ಆದಿವಾಸಿಗಳನ್ನು ನಾಗರಿಕ ಸಮಾಜಕ್ಕೆ ತರಲು ಬಿ.ಎ.ಜೆ.ಎಸ್.ಎಸ್.ಸಂಸ್ಥೆ ಕಾರ್ಯ ಶ್ಲಾಘನೀಯ: ಡಾ. ಕುಬೇರ್ಪ
The work of BAJSS in bringing tribals into civil society is commendable: Dr. Kuberpa
ಆದಿವಾಸಿಗಳನ್ನು ನಾಗರಿಕ ಸಮಾಜಕ್ಕೆ ತರಲು ಬಿ.ಎ.ಜೆ.ಎಸ್.ಎಸ್.ಸಂಸ್ಥೆ ಕಾರ್ಯ ಶ್ಲಾಘನೀಯ: ಡಾ. ಕುಬೇರ್ಪ
ರಾಣೇಬೆನ್ನೂರು 09: ಭಾರತ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ದೇಶಾದ್ಯಂತ ಬಹಳಷ್ಟು ಜನರು ಆದಿವಾಸಿಗಳಾಗಿದ್ದರು ಭಾಷೆ ಗೊತ್ತಿರಲಿಲ್ಲ, ಬಟ್ಟೆ ಬಳಕೆ ಇರಲಿಲ್ಲ, ಇಂತಹ ಸಂದರ್ಭದಲ್ಲಿ ಠಕ್ಕರ ಬಾಪಾ ಎಂಬುವರು 1949 ರಲ್ಲಿ ಭಾರತೀಯ ಆದಿಮ ಜಾತಿ ಸೇವಕ ಸಂಘ (ಬಿ.ಎ.ಜೆ.ಎಸ್.ಎಸ್) ಸ್ಥಾಪಿಸಿ ಆದಿವಾಸಿಗಳಿಗೆ ಶಿಕ್ಷಣ ಅರಿವು ನೀಡಿ ನಾಗರೀಕ ಪ್ರಪಂಚಕ್ಕೆ ಕರೆ ತರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿ.ಎ.ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ. ಆರ್.ಎಂ.ಕುಬೇರ್ಪ ನುಡಿದರು.ಅವರು ಇಂದು ಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಅಂತರಾಷ್ಟ್ರೀಯ ಆದಿವಾಸಿ ದಿನ ಆಚರಣೆಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಆರಂಭದಲ್ಲಿ ಉಪ ಪ್ರಾಚಾರ್ಯರಾದ ಡಾ.ದೇವರಾಜ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಡಾ. ಹನುಮಂತಪ್ಪ ಬ್ಯಾಡಗಿ ಸ್ವಾಗತಿಸಿದರು, ಕೊನೆಯಲ್ಲಿ ಬಸವರಾಜ ಮಾಳೇನ ಹಳ್ಳಿಯವರು ವಂದಿಸಿದರು. ವೇದಿಕೆಯಲ್ಲಿ ಬಿ.ಎ.ಜೆ.ಎಸ್.ಎಸ್.ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ.ಕೆ.ಕೆ. ಹಾವಿನಾಳ, ಶ್ರೀ.ಆರ್.ಗೋಪಾಲ ರೆಡ್ಡಿ, ಹೆಚ್.ಎ. ಭಿಕ್ಷಾವರ್ತಿಮಠ ಮತ್ತುಅಂಗ ಸಂಸ್ಥೆಯವಿವಿಧಕಾಲೇಜಿನ ಪ್ರಾಚಾರ್ಯರಾದ ಡಾ.ಸುರೇಶ ಬಣಕಾರ, ಪ್ರಕಾಶ ಬಸಪ್ಪನವರು, ಹಾಲೇಶ ಗೌಡಶಿವಣ್ಣನವರ, ಮೃತ್ಯುಂಜಯ, ಕುಬೇರ ನಾಯ್ಕ, ಹೆಚ್. ಬಿ. ಪಟ್ಟಣಶೆಟ್ಟಿ, ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯಶ್ರೀ.ಎನ್. ಕೆ. ಪ್ರವೀಣಕುಮಾರ, ಎಸ್.ಆರ್. .ರಾಯಚೂರ, ಎಸ್,ಎಸ್, ಮಠದ ಪರಶುರಾಮಚನ್ನಪ್ಪ ವಿವಿಧ ವಿಷಯಗಳ ಪ್ರಾಧ್ಯಾಪಕರು, ಉಪನ್ಯಾಸಕರಕು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 