು ರಸ್ತೆಗಳಲ್ಲಿನ ಸಾವಿರಾರು ಗುಂಡಿಗಳನ್ನು ತಕ್ಷಣ ಮುಚ್ಚಲು ಮುಂದಾಗಬೇಕು.ಕುಣಿ ಮುಚ್ಚದಿದ್ದರೆ ಇದನ್ನು ಸುವರ್ಣ ಬಳ್ಳಾರಿ ಎಂಬುದರ ಬದಲಿ ಗುಂಡಿಗಳ ಬಳ್ಳಾರಿ ಎಂದು ಕರೆಯಬೇಕಾಗುತ್ತದೆಂದು ಕರವೇ ಜಿಲ್ಲಾ ಅಧ್ಯಕ್ಷ ವಿ.ಹೆಚ್.ಹುಲುಗಪ್ಪ ಎಚ್ಚರಿಕೆ ನೀಡಿದರು.ಈ ಸಂಧರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಅದ್ದಿಗೇರಿ ರಾಮಣ್ಣ, ವಿ.ವೆಂಕಟೇಶ್.ರಾಮಯ್ಯ, ಕೆ.ವೆಂಕಟೇಶ್ ಸದಸ್ಯರು ಇತರರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 