ದೇಶ ಹಾಳಾದರೂ ಕೋಶ ತುಂಬಬೇಕು ಎನ್ನುವ ರಾಜಕಾರಣಿಗಳಿದ್ದಾರೆ : ಹೊರಪೇಟಿ

ದೇಶ ಹಾಳಾದರೂ ಕೋಶ ತುಂಬಬೇಕು ಎನ್ನುವ ರಾಜಕಾರಣಿಗಳಿದ್ದಾರೆ : ಹೊರಪೇಟಿ There are politicians who say that even if the country is ruined, they must fill their pockets: Hor

       ಕೊಪ್ಪಳ 15:  ದೇಶ ಹಾಳಾದರೂ ಸರಿ ತಮ್ಮ ಕೋಶ ತುಂಬಬೇಕು ಎನ್ನುವ ರಾಜಕಾರಣಿಗಳಿದ್ದಾರೆ, ಜನಪರವಾಗಿ ನಿಲ್ಲಲು ನಿಷ್ಟುರತೆ ಬೇಕು. ಬೂದಿ, ಹೊಗೆ, ವಿಷಾನೀಲದಿಂದ ಬದುಕು ಹಾಳಾಗಿದೆ ಎಂದು ದಳಪತಿ ಸಂಘದ ಅಧ್ಯಕ್ಷರಾದ ಶರಣಬಸನಗೌಡ ಹೊರಪೇಟೆ ಹೇಳಿದರು. ಇಲ್ಲಿಯ ಕಂಪನಿಗಳನ್ನು ಆದಷ್ಟು ಬೇಗ ಒದ್ದೋಡಿಸಬೇಕು. ಗಾಳಿ ಯಂತ್ರಗಳಿಂದ ಭೂಮಿಯ ತೇವ ಉಳಿಸಿಕೊಳ್ಳಬೇಕಾದ ಸವಾಲು ಸಹ ನಮ್ಮ ಮುಂದಿದೆ, ಉತ್ತಮ ಗಾಳಿ ಮುಖ್ಯ ಎಂದು ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಕೊಪ್ಪಳ ಪಕ್ಕದಲ್ಲಿ ಬಲ್ನೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್‌ ಇಂಡಿಯಾ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ಬೇಡ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ 46ನೇ ದಿನದ ಧರಣಿ ಬೆಂಬಲಿಸಿ ಮಾತನಾಡಿದರು. 

ರೈತ ಮುಖಂಡ ಶರಣಗೌಡ ಪಾಟೀಲ ಮುದ್ದಾಬಳ್ಳಿ ಕಂಪನಿಗಳಿಗೆ ಕಡಿವಾಣ ಹಾಕಬೇಕು, ಅವರ ಉಪಟಳ ವಿಪರೀತವಾಗಿದೆ, ಅಲ್ಲಿ ಕೆಲಸ ಮಾಡುವವರು ನಮ್ಮ ಜನರೇ ಅಲ್ಲ, ಇನ್ನು ಬಲ್ಡೋಟಾ ಪೆಲೆಟ್ ಪ್ಲಾಂಟ್ ಆರಂಭವಾಗಿ 10 ವರ್ಷ ಆಗಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಅಂದೇ ಅವರು ಕೆಲಸ ಕೊಡಬೇಕಿತ್ತು, ಅದೇ ಕಾರ್ಖಾನೆ ಮಾಲೀಕರು ಇಷ್ಟು ವರ್ಷ ಚಳ್ಳೆ ಹಣ್ಣು ತಿನ್ನಿಸಿ ಈಗ ರೈತರ ಸೋಗಿನಲ್ಲಿ ತಮ್ಮವರನ್ನೇ ನಿಲ್ಲಿಸಿ ಕಂಪನಿ ಪರವಾಗಿ ಹೋರಾಟ ಮಾಡಿಸುತ್ತಿದ್ದಾರೆ, ಜನರಿಗೆ ಅವರ ನಾಟಕ ಗೊತ್ತಿದೆ, ಸರಕಾರಕ್ಕೂ ಅದನ್ನೇ ಹೇಳುತ್ತೇವೆ, ಮತ್ತೊಂದು ಕ್ರಾಂತಿಕಾರಕ ಹೋರಾಟ ಆಗುವ ಮುನ್ನ ಎಚ್ಚರಗೊಂಡು ಜನರ ಸಮಸ್ಯೆಗೆ ಸ್ಪಂದಿಸಲಿ ಎಂದರು. ದಳಪತಿ ಕಲ್ಲನಗೌಡ ಅವರು ಮಾತನಾಡಿ ಬೂದಿಯಿಂದ ರೇಷ್ಮೆ, ಬಾಳೆ ಬೆಳೆಯುವದು ನಿಲ್ಲಿಸಲಾಯ್ತು, ಅದರ ವಿಷಕಾರಿ ಅಂಶ ಮತ್ತು ಬೂದಿಯಿಂದ ನಷ್ಟ ಅನುಭವಿಸಿ ಸಾಕಾಗಿದೆ, ಅಲ್ಲಿ ಬರುವ ಬೆಳೆಗಳು ಗುಣಮಟ್ಟದಿಂದ ಕೂಡಿರಲು ಸಾಧ್ಯವಿಲ್ಲ, ಕಂಪನಿ ಪರವಾಗಿ ಇರುವವರ ಅಧ್ಯಯನ, ವರದಿಗಳು ಎಲ್ಲವೂ ಬೋಗಸ್ ಎಂದರು. 

ಈ ಸಂದರ್ಭದಲ್ಲಿ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಚಾರಣ ಬಳಗದ ಡಾ. ಶಿವಕುಮಾರ್ ಮಾಲಿಪಾಟೀಲ್, ತಿಮ್ಮಣ್ಣ ಭೋವಿ ಬೆಂಕಿನಗರ, ವಿವಿಧ ಗ್ರಾಮದ ದಳಪತಿಗಳಾದ ದೊಡ್ಡನಗೌಡ ಮುದ್ದಲಗುಂದಿ, ಸಂಗಯ್ಯ ಕರ್ಕಿಹಳ್ಳಿ, ಬಾಲನಗೌಡ ಬೆನ್ನೂರು, ಕಲ್ಲನಗೌಡ ಮಾಸ್ತಿಕಟ್ಟಿ, ಉಮೇಶಗೌಡ ಹೂವಿನಹಾಳ, ಶರಣೇಗೌಡ ಮುದ್ದಾಬಳ್ಳಿ, ಯಮನಪ್ಪ ಕಿಡದಾಳ, ದೇವನಗೌಡ ಯ್ಯಾಟಿ, ಬಸನಗೌಡ ಕೋಳೂರು, ಸೋಮಲಿಂಗಪ್ಪ ಸಂಗನಾಳ, ಹನುಮನಗೌಡ ಹುಲಿಯಾಪುರ, ಹನುಮಗೌಡ ಬಗನಾಳ, ಸಂಗಮೇಶ ಪುರ, ಅಮರೇಗೌಡ ಮ್ಯಾದರಡೊಕ್ಕಿ, ಸಂಘಟಕರಾದ ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರ್, ಡಿ. ಎಂ. ಬಡಿಗೇರ, ಮಹಾದೇವಪ್ಪ ಮಾವಿನಮಡು, ರವಿ ಕಾಂತನವರ, ಮೂಕಣ್ಣ ಮೇಸ್ತ್ರೀ, ಎಸ್‌. ಬಿ. ರಾಜೂರ, ಮಖ್ಬೂಲ್ ರಾಯಚೂರು, ಭೀಮಪ್ಪ ಯಲಬುರ್ಗಾ, ಸುಭಾನ್, ಸುರೇಶ ಪೂಜಾರ, ರಮೇಶ ಬೋಚನಹಳ್ಳಿ ಗಂಗಮ್ಮ ಕವಲೂರು ಧರಣಿಯಲ್ಲಿ ಪಾಲ್ಗೊಂಡರು.