'ಇಡೀ ದೇಶವೇ ಕೇರಳಿಗರೊಂದಿಗಿದೆ'
ಹೊಸದಿಲ್ಲಿ 25: 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಓಣಂ ಹಬ್ಬದ ಸ್ಫೂತರ್ಿ ಕೇರಳದ ಜನರಲ್ಲಿ ಹೊಸ ಶಕ್ತಿ ಚೈತನ್ಯವನ್ನು ತುಂಬಿ ಎಲ್ಲ ಪ್ರತಿಕೂಲತೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಹೊಸ ಬಾಳನ್ನು ಕಟ್ಟುವ ಧೈರ್ಯ, ಸ್ಥೈರ್ಯ ನೀಡಲಿ' ಎಂದು ಹೇಳಿದ್ದಾರೆ. ಕೇರಳದ ಜನರ ಈ ಕಷ್ಟಕಾಲದಲ್ಲಿ ಇಡಿಯ ದೇಶವೇ ಅವರೊಂದಿಗೆ ಇದೆ; ಅವರ ಸುಖ, ಸಂತೋಷ, ಸಮೃದ್ಧಿಗೆ ದೇಶದ ಜನರು ಒಂದಾಗಿ ಪ್ರಾಥರ್ಿಸುತ್ತಾರೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಕಳೆದ ಆಗಸ್ಟ್ 8ರಿಂದ ನಿರಂತರ ಜಡಿ ಮಳೆ ಕಂಡು ವ್ಯಾಪಕ ಭೂಕುಸಿತ ಮತ್ತು ಪ್ರವಾಹಕ್ಕೆ 231 ಜನರನ್ನು ಬಲಿ ಪಡೆದ ಈ ಶತಮಾನದ ಅತ್ಯಂತ ಘೋರ ನೈಸಗರ್ಿಕ ಪ್ರಕೋಪವನ್ನು ತಾಳಿಕೊಂಡು ಹೊಸ ಬದುಕನ್ನು ರೂಪಿಸಿಕೊಳ್ಳುವ ಶಕ್ತಿ, ಚೈತನ್ಯವನ್ನು ಕೇರಳದ ಜನರಿಗೆ ದೇವರು ಕರಣಿಸಲೆಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 