ಹಾರೂಗೇರಿ ತಾಲೂಕು ಕೇಂದ್ರಕ್ಕೆ 27 ಗ್ರಾಮಗಳ ಬೇಡಿಕೆಯಿದೆ : ಅಸ್ಕಿ
There is a demand from 27 villages for Harugeri Taluk Center: ASK
ಹಾರೂಗೇರಿ 12: ಹಾರೂಗೇರಿಯನ್ನು ತಾಲೂಕು ಕೇಂದ್ರ ಮಾಡಬೇಕೆಂದು ಸುತ್ತಮುತ್ತಲಿನ 27 ಗ್ರಾಮಗಳ ಜನರ ಪ್ರಮುಖ ಬೇಡಿಕೆಯಾಗಿದ್ದು, ಹಾರೂಗೇರಿ ತಾಲೂಕು ಕೇಂದ್ರಕ್ಕೆ ಒತ್ತಾಯಿಸಿ ಎಲ್ಲ ಹಳ್ಳಿಗಳ ಹಿರಿಯರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ ಎಂದು ಹಾರೂಗೇರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಜಿನ್ನಪ್ಪ ಅಸ್ಕಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಹಾರೂಗೇರಿ ತಾಲೂಕು ಕೇಂದ್ರಕ್ಕೆ ಆಗ್ರಹಿಸಿ, 27 ಗ್ರಾಮಗಳ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಶೈಕ್ಷಣಿಕ, ಸಾಂಸ್ಕೃತಿಕ, ಸಹಕಾರ ಕ್ಷೇತ್ರ, ರಾಜಕೀಯ, ಆರ್ಥಿಕ ಹಾಗೂ ವಾಣಿಜ್ಯ, ಪ್ರಮುಖ ವ್ಯಾಪಾರ ಭೌಗೋಳಿಕವಾಗಿ ತಾಲೂಕಾಗಲು ಅರ್ಹತೆ ಇರುವ ಹಾರೂಗೇರಿಯನ್ನು ಸರ್ಕಾರ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ತಾಲೂಕಾಗದಿರುವುದರಿಂದ ಈ ಭಾಗದ 27 ಗ್ರಾಮಗಳ ಅಭಿವೃದ್ಧಿ ಹಾಗೂ ಆಡಳಿತಾತ್ಮಕವಾಗಿ ಹಿನ್ನಡೆಯಾಗುತ್ತಿದೆ. ಅಲ್ಲದೇ ಹಾರೂಗೇರಿ ತಾಲೂಕು ಕೇಂದ್ರವಾಗಲು 27 ಗ್ರಾಮ ಪಂಚಾಯ್ತಿಗಳಲ್ಲಿ ಠರಾವು ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಹಿರಿಯ ಗಣ್ಯರಾದ ರಾಮಣ್ಣ ಗಸ್ತಿ ಮಾತನಾಡಿ ಹಾರೂಗೇರಿ ತಾಲೂಕು ಕೇಂದ್ರಕ್ಕೆ 25 ವರ್ಷಗಳಿಂದ ಮುಖ್ಯಮಂತ್ರಿಗಳು, ಸಚಿವರಿಗೆ ಮನವಿ ಸಲ್ಲಿಸಿ ಹಿರಿಯರು ಪ್ರಯತ್ನಿಸುತ್ತಿದ್ದಾರೆ. ಎಲ್ಲ ಗ್ರಾಮಗಳ ಠರಾವು ಪ್ರತಿಗಳು ವಿಧಾನಸೌಧದಲ್ಲಿವೆ. ಡಿಸೆಂಬರ ಒಳಗೆ ಹಾರೂಗೇರಿಯನ್ನು ಸರ್ಕಾರ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು. ಈ ಕುರಿತು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಹೇಳಿದರು.
ಡಾ.ಎಲ್.ಎಸ್.ಜಂಬಗಿ ಮಾತನಾಡುತ್ತ 2026ರಲ್ಲಿ ಕೇಂದ್ರ ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡನೆ ಕಾರ್ಯ ಆರಂಭಿಸಲಿದ್ದು, ಅಷ್ಟರಲ್ಲಿ ಎಲ್ಲ ಪುರಸಭೆ, ಗ್ರಾಮ ಪಂಚಾಯ್ತಿಗಳ ಸದಸ್ಯರು, ರಾಜಕೀಯ ಮುಖಂಡರು ಒಗ್ಗೂಡಿ, ಎಲ್ಲ ಗ್ರಾಮಗಳಿಂದಲೂ ಒತ್ತಡ ಹೇರಬೇಕೆಂದು ಹೇಳಿದರು.
ಹಂದಿಗುಂದದ ಮುಖಂಡ ಮಲ್ಲಿಕಾರ್ಜುನ ಖಾನಗೌಡರ ಹಾರೂಗೇರಿ ತಾಲೂಕಾಗಲು ಪೂರ್ವಭಾಗದ ಎಲ್ಲ ಗ್ರಾಮಗಳ ಒಕ್ಕೋರಲ ಆಗ್ರಹವಿದೆ ಎಂದರು.
ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಕಸಾಪ ತಾಲೂಕು ಅಧ್ಯಕ್ಷ ಈರಣ್ಣಗೌಡ ಪಾಟೀಲ, ಬಸವರಾಜ ತುಳಿಸಿಗೇರಿ, ಅಶೋಕ ಕೊಪ್ಪದ, ಬಿ.ಆರ್.ಆಜೂರೆ, ಶ್ರೀಪಾಲ ದಟವಾಡ, ಧನಪಾಲ ಶಿರಹಟ್ಟಿ, ಸಿದ್ದಪ್ಪ ನಾಗನೂರ, ಬಿ.ಎಸ್.ಮೋರ್ಡಿ, ಬಿ.ಬಿ.ಮುಗಳಿಹಾಳ, ವಸಂತ ಅಲಖನೂರ, ಸುರೇಶ ಐಹೊಳೆ, ಬಸವರಾಜ ಚೌಗಲಾ, ಎಸ್.ಎಲ್.ಕಟ್ಟಿ, ಆನಂದ ಪಾಟೀಲ, ಬುರಾನಸಾಬ ಶೇಖ, ಮಾಳು ಹಾಡಕಾರ, ಕಲ್ಲಪ್ಪ ಬಡಿಗೇರ, ಸಂತೋಷ ಸಿಂಗಾಡಿ, ಸಿದ್ರಾಮ ಕಾಂಬಳೆ, ಮಹೇಶ ಐಹೊಳೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 