ಜುಗೂಳ ಗ್ರಾಮಸ್ಥರು ಪುಣ್ಯವಂತರು: ಅದೃಷ್ಯ ಕಾಡಸಿದ್ದೇಶ್ವರಶ್ರೀ

ಜುಗೂಳ ಗ್ರಾಮಸ್ಥರು ಪುಣ್ಯವಂತರು: ಅದೃಷ್ಯ ಕಾಡಸಿದ್ದೇಶ್ವರಶ್ರೀ The villagers of Jugoola are pious: Adrishya Kadasiddeshwarashri

ಕಾಗವಾಡ 31: ಜುಗೂಳ ಗ್ರಾಮಸ್ಥರ ಭಕ್ತಿಗೆ ಮನಸೋತ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ಜುಗೂಳ ಗ್ರಾಮವನ್ನು ತಮ್ಮ ತವರೂರು ಎಂದು ಬಣ್ಣಿಸಿದ್ದರು. ಅದರಂತೆ ಸಿದ್ದೇಶ್ವರ ಶ್ರೀಗಳು ಸಹ ಈ ಗ್ರಾಮದ ಮೇಲೆ ಅಪಾರವಾದ ಪ್ರೀತಿ ಹೊಂದಿದ್ದರು. ಕಳೆದ 75 ವರ್ಷಗಳಿಂದ ಇಬ್ಬರೂ ಶ್ರೀಗಳು ತಮ್ಮ ಪ್ರವಚನದ ಮುಖಾಂತರ ಇಲ್ಲಿ ಜ್ಞಾನದ ಹೊಳೆಯನ್ನೆ ಹರಿಸಿದ್ದು, ಇಲ್ಲಿಯ ಗ್ರಾಮಸ್ಥರು ನಿಜಕ್ಕೂ ಧನ್ಯರು ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಜಗದ್ಗುರು ಅದೃಷ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. 

ಅವರು ಬುಧವಾರ ದಿ. 31 ರಂದು ತಾಲೂಕಿನ ಜುಗೂಳ ಗ್ರಾಮದಲ್ಲಿ ಸಿದ್ದೇಶ್ವರ ಶ್ರೀಗಳ ತೃತೀಯ ಗುರುನಮನ ಮಹೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಿದ್ದರು.  

ಪ್ರತಿಯೊಬ್ಬರು ಪ್ರಾಮಾಣಿಕತೆಯಿಂದ ಜೀವನ ಸಾಗಿಸಿ, ಶ್ರದ್ಧೆ ಭಕ್ತಿಯಿಂದ ಗುರು-ಹಿರಿಯರನ್ನು, ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿಗಳು ಸುಳ್ಳು ಮಾತನಾಡದೇ ಪ್ರಾಮಾಣಿಕತೆ ಬೆಳಿಸಿಕೊಳ್ಳಬೇಕು. ಇದೇ ಸಂದೇಶವನ್ನು ಸಿದ್ದೇಶ್ವರ ಶ್ರೀಗಳು ಜಗತ್ತಿಗೆ ನೀಡಿದ್ದಾರೆ. ಇದನ್ನು ಪಾಲನೆ ಮಾಡಿದಾಗ ಮಾತ್ರ ಅವರಿಗೆ ಗುರುನಮನ ಸಲ್ಲಿಸಿದಂತಾಗುತ್ತದೆ ಎಂದರು. 

ವಿಜಯಪೂರ ಜ್ಞಾನ ಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಜುಗೂಳ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಗುರುನಮನ ಮಹೋತ್ಸವ ಆಚರಿಸುತ್ತಿದ್ದೀರಿ. ಇದಕ್ಕೆ ದಾನಿಗಳು ಮುಂದೆ ಬಂದಿದ್ದು, ಬರುವ ವರ್ಷ ಮಲ್ಲಿಕಾರ್ಜುನ ಸ್ವಾಮಿಜಿಗಳು ಇಲ್ಲಿಗೆ ಪಾದಾರೆ​‍್ಣ ಮಾಡಿ 75 ಪೂರ್ಣಗೊಳ್ಳಲಿದ್ದು, ಇದರ ಸ್ಮರಣಾರ್ಥವಾಗಿ ಅದ್ದೂರಿ ಕಾರ್ಯಕ್ರಮವನ್ನು ಆಚರಿಸೋಣವೆಂದರು. 

ಈ ಕಾರ್ಯಕ್ರಮಕ್ಕೆ ಅಶೋಕ ಸುಂಕೆ, ಅಶೋಕ ಕಾಗವಾಡೆ, ಚಿದಾನಂದ ಮಿಣಚೆ ಮತ್ತು ಕಲ್ಲಪ್ಪಾ ಘಟಗೆ ದಂಪತಿಗಳು ತಲಾ 51 ಸಾವಿರದಂತೆ ದೇಣಿಗೆ ನೀಡಿದ್ದು, ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಮುಂದಿವ ವರ್ಷದ ಕಾರ್ಯಕ್ರಮಕ್ಕೆ ರಿತೇಶ ಪಾಟೀಲ, ಮನೋಹರ ಪಾಟೀಲ, ಕಲ್ಲಪ್ಪಾ ಘಟಗೆ ಮತ್ತು ಡಾ. ಮಲ್ಲೇಶ ಕಾಗವಾಡೆ ಇವರು ತಲಾ 51 ಸಾವಿರದಂತೆ ದೇಣಿಗೆ ಘೋಷಣೆ ಮಾಡಿದರು. ಇವರನ್ನು ಸ್ವಾಮಿಜಿಗಳು ಗೌರವಿಸಿದರು. 

ಸಾನಿಧ್ಯವನ್ನು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಮಠದ ಡಾ. ಅಭಿನವ ಬ್ರಹ್ಮಾನಂದ ಶ್ರೀಗಳು, ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು, ಸದಲಗಾ ಗೀತಾಶ್ರಮದ ಡಾ. ಶ್ರದ್ಧಾನಂದ ಶ್ರೀಗಳು, ಟಾಕಳಿ ಗುರುದೇವಾಶ್ರಮದ ಶಿವದೇವ ಶ್ರೀಗಳು, ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ವಹಿಸಿದ್ದರು. 

ಕಾರ್ಯಕ್ರಮ ಯಶಸ್ವಿಗೊಳಿಸಲು ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಅನೀಲ ಕಡೋಲೆ, ತಾತ್ಯಾಸಾಬ ಪಾಟೀಲ, ಸಿದಗೌಡಾ ಪಾಟೀಲ, ಪ್ರಕಾಶ ಪಾಟೀಲ, ನರಸಿಂಗ ಮಿಣಚೆ, ಕಿರಣ ಮಿಣಚೆ, ರುದ್ರಗೌಡಾ ಪಾಟೀಲ, ಬಸವರಾಜ ನಂದಾಳೆ, ಚಿದಾನಂದ ಪಾಟೀಲ, ರಾಜು ಮಿರ್ಜೆ ಸೇರಿದಂತೆ ಗ್ರಾಮಗ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಶ್ರಮಿಸಿದರು.