ಸತ್ಕಾರ‌್ಯ ಮಾಡುವದರಲ್ಲಿ ಸುಖವಿದೆ: ಶಿಲ್ಪಿ ಹಿರೇಮಠ
There is happiness in doing good: Sculptor Hiremath
ಧಾರವಾಡ 06: ಸಂಪತ್ತಿನಲ್ಲಿ ಸುಖವಿದೆ ಎಂಬ ಭ್ರಮೆಯಿಂದ ಹೊರಬಂದು ಸತ್ಕಾರ‌್ಯಗಳನ್ನು ಮಾಡುವದರಲ್ಲಿ ಸುಖವಿದೆ ಎಂಬ ಆತ್ಮ ತೃಪ್ತಿಯನ್ನು ನಾವು ಹೊಂದಬೇಕೆಂದು ಶಿಲ್ಪಿ ಕಲಾವಿದರಾದ ಮಂಜುನಾಥ ಹಿರೇಮಠ ಅಭಿಪ್ರಾಯಪಟ್ಟರು. ಅವರು ದಿ: 04ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಲ್ಪಟ್ಟ ಸಾಧಕರ ಸನ್ಮಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮನುಷ್ಯನಿಗೆ ವೈಯಕ್ತಿಕ ಸುಖಕ್ಕಿಂತ ಸಮಾಜದ ಸುಖ ಮುಖ್ಯ. ನಾನು ಕಳೆದ 3 ದಶಕಗಳಿಂದ ಒಟ್ಟು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. 1995ರಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹ ಅಪರೂಪದ ಕಾಲದಲ್ಲಿ ಪರಿಸರ ಮಿತ್ರರ ಸಹಕಾರದಿಂದ ಮಣ್ಣಿನ ಗಣಪತಿ ಮೂರ್ತಿ ತಯಾರಿಸಿ ವ್ಯಾಪಕ ಪ್ರಚಾರ ಮಾಡಿದ್ದೆವೆ. ದಿನಗಳೆದಂತೆ ಮಣ್ಣಿನ ಗಣೇಶ ವಿಗ್ರಹಗಳಿಗೆ ಅಧಿಕ ಬೇಡಿಕೆಯಾಗಿ ಸರ್ಕಾರ ಸಹ ಪಿ.ಓ.ಪಿ ಗಣಪತಿ ತಯಾರಿಕೆ ಮಾರಾಟದ ಮೇಲೆ ನಿಷೇಧ ಹೇರಿತು. ನಮ್ಮ ಅಂದಿನ ಒಂದು ಸಣ್ಣ ಪ್ರಯತ್ನ ಇಂದು ದೊಡ್ಡ ಫಲ ಕೊಟ್ಟಿದೆ. ಕೊರೋನಾ ಸಂದರ್ಭದಲ್ಲೂ ಸಹ ನನ್ನ ಅಲ್ಪ ಆದಾಯದಲ್ಲಿ ಕಷ್ಟಕ್ಕೋಳಗಾದ ಜನರಿಗೆ ಆಹಾರಧಾನ್ಯ ಕಿಟ್ ಪೂರೈಸುವದರ ಮೂಲಕ ಸಮಾಜ ಮುಖಿಕಾರ್ಯ ಮಾಡಿದ್ದೇನೆ. ಮಾರ್ಗ ಸೂಚಿಸುವ ನಾಮ ಫಲಕಕ್ಕೆ ಬಣ್ಣ ಬಳೆಯುವ ಕಾರ್ಯವನ್ನು ನನ್ನ ಇತಿ ಮಿತಿಯಲ್ಲಿ ಮಾಡಿದ್ದೇನೆ. ಈ ದೆಸೆಯಲ್ಲಿ ನಾವು ಪೌರ್ರಜ್ಞೆ ಹೊಂದುವುದು ಅಗತ್ಯವಿದೆ ಎಂದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯ ಉದಯಲಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕವಿವ ಸಂಘ ನಾಡಿನ ಪ್ರತಿಷ್ಠಿತ ಸಂಸ್ಥೆ ಕಳೆದ 4 ವರ್ಷದ ಅವಧಿಯಲ್ಲಿ ಪ್ರಸ್ತುತ ಆಡಳಿತ ಮಂಡಳಿ ಸಂಘದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿ, ಸಂಘದ ಬೆಳವಣಿಗೆಗೆ ಪ್ರಯತ್ನಿಸಿದೆ. ಪದಾಧಿಕಾರಿಗಳು ಕವಿವ ಸಂಘದ ಗೌರವ ಮುಂದೆಯೂ ಹೆಚ್ಚಿಸುವಲ್ಲಿ ಶ್ರಮವಹಿಸಿ ಕಾರ್ಯ ಮಾಡುವಂತಾಗಲಿ ಎಂದು ಹೇಳಿದರು.
ಪ್ರಾರಂಭದಲ್ಲಿ ಸುಪ್ರೀಯ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು, ಹಾರ್ಮೊನಿಯಮ್ ಸಾಥ್ ಹೇಮಂತ ಲಮಾಣಿ, ತಬಲಾ ಸಾಥ್ ಡಾ. ಅನೀಲ ಮೇತ್ರಿ ನೀಡಿದರು. ಆನಂದಕಂದ ಗೆಳೆಯರ ಬಳಗದ ರಾಜು ಕುಲಕರ್ಣಿ, ಖುಷಿ ಢವಳೆ ಹಾಗೂ ಶಂಕರ ಮಂಗಳಗಟ್ಟಿ ಅವರಿಂದ ಜಾನಪದ ಹಾಡುಗಳ ಕಾರ್ಯಕ್ರಮ ನಡೆಸಿಕೊಟ್ಟರು. ವಾಯಲಿನ್ ಸಾಥ್ ಶಂಕರ ಕಬಾಡಿ ನೀಡಿದರು. ಶಂಕರ ಕುಂಬಿ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರ್ವಹಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಶೈಲಜಾ ತ. ಅಮರಶೆಟ್ಟಿ, ವೀರಣ್ಣ ಒಡ್ಡೀನ, ಕೆ. ಎಚ್. ನಾಯಕ, ಬಿ. ಮಾರುತಿ, ಕಿರಣ ಸಿದ್ಧಾಪೂರ, ಭೀಮಪ್ಪ ಖಟಾವಿ, ಶಂಕರ ಬೆಟಗೇರಿ ಹಾಗೂ ಮಂಜುನಾಥ ಹಿರೇಮಠ ಪರಿವಾರ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 