ರಾಜ್ಯದಲ್ಲಿ ರೈತ ವಿರೋಧಿ ಸರಕಾರ ಇದೆ : ಸಂಸದ ಬೊಮ್ಮಾಯಿ

ರಾಜ್ಯದಲ್ಲಿ ರೈತ ವಿರೋಧಿ ಸರಕಾರ ಇದೆ : ಸಂಸದ ಬೊಮ್ಮಾಯಿ  There is an anti-farmer government in the state: MP Bommai

             ಶಿಗ್ಗಾವಿ  17: ಸರಕಾರದಿಂದ ರೈತರಿಗೆ ಅನ್ಯಾಯ ರಾಜ್ಯದಲ್ಲಿ ರೈತ ವಿರೋಧಿ ಸರಕಾರ ಇದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಬಸವರಾಜ ಬೊಮ್ಮಾಯಿ ಅವರ ನಿವಾಸದ ಸಭಾ ಭವನದಲ್ಲಿ ಮಾತನಾಡಿದ ಅವರು ರೈತರಿಗೆ ಕೃಷಿ ಸನ್ಮಾನ ಯೋಜನೆ ಯಲ್ಲಿ 4000 ರೂ. ಬಿಜೆಪಿ ಸರಕಾರ ಕೊಟ್ಟಿತ್ತು. ಅದನ್ನು ಮುಂದುವರಿಸಿಲ್ಲ. ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಈಗ ಮಾರ್ಕೆಟ್ ಇಂಟರ್ ವಿನ್ ಸ್ಕಿಮ್ ಅಂತ ಹೇಳುತ್ತಿದ್ದಾರೆ. ಒಂದು ತಿಂಗಳಲ್ಲಿ ರೈತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿ ದ್ದಾನೆ. ಪ್ರತಿ ರೈತ ರಿಂದ 50 ಕ್ವಿಂಟಲ್‌ಗೆ ಒಂದು ತಿಂಗಳೊಳಗೆ ಖರೀದಿ ಮಾಡ ಬೇಕು. ರೈತರಿಗೆ ನಯಾ ಪೈಸೆ ಕೊಡ ಬಾರದು ಎಂದು ಸರಕಾರ ಈ ತೀರ್ಮಾನ ಮಾಡಿದೆ. ಇದ ರಿಂದ ಶೇ.95 ರಷ್ಟು ಕುಟುಂಬಗಳು ಸಣ್ಣ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ ಎಂದರುಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ಪ್ರಜಾಪ್ರಭುತ್ತ ರೀತಿಯಲ್ಲಿ ವಿರೋಧ ಮಾಡಬೇಕಾಗುತ್ತದೆ.

             ಪ್ರತಿಪಕ್ಷವಾಗಿ ನಾವು ಇಲ್ಲವಾದರೆ ವಿಫಲರಾಗುತ್ತೇವೆ. ಎಲ್ಲೆಲ್ಲಿ ಜನರ ಬೇಡಿಕೆ ಇದೆ. ಅದರ ಪರವಾದ ಹೋರಾಟ ಅನಿವಾರ್ಯ ಅಲ್ಲದೇ ನಿಮ್ಮ ಭವಿಷ್ಯ ತಾಲೂಕಿನ ಭವಿಷ್ಯ ಹೇಗೆ ರೂಪಿಸಬೇಕು ಯಾರು ರೂಪಿಸಬೇಕು ಎನ್ನುವುದನ್ನು ತಾಲೂಕಿನ ಮಹಾಜನತೆ ತೀರ್ಮಾನ ಮಾಡುತ್ತಾರೆ ಎಂದರು. ಈಗಿನ ಸರಕಾರ ನಾವು ಆದೇಶಿಸಿದ ಕೆಲಸಗಳನ್ನೇ ಮಾಡುತ್ತಿದ್ದಾರೆ. ದೊಡ್ಡ ಕೆಲಸಗಳನ್ನು ನಾವು ಮಾಡಿದ್ದೇವು. ಕೆಲಸ ಮಾಡಿದವರ ಸ್ಮರಿಸುವಂತ ಕನಿಷ್ಠ ಸೌಜನ್ಯ ಅವರಲ್ಲಿಲ್ಲ. ಡಿಪೋ ನಮ್ಮ ಅವಧಿಯಲ್ಲಿಯೇ ಮಾಡಿದ್ದೇವೆ. ಉದ್ಘಾಟನೆ ಅವರು ಮಾಡಿದರು ಎಂದರು.   ಒಂದೂವರೆ ಎರಡು ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ ಎಸ್‌ಐಆರ್ ಆರಂಭವಾಗುತ್ತದೆ. ನಿಮ್ಮ ಬೂತ್ ನೀವು ಸರಿಯಾಗಿ ನೋಡಿಕೊಳ್ಳಿ. ಪ್ರತಿ ಬೂತ್‌ನಲ್ಲಿ ನ್ಯಾಯ ಸಮ್ಮತವಾಗಿ ಅವಕಾಶ ಕಲಿಸಲಾಗುವುದು. ಯಾರು ಹೊರಗಡೆಯವರಿದ್ದಾರೆ. ಹೊಸದಾಗಿ ಯಾರು ಸೇರಿದ್ದಾರೆ. ಅವರ ಹೆಸರು ಎಲ್ಲಿತ್ತು. ಪತ್ತೆ ಹಚ್ಚಿ ಒಂದೂವರೆ ತಿಂಗಳು ಸರಿಯಾಗಿ ಕೆಲಸ ಮಾಡಿದರೆ ನಮ್ಮ ಮುಂದಿನ ಚುನಾವಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂದರು.