ಲೋಕದರ್ಶನ ವರದಿ
ಬೆಳಗಾವಿ 7-ವಚನಗಳು ಜೀವನಾಭವದಲ್ಲಿ ಎದುರಿಸುವ ನೋವು, ನಲಿವುಗಳೇ ಆಗಿವೆ. ಜೀವನದ ಸಮಸ್ಯೆಗಳಿಗೆಲ್ಲ ಪರಿಹಾರ, ಸಾಂತ್ವನವನ್ನು ಶರಣರ ವಚನಗಳು ಹೇಳುತ್ತ ಬದಕುವ ದಾರಿಯನ್ನು ಹೇಳಿಕೊಟ್ಟವು ಎಂದು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಇಂದಿಲ್ಲಿ ಹೇಳಿದರು.
ಜಾಗತಿಕ ಲಿಂಗಾಯಿತ ಮಹಾಸಭೆ(ರಿ) ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಾಂತೇಶನಗರದ ಮಹಾಂತ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ತತ್ಸಂಗದ ವಿಶೇಷ ಉಪನ್ಯಾಸ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಡಾ. ಸಿದ್ಧರಾಮಮಹಾಸ್ವಾಮಿಗಳು ಮೇಲಿನಂತೆ ಅಭಿಪ್ರಾಯ ಪಟ್ಟರು. ಮುಂದೆ ಮಾತನಾಡುತ್ತ ಸಿ. ಕೆ. ಜೋರಾಪುರ ಅವರು ನಾಡದೇವಿ ಭುವನೇಶ್ವರಿ ಸೇವೆಗೆ ಸಂದ ಫಲವೇ ರಾಜ್ಯೋತ್ಸವ ಪ್ರಶಸ್ತಿ. ನಮ್ಮ ಜಿಲ್ಲೆಗೆ ಮೂರು ರಾಜ್ಯೋತ್ಸವ ಪ್ರಶಸ್ತಿಗಳು ಬಂದಿರವುದು ನಾವೆಲ್ಲ ಅಭಿಮಾನ ಪಡುವ ಸಂಗತಿ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಬೆನನ್ಸ್ಮಿತ್ ಮಹಾವಿದ್ಯಾಲಯದ ಉಪನ್ಯಾಕರಾದ ಪ್ರೊ. ಶ್ರೀಕಾಂತ ಶಾನವಾಡ ಶರಣರು ವಿಶ್ವದ ಜೀವಂತಿಕೆಗಾಗಿ ವಾಸ್ತವವನ್ನು ಅರುಹಿದ ಮಹಾ ಮಾನವತಾವಾದಿಗಳು. ಬೇರೆಯವರಂತೆ ಕೇವಲ ಸಿದ್ಧಾಂತಗಳ ನಿರೂಪಣೆಗೆ ಇಳಿಯದೇ ಬದುಕಿನ ಯತಾರ್ಥತೆಗೆ ಒತ್ತು ನೀಡುವುದರೊಂದಿಗೆ ಜನರ ಅರಿವನ್ನು ಹೆಚ್ಚಿಸಿದವರು. 12 ನೇ ಶತಮಾನದಲ್ಲಿದ್ದ ದೇವಾಲಯ ಮತ್ತು ಮಠಗಳು ಶೋಷಣೆ ಕೇಂದ್ರಗಳಾಗಿದ್ದವು. ಆಗ ದೇಹವನ್ನೇ ದೆಗುಲವನ್ನಾಗಿಸಿ, ಮನೆಗಳನ್ನೇ ಮಠಗಳನ್ನಾಗಿಸಿದ ಹಿರಿಮೆ ಶರಣರದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಿ. ಕೆ. ಜೋರಾಪೂರ ಅವರನ್ನ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಷಟ್ಸ್ಥಳ ಧ್ವಜಾರೋಹಣವನ್ನು ಗುರುರಾಜ ಮಠದ - ಶ್ರೀಮತಿ ರಾಜೇಶ್ವರಿ ದಂಪತಿಗಳು ನೆರವೇರಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಮಹಾಂತೇಶನಗರದ ರಹವಾಸಿ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯಿತ ಮಹಾಸಭೆ ಅಧ್ಯಕ್ಷರಾದ ಅರವಿಂದ ಪರುಶೆಟ್ಟಿ ವಹಿಸಿದ್ದರು. ಆನಂದ ಕಕರ್ಿ ಹಾಗೂ ಅಶೋಕ ಮಳಗಲಿ ನಿರೂಪಿಸಿದರು. ಎಸ್. ಜಿ. ಸಿದ್ನಾಳ ಸ್ವಾಗತಿಸಿದರು. ಅಡಿವೆಪ್ಪ ಬೆಂಡಿಗೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಂದ ನಿರಾಕಾರಿ ವಂದಿಸಿದರು.
ಮಹಾನಂದಾ ಪರುಶೆಟ್ಟಿ, ಸುವಣರ್ಾ ಗುಡುಸ, ಅನ್ನಪೂಣರ್ಾ ಮಳಗಲಿ, ಸದಾನಂದ ಬಸೆಟ್ಟಿ, ಸತೀಶ ಚೌಗಲಾ, ಸಚಿನ್ ಶಿವಣ್ಣವರ, ರಾಜು ಪದ್ಮಣ್ಣವರ ಮುಂತಾದವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.