ಥರ್ಡ್-ಪಾರ್ಟಿ ಡೆಲಪರ್ ಗಳಿಗೆ ಬಳಕೆದಾರರ ಖಾಸಗಿ ಜಿಮೇಲ್ ಸಂದೇಶ ಓದಲು ಅನುಮತಿ ಇಲ್ಲ: ಗೂಗಲ್ ಸ್ಪಷ್ಟನೆ

ಸ್ಯಾನ್ ಫ್ರಾನ್ಸಿಸ್ಕೋ: ಥರ್ಡ್ ಪಾಪಾರ್ಟಿ ಅಪ್ಲಿಕೇಷನ್ ಡೆವಲಪರ್ ಗಳಿಗೆ  ಮೇಲ್ ಸಂದೇಶಗಳನ್ನು ಓದುವ ಅವಕಾಶ ನೀಡಲಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್ ಮೂರನೇ ವ್ಯಕ್ತಿಗಳಿಗೆ ಬಳಕೆದಾರರ ಖಾಸಗಿ ಮೇಲ್ ಓದಲು ಅವಕಾಶ ಇರುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ.

ಕೆಲವೇ ಸಂದರ್ಭಗಳಲ್ಲಿ ಮಾತ್ರ ಇ-ಮೇಲ್ ಕ್ಲೈಂಟ್, ಟ್ರಿಪ್ ಪ್ಲ್ಯಾನರ್, ಕಸ್ಟಮರ್ ರಿಲೇಷನ್ಸ್ ಸೇರಿದಂತೆ ಹೊರಗುತ್ತಿಗೆ ಸಂಸ್ಥೆಗಳಿಗೆ ಬಳಕೆದಾರರ ಅನುಮತಿ ಪಡೆದು ಜಿಮೇಲ್ ಓದುವ ಅವಕಾಶವಿದೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಹೇಳಿದೆ. ಗೂಗಲ್ ಏತರ ಆಪ್ ಗಳೂ ಸಹ ಜಿಮೇಲ್ ಮೆಸೇಜ್ ಗಳಿಗೆ ಪ್ರವೇಶ ಲಭ್ಯವಿದೆ. ಆದರೆ ಅದೂ ಸಹ ಹಲವು ಹಂತಗಳಲ್ಲಿ ಪರಿಶೀಲನೆಗೊಳಪಡುತ್ತದೆ ಎಂದು ಗೂಗಲ್ ಹೇಳಿದೆ. 

ಅಮೆರಿಕಾದ ಪ್ರಖ್ಯಾತ ವೃತ್ತಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಗೂಗಲ್ ಸ್ಪಷ್ಟನೆ ನೀಡಿದೆ.