ಖಾಲಿ ಕೊಡಗಳೊಂದಿಗೆ ತೆಗ್ಗಿಹಳ್ಳಿ ಮಹಿಳೆಯರು ಆಡಳಿತ ಕಚೇರಿಗೆ ಮುತ್ತಿಗೆ
Theggihalli women besiege the administrative office with empty pots
ಲೋಕದರ್ಶನ ವರದಿ
ಇಂಡಿ 19: ತೆಗೆಹಳ್ಳಿಯ ಹೊಸ ಊರು ಗ್ರಾಮದ ಸುಮಾರು 300 ಮನೆಗಳು ಹೊಂದಿರುವ ಬಡಾವಣೆ.ಇಲ್ಲಿ ಕುಡಿಯುವ ನೀರಿಗಾಗಿ ಕೇವಲ ಒಂದು ಬಾವಿ ಇದ್ದು. ಇದು ಕೂಡಾ ಕೇವಲ 15, ನಿಮಿಷಗಳು ಮಾತ್ರ ನೆಡೆಯುವದು. ತದನಂತರ ನೀರು ಬೇಕಾದರೆ ಸುತ್ತ ಮುತ್ತಲಿನ ತೋಟಗಳಿಗೆ ಹೋಗಿ ನೀರು ತರಬೇಕು. ಇದು ಮಹಿಳೆಯರಿಗೆ ಹಾಗೂ ವೃದರಿಗೆ ಬಹಳ ತೋಂದರೆ ಆಗಿದ್ದು.ಈ ವಿಷಯದ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರು ಪ್ರಯೋಜನವಾಗಿಲ್ಲ. ಆದಕಾರ ಜೆಡಿಎಸ್ ಮುಖಂಡರಾದ ಬಿ.ಡಿ ಪಾಟೀಲರ ನೇತೃತ್ವದಲ್ಲಿ ಇಂದು ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ವಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ವ್ಯವಸ್ಥೆ ಹಾಗೂ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
ಉಪವಿಭಾಗದಿಗಳು ಹಾಗೂ ತಹಶೀಲ್ದಾರ್ ರವರಿಗೆ ಜಂಟಿಯಾಗಿ ಮನವಿ ಸಲ್ಲಿಸಿದರು.ನಂತರ ಮಾತನಾಡುತ್ತಾ. ಸಂವಿಧಾನ ಹಾಗೂ ಆಳುವ ಸರ್ಕಾರದ ಆಶಯವಾದ ಮೂಲಭೂತ ಹಕ್ಕುಗಳಲ್ಲಿ ಕುಡಿವ ನೀರು ವದಗಿಸುವ ಪ್ರಮುಖ ಹಕ್ಕನ್ನು. ಆಳುವ ಸರ್ಕಾರ ಹಾಗೂ ತಾಲೂಕಾ ಆಡಳಿತ ಸಂಪೂರ್ಣ ಉಲ್ಲಂಘನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ. ಕೂಡಲೆ ಸಂಬಂಧಪಟ್ಟ ಇಲಾಖೆ ಕುಡಿಯುವ ನೀರಿನ ಬವಣೆ ನೀಗಿಸಲು ಆಗ್ರಹಿಸಿದರು. ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಯೂಬ್ ನಾಟೀಕರ ಮಾತನಾಡಿ ಜನಪ್ರತಿನಿಧಿಗಳು ಕೇವಲ ಅಧಿಕಾರರಾಲಸಿ ಬಿಟ್ಟು. ಜನಸಮಾನ್ಯರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ.ಡಾ ರಮೇಶ ರಾಠೋಡ, ಬಾಳು ರಾಠೋಡ, ಬಾಬು ಕಾಂಬಳೆ, ಶರಣು ಕಾಂಬಳೆ, ಶಿವಾನಂದ ಹೊಸಮನಿ, ಉಮರ ಮುಜಾವರ, ಅಸಾದುಲ್ಲಾ. ಮುಜಾವರ, ಗಂಗಾಧರ. ಬೀರನಹಳ್ಳಿ, ಸಾಜನ ದೇಗಿನಾಳ, ಸಾಹೇಬಗೌಡ ಬೀರನಹಳ್ಳಿ, ಸಿದ್ದಪ್ಪ ಬೀರನಹಳ್ಳಿ, ದುಂಡಾಬಾಯಿ ಬೀರನಹಳ್ಳಿ, ಕಸ್ತೂರಿ ಬೀರನಹಳ್ಳಿ, ರಾಜಶ್ರೀ ಕೋರೆ, ನಿಂಗವ್ವ ಬೀರನಹಳ್ಳಿ, ದೇವಕಿ ಕೋರೆ, ಹಾಗೂ ಮುಂತಾದವರು ಉಪಸ್ಥಿತರಿದ್ದರು
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 