ಜನಾರ್ದನ ರೆಡ್ಡಿ ಮೇಲೆ ಇಟ್ಟ ಗುರಿ ಹುಡುಗನಿಗೆ ಬಿದ್ದಿದೆ
The target set on Janardhana Reddy has fallen on the boy
ಬಳ್ಳಾರಿ: 'ಜನವರಿಯಲ್ಲಿ ಕಾಂಗ್ರೆಸ್ ನವರು ಕೆಟ್ಟ ಸಂದೇಶ ಕೊಡಲು ಹೋಗಿದ್ದಾರೆ.ಕಾಂಗ್ರೆಸ್ ಅಧಿಕಾರ ಪಡೆಯಲು ಬಳ್ಳಾರಿ ಜಿಲ್ಲೆ ಕಾರಣ,ಆ ಜಿಲ್ಲೆಯ ಗಾಂಭಿರ್ಯತೆ, ಇತಿಹಾಸ, ಜನರ ಇತಿಹಾಸ ಕಾಪಾಡಬೇಕಿದೆ,ನೀವು ಈ ವರ್ಷ ಎಲ್ಲಿರುತ್ತೀರಿ ಎಂದು ನೋಡಿಕೊಳ್ಳಿ' ಎಂದು ಕೇಂದ್ರ ಸಚಿವ ವಿ.ಸೋಮಣ್ಣ ರವಿವಾರ ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ''ರಾಮಾಯಣ ಬರೆದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ಹೆಸರಲ್ಲಿ ಪಾಪದ ಕೆಲಸ ಮಾಡುತ್ತಿದ್ದೀರಿ.ಆ ಪಾಪದ ಕೆಲಸ ನಿಮ್ಮನ್ನು ಬಿಡುವುದಿಲ್ಲ. ಪುಣ್ಯಪುರುಷನ ಹೆಸರನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಬಾರದು.ಸತೀಶ್ ರೆಡ್ಡಿ, ಭರತ್ ರೆಡ್ಡಿ ಯಾರು?,ನಾವು ಯಾರು ಇಲ್ಲಿ ಉಳಿಯಲು ಬಂದಿಲ್ಲ' ಎಂದು ವಾಗ್ದಾಳಿ ನಡೆಸಿದರು.
'ಅಂದು ಬಳ್ಳಾರಿಯ ದುರ್ಗಮ್ಮ ದೇವಿಯ ರೂಪದಲ್ಲಿ ಶ್ರೀರಾಮುಲು ಬರಲಿಲ್ಲ ಅಂದರೆ ಜನಾರ್ದನ ರೆಡ್ಡಿ, ಅವರ ಕುಟುಂಬದ ಪರಿಸ್ಥಿತಿ ಏನಾಗಿರುತ್ತಿತ್ತು. ನನ್ನ 45 ವರ್ಷದ ರಾಜಕೀಯ ಇತಿಹಾಸದಲ್ಲಿ ಇಂತಹ ದುರ್ಘಟನೆ ನೋಡಿಲ್ಲ.ಕಾಂಗ್ರೆಸ್ ನಾಯಕರಿಗೆ ನಾನು ಹೇಳುವೆ, ನಿಮ್ಮಿಂದ ಸಾಕಾಗಿದೆ.ಜನಾರ್ದನ ರೆಡ್ಡಿ ಮೇಲೆ ಗುರಿ ಇಟ್ಟು ಹೋಡೆಯೋಕೆ ಹೋಗಿದ್ದರು, ಆ ಹುಡುಗನ ಮೇಲೆ ಬಿದ್ದಿದೆ.ರಾಜಶೇಖರ ಕುಟುಂಬದ ಸ್ಥಿತಿ ಏನಿದೆ, ಅವರ ಕುಟುಂಬದ ಜತೆಗೆ ಮಾತನಾಡಿದೆ' ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಟಾರ್ಗೆಟ್ ಮಾಡಬೇಡಿ, ನೀವು ಮಾಡಿರೋ ಪಾಪ ನಿಮಗೆ ಸುತ್ತುತ್ತದೆ.ಇಂತಹವರಿಗೆ ಆದ್ಯತೆ ಕೊಟ್ಟರೆ , ನಿಮಗೆ ಮುಳ್ಳಾಗುತ್ತದೆ ನೈತಿಕತೆ ಇದ್ದರೆ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸಿ ಸೋಮಣ್ಣ ಸವಾಲು ಹಾಕಿದರು.
ಬಳ್ಳಾರಿ ಬ್ಯಾನರ್ ಗಲಾಟೆ ಮತ್ತು ಗುಂಡಿನ ದಾಳಿ ಘಟನೆಯನ್ನು ಸಿಬಿಐ ಗೆ ಕೊಡಬೇಕಿದೆ, ಇಲ್ಲ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕಿದೆ.ಕೆಟ್ಟ ವ್ಯವಸ್ಥೆಯನ್ನು ಸೃಷ್ಟಿ ಮಾಡುವವರಿಗೆ ಅವಕಾಶ ಮಾಡಿ ಕೊಡಬೇಡಿ.ಇನ್ನೂ ನಾಲ್ಕೈದು ತಿಂಗಳಲ್ಲಿ ಕಾಂಗ್ರೆಸ್ ಧೂಳಿಪಟ ಆಗುತ್ತದೆ. ಆರ್ ಸಿಬಿ ವಿಜಯೋತ್ಸವ ಘಟನೆಯಲ್ಲಿ ದಯಾನಂದ್ ತಲೆದಂಡ ಮಾಡಿದಿರಿ, ಇಲ್ಲಿ ಎಸ್ ಪಿ ನ ತಲೆದಂಡ ಮಾಡಿದಿರಿ.ಸಿಎಂ ಸಿದ್ದರಾಮಯ್ಯನವರಿಗೆ ಮೂರು ಕಾಸಿನ ಮರ್ಯಾದೆ ಕೊಡುತ್ತಿಲ್ಲ. ಸಿದ್ದರಾಮಯ್ಯ ಗಾಳಿಪಟದ ಬಾಲ ಆಗಿದ್ದಾರೆ, ಯಾವಾಗ ಕಿತ್ತುಕೊಂಡು ಹೋಗುತ್ತಾರೆ ಗೊತ್ತಿಲ್ಲ' ಎಂದರು.
''ದ್ವೇಷ ಭಾಷಣ ಮಸೂದೆ ಅಡಿಯಲ್ಲಿ ಭರತ್ ರೆಡ್ಡಿ ಯನ್ನು ಯಾಕೆ ಅರೆಸ್ಟ್ ಮಾಡಿಲ್ಲ. ಆತನ ಭಾಷೆ ನಾನು ನೋಡಿದೆ, ಆತನ ಮಾತುಗಳು.ಇಂತಹ ಭಾಷೆ ಬಳಕೆ ಯಾವತ್ತು ನೋಡಿಲ್ಲ, ಯಾವ ಸ್ಕೂಲ್ ನಲ್ಲಿ ಓದಿದ್ದಾನೋ ಗೊತ್ತಿಲ್ಲ. ಭರತ್ ರೆಡ್ಡಿ ನನ್ನ ಬಳಿ ಬರಲಿ, 6 ತಿಂಗಳು ಟ್ರೈನಿಂಗ್ ಕೊಡುತ್ತೇನೆ'' ಎಂದು ಸೋಮಣ್ಣ ಹೇಳಿದರು.
ಗೃಹ ಮಂತ್ರಿ ಪರಮೇಶ್ವರ್ ಅವರದ್ದು ಪಾಪ ಏನೂ ನಡೆಯುತ್ತಿಲ್ಲ, ಅಮಾಯಕರು ಅವರು.ರಬ್ಬರ್ ಸ್ಟಾಂಪ್ ಆಗಿದ್ದಾರೆ ಸಿದ್ದರಾಮಯ್ಯ ಅವರಿಗೆ ಕುರ್ಚಿ ಉಳಿಯಬೇಕಾಗಿದೆ'' ಎಂದರು,
'ಭರತ್ ರೆಡ್ಡಿ, ಶ್ರೀರಾಮುಲು, ಜನಾರ್ದನ ರೆಡ್ಡಿ ಇಬ್ಬರನ್ನು ಸೇರಿಸಿದ್ದಾನೆ.ಜನಾರ್ದನ ರೆಡ್ಡಿ ಗೆ ಒಂದು ಇತಿಹಾಸವಿದೆ.ಶ್ರೀರಾಮುಲು- ಜನಾರ್ದನ ರೆಡ್ಡಿ ಒಂದಾಗಿದ್ದರೆ ನೀವ್ಯಾಕೆ ಬರುತ್ತಿದ್ದಿರಿ' ಎಂದು ಹೇಳಿದರು.
'ನಾನು ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡುವೆ, ಇಂತಹ ಪಾಪದ ಕೆಲಸಕ್ಕೆ ಕೈ ಜೋಡಿಸಬಾರದು. ಇಂತಹ ಸಮಯದಲ್ಲಿ ಅವರ ಜತೆ ನಿಲ್ಲಬಾರದು' ಎಂದು ಸೋಮಣ್ಣ ಹೇಳಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 