ಶಿಕ್ಷಣ ವೃತ್ತಿ ಬಹಳ ಪವಿತ್ರವಾದುದು: ಆರ್.ಎಚ್.ಮೇಲಿನಮನಿ
The teaching profession is a very sacred one: R.H. Melinamani
ರಬಕವಿ-ಬನಹಟ್ಟಿ 31: ಶಿಕ್ಷಕ ದೇಶದ ಭವಿಷ್ಯವಾದ ವಿಧ್ಯಾರ್ಥಿಗಳಿಗೆ ಬೋಧನೆಯ ಜೊತೆ ರಾಷ್ಟ್ರೇ್ರಮ ಬೆಳಸುವ ಕಾಯಕ ಮಾಡಿ, ವೃತ್ತಿಗೆ ಗೌರವ ಹೆಚ್ಚಿಸುವಾತ. ಶಿಕ್ಷಣ ವೃತ್ತಿ ಬಹಳ ಪವಿತ್ರವಾದುದು ಬಳವಾಡರು ಈ ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಈ ಮಟ್ಟದಲ್ಲಿ ಬೀಳ್ಕೊಡುಗೆ ಮಾಡುತ್ತಿರುವುದು ಅವರ ಮೇಲಿನ ಅಭಿಮಾನ ತಿಳಿಸುತ್ತದೆ ಎಂದು ಮುಖ್ಯ ಗುರು ಆರ್.ಎಚ್.ಮೇಲಿನಮನಿ ಹೇಳಿದರು. ಅವರು ನಾವಲಗಿ ಗ್ರಾಮದ ಕೆಪಿಎಸ್ ಶಾಲೆಯ ಶಿಕ್ಷಕ ವೈ.ಎಸ್. ಬಳವಾಡ ವೃತ್ತಿಯಿಂದ ನಿವೃತ್ತಿ ಹೊಂದಿದ ಬಿಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು.
ಬಳವಾಡ ಸರ್ ಪರಿಣಾಮಕಾರಿ ಬೋಧನೆ ಜೊತೆಗೆ ಪ್ರತಿ ಮಕ್ಕಳೆಡೆಗೂ ಗಮನ ಹರಿಸುತ್ತಿದ್ದರು. ಕಲಿಸುವುದು ಬಿಟ್ಟು ಬೇರೇನೂ ಗೊತ್ತಿಲ್ಲದ ಇಂಥ ಶಿಕ್ಷಕರು ನಮಗೆ ಗುರುವಾಗಿ ದೊರೆತಿದ್ದು ನಮ್ಮ ಭಾಗ್ಯ. ಮುಂದಿನ ಪೀಳಿಗೆಗೆ ನಮ್ಮ ಗುರುಗಳು ಮಾದರಿಯಾಗಿದ್ದಾರೆ ಎಂದು ಕಾಡೇಶ ಕಂಪು ಹೇಳಿದರು. ಶಿಕ್ಷಕ ವೃತ್ತಿಯಲ್ಲಿನ ಸೇವೆಯ ಅನುದಿನವೂ ನನಗೆ ಅಪಾರ ತೃಪ್ತಿ ಮೂಡಿಸಿದೆ. ಶಿಕ್ಷಕನಾಗಿ ವಿದ್ಯಾರ್ಜನೆ ನೀಡಿದ್ದು ಸಾರ್ಥಕತೆಯ ಬದುಕಾಗಿದ್ದು, ನನಗೆ ಮಕ್ಕಳ ಮೇಲಿನ ಪ್ರೇಮ ನಿವೃತ್ತಿಯ ಬಳಿಕವೂ ಮುಂದುವರೆಯುತ್ತದೆಂದು ನಿವೃತ್ತ ಶಿಕ್ಷಕ ವೈ.ಎಸ್.ಬಳವಾಡ ಹೇಳಿದರು.
ಬಳವಾಡ ದಂಪತಿಗಳಿಗೆ ವಿವಿಧ ಶಾಲೆಗಳಿಂದ, ಸಂಘಟನೆಗಳಿಂದ ಸನ್ಮಾನ ನೆರವೇರಿದವು. ವೇದಿಕೆಯಲ್ಲಿ ಎಂ.ಎಸ್.ಲೋಕುರ, ಎಂ.ಎಂ.ಕಾತ್ರಾಳ, ಬಿ.ಎನ್.ಕುಶಪ್ಪನವರ, ಎಸ್.ಎಂ. ಯಲಬುರ್ಗಿ, ಗೀತಾ ತೆಳಗಿನಮನಿ, ಆಶಾ ಕವಟಗೊಪ್ಪ, ಎಸ್.ಎ.ಹುಲ್ಯಾಳ, ಎಸ್.ಟಿ.ಗುಡ್ಡೆನ್ನವರ, ಕೆ.ಬಿ.ಗಡಕರ, ಎ.ವಿ.ಬರಗಡಗಿ, ಉಪಾಧ್ಯಕ್ಷ ಬಸವರಾಜ ಗಣಿ, ಗಂಗಪ್ಪ ಅಮ್ಮಲಜೇರಿ, ಗುರು ಮರಡಿಮಠ, ಎಂ.ಆರ್.ವಾಲಿ, ಎಂ.ಬಿ.ಗಣಿ, ದೇವದಾಸ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 