ರಾಣೇಬೆನ್ನೂರ೦೮: ಭಾರತ ದೇಶದ ಇತಿಹಾಸದಲ್ಲಿ ಶರಣ ಪರಂಪರೆಗೆ ತನ್ನದೇ ಆದ ಭವ್ಯ ಇತಿಹಾಸ ವಿದೆ. 12ನೇ ಶತಮಾನದಲ್ಲಿ ಕನ್ನಡ ನಾಡಿನ ಬಸವನಬಾಗೇವಾಡಿಯಲ್ಲಿ ಜನಿಸಿ ವೀರಶೈವ ಧರ್ಮ ಸ್ವೀಕರಿಸಿ, ಕಲ್ಯಾಣದಲ್ಲಿ ನೆಲೆಸಿ ವೀರಶೈವ ಮಹಾಮತವನ್ನು ಸ್ಥಾಪಿಸುವಲ್ಲಿ ಶ್ರೀ ಬಸವೇಶ್ವರರು ತಮ್ಮ ಬದುಕಿನುದ್ದಕ್ಕೂ ಹೋರಾಡಿದ ಮಹಾನ್ ಶರಣರು. ಅಂತಹ ಧರ್ಮ ಮತ್ತು ಸಂಸ್ಕಾರ ಪರಂಪರೆ ಇಂದಿನ ಯುವ ಸಮುದಾಯ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದು ನಗರದ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಮಂಗಳವಾರ ಜಗದ್ಗುರು ಏಕೋರಾಮಾರಾಧ್ಯರ ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ಮೂತರ್ಿಯ ಮೆರವಣಿಗೆಗೆ ಪೂಜೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ ಸಿ.ಎಸ್.ಕುಲಕಣರ್ಿ ಹೇಳಿದರು.
ವಿಧಾನ ಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್.ಶಂಕರ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಸಮಾರಂಭದಲ್ಲಿ ಉಸ್ತವಸಮಿತಿ ಅಧ್ಯಕ್ಷ ಸೋಮಣ್ಣ ಕಟಗಿಹಳ್ಳಿ, ಕಾರ್ಯದಶರ್ಿ ಸಿದ್ದಣ್ಣ ಚಿಕ್ಕಬಿದರಿ, ಖಜಾಂಚಿ ಬಸವರಾಜ ಚಿಮ್ಮಲಗಿ, ಉಪಾಧ್ಯಕ್ಷರಾದ ಅನಿಲ್ ಸಿದ್ಧಾಳಿ, ಶಿವಯೋಗಿ ರೊಡ್ಡನವರ, ಮುಖಂಡರಾದ ಪ್ರಭುಸ್ವಾಮಿ ಕರ್ಜಗಿಮಠ, ಡಾ|| ಬಸವರಾಜ ಕೇಲಗಾರ, ಜಗದೀಶ ಎಲಿಗಾರ, ನಾಗರಾಜ ಪೋಲಿಸ್ಗೌಡ್ರ, ಭಾರತಿ ಅಳವಂಡಿ, ಭಾರತಿ ಜಂಬಗಿ, ಉಮೇಶ ಹೊನ್ನಾಳಿ, ಮಲ್ಲಿಕಾಜರ್ುನ ಅಂಗಡಿ, ಶಿವಯೋಗಿ ಮೊಟೇಬೆನ್ನೂರು, ಎಸ್.ಎಸ್.ರಾಮಲಿಂಗಣ್ಣನವರ, ರಾಜಣ್ಣ ಪಾಟೀಲ, ಬಸವರಾಜ ತಾವರಗೊಂದಿ, ಶಂಭಣ್ಣ ಕಟಗಿಹಳ್ಳಿ, ಲೆಕ್ಕಪ್ಪ ಜಂಬಗಿ, ವೀರಣ್ಣ ಜಂಬಗಿ, ಶಿವಕುಮಾರ ಹರಕನಾಳ, ಬಸವರಾಜ ಬೊಳ್ಳೊಳ್ಳಿ, ಸಿ.ಆರ್.ಅಸುಂಡಿ, ಬಿ.ಬಿ.ರೊಡ್ಡನವರ, ಪ್ರಶಾಂತ ಕೊಪ್ಪದ, ಎಸ್.ಬಿ.ಗುರಿಕಾರ, ಶೇಖಣ್ಣ ಬಳ್ಳಾರಿ, ಮುರಗೇಶ ಬಳ್ಳಾರಿ, ರಾಜು ಬಾರಿಗಿಡದ, ಸಿದ್ದಯ್ಯ ನೂರಂದೇರಮಠ, ಸಿ.ಎಸ್.ಕುಲಕಣರ್ಿ, ಬಿ.ಇ.ಓ ಎನ್.ಶ್ರೀಧರ, ಇಓ ಶಾಮಸುಂದರ ಕಾಂಬಳೆ, ಲಲಿತಾ ಹಾವೇರಿ, ಕಪ್ಪತಪ್ಪ ಸಾಲಿಮನಿ, ಚಂದ್ರಣ್ಣ ರಮಾಳದ, ಚನ್ನಬಸಪ್ಪ ಬಳ್ಳಾರಿ, ರಾಜು ಪಾಗದ, ಮಂಜುನಾಥ ಹಾದಿಮನಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಮುಂಜಾನೆ ಆರಂಭಗೊಂಡ 101 ಜೋಡಿ ಎತ್ತುಗಳ ಶೃಂಗರಿಸಿದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಯಂತೋತ್ಸವದ ಜಾಗೃತಿ ಮೂಡಿಸುವಲ್ಲಿ ಯಶ ಕಂಡಿತು.