ದಂಪತಿಗಳನ್ನು ಒಂದು ಮಾಡಿದ ಲೋಕ ಅದಾಲತ
The world is a court that unites couples.
ದಂಪತಿಗಳನ್ನು ಒಂದು ಮಾಡಿದ ಲೋಕ ಅದಾಲತ
ಶಿಗ್ಗಾವಿ 13: ವಿಚ್ಛೇದನ ಕೊರಿ ಪ್ರಕರಣ ದಾಖಲಿಸಿದ ಗಂಡ ಹೆಂಡತಿಯರನ್ನು ಒಟ್ಟುಗೂಡಿಸಿ ಘಟನೆ ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಜರೂಗಿತು.
ತಾಲೂಕಿನ ಚಿಕ್ಕಮಣಕಟ್ಟಿ ಗ್ರಾಮದ ಪರಸಪ್ಪ ಬಡಿಗೇರ ಹಾಗೂ ಸುಜಾತ ಪರಸಪ್ಪ ಬಡಿಗೇರ ವಿಚ್ಛೇದನ ಕೊರಿ ಪ್ರಕರಣ ದಾಖಲಿಸಿದ್ದರು. ಶನಿವಾರ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರು ಸುನೀಲ್ ಎಸ್ ತಳವಾರ, ಹಾಗೂ ದಿವಾಣಿ ನ್ಯಾಯಾಧೀಶರು ಶ್ರೀಮತಿ ಅಶ್ವಿನಿಚಂದ್ರಕಾಂತ, ಅವರ ಸಮ್ಮುಖದಲ್ಲಿ ನ್ಯಾಯವಾದಿಗಳಾದ ಜಿ.ಕೆ. ಗುಂಜಾಳ, ಹಾಗೂ ಎನ್ ಎಮ್ ಪವಾರ ವಕೀಲರ ಸಹಕಾರದಿಂದ ರಾಜಿ ಮೂಲಕ ಹೆಂಡತಿಯರನ್ನು ಒಟ್ಟುಗೂಡಿಸಿದರು.ರಾಷ್ಟ್ರೀಯ ಲೋಕ ಅದಾಲತನಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಬಾಕಿ ಇರುವ 221 ಪ್ರಕರಣಗಳಲ್ಲಿ 213 ಪ್ರಕರಣಗಳು ರಾಜಿಯಾದವು ಅದೇ ರೀತಿ ವ್ಯಾಜ್ಯ ಪೂರ್ವ 3351 ಪ್ರಕರಣಗಳಲ್ಲಿ 2730 ಪ್ರಕರಣಗಳು ರಾಜಿಯಾದವು.
ದಿವಾಣಿ ನ್ಯಾಯಾಲಯದಲ್ಲಿ ಬಾಕಿ ಇರುವ 414 ಪ್ರಕರಗಳಲ್ಲಿ 405 ಪ್ರಕರಣಗಳು ರಾಜಿಯಾದವು ಅದೇ ರೀತಿ ವ್ಯಾಜ್ಯ ಪೂರ್ವ 2355 ಪ್ರಕರಣಗಳಲ್ಲಿ 1816 ಪ್ರಕರಣಗಳು ರಾಜಿಯಾದವು. ಮತ್ತು 10 ವರ್ಷದ ಹಳಯದಾದ ಓ.ಎಸ್ ನಂಃ 208/2014 ರ ಪ್ರಕರಣವನ್ನು ರಾಜಿ ಸಂಧಾನ ಮಾಡಲಾಯಿತು ವಾದಿ ಪರ ವಕೀಲರಾದ ಕೆ ಎಸ್ ಜೋಶಿ ಹಾಗೂ ಪ್ರತಿವಾದಿ ಪರ ವಕೀಲರಾದ ಎಸ್ ಜಿ ಟೋಪಣ್ಣವರ ಸಹಾಕರ ನೀಡಿದರು.
ಈ ಅದಾಲತನಲ್ಲಿ ನ್ಯಾಯವಾದಿಗಳ ಸಂಘದ ಅದ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು ಹಾಗೂ ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು ಮತ್ತು ಎಲ್ಲಾ ನ್ಯಾಯವಾದಿಗಳು ಬಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 