ವಿಳಂಬ ಧೋರಣೆ ಮುಂದುವರೆದರೆ ಹೋರಾಟ ತೀವ್ರ : ಕುತ್ಬುದ್ದೀನ್ ಖಾಜಿ
The struggle will intensify if the delay continues: Qutbuddin Qazi
ರಬಕವಿ-ಬನಹಟ್ಟಿ 28: ಕೇಂದ್ರ ಸರ್ಕಾರ ಹಾಗೂ ರೈಲ್ವೆ ಅಧಿಕಾರಿಗಳು ಮೀನಮೇಷ ಮಾಡದೆ ಕುಡಚಿಯಿಂದ ಜಮಖಂಡಿಯ ವರೆಗೆ ರೈಲುಮಾರ್ಗ ಕಾಮಗಾರಿ ನಿರಂತರ ಮುನ್ನಡೆಸಲೇಬೇಕು. ಜನಪ್ರತಿನಿಧಿಗಳ ಪೂರಕ ಭರವಸೆ ಹಾಗೂ ಕಾಮಗಾರಿ ಪ್ರಾರಂಭದ ನಂತರ ಬೆಳಗಾವಿ ಜಿಲ್ಲೆ ಕುಡಚಿಯಲ್ಲಿ 10 ದಿನಗಳ ಕಾಲ ನಡೆದ ಸತ್ಯಾಗ್ರಹ ಮೊಟಕುಗೊಳಿಸಿದ್ದೇವೆ. ವಿಳಂಬ ಧೋರಣೆ ಮುಂದುವರೆದರೆ ಮತ್ತೆ ಹೋರಾಟ ತೀವ್ರ ಗೊಳಿಸುವುದಾಗಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಚಿ-ಬಾಗಲಕೋಟೆ ಮಾರ್ಗದ ಒಟ್ಟು 3000 ಎಕರೆ ಯಷ್ಟು ಭೂಮಿ ಸಂಪೂರ್ಣ ಸರ್ಕಾರದ ಸ್ವಾಧೀನವಾಗಿದೆ. ಸಚಿವ ಸತೀಶ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರ ಸ್ಪಂದನೆ ಮೇರೆಗೆ ಕೆಲಸ ನಿಲ್ಲಿಸದೆ ಮುಂದುವರಿಸುವ ಭರವಸೆ ನೀಡಿದ್ದು ಸ್ವಾಗತ. ಅದರಂತೆ ಕಾಮಗಾರಿಗೆ ವೇಗ ದೊರಕಿರುವುದರಿಂದ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದರು.
ಕಾಮಗಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕಾರ್ಯ ಸಂಪೂರ್ಣಗೊಂಡಿದೆ. ರಾಜ್ಯದ ವಿರುದ್ಧ ಹೋರಾಟ ನಮ್ಮದಲ್ಲ. ಬದಲಾಗಿ ಕಾಮಗಾರಿಯ ಹೊಣೆ ಕೇಂದ್ರ ಸರ್ಕಾರದ್ದಾಗಿದ್ದು, ಈ ಭಾಗದ ಸಂಸದರು ಹಾಗೂ ರಾಜ್ಯ ರೈಲ್ವೆ ಮಂತ್ರಿಗಳ ಇಚ್ಛಾಶಕ್ತಿಯಿಂದ 2027 ರೊಳಗಾದರೂ ಕಾಮಗಾರಿ ಮುಗಿಸಬೇಕೆಂದು ಆಗ್ರಹಿಸಿದರು. ರೈತ ಮುಖಂಡ ಸುಭಾ ಶಿರಬೂರ, ರಾಜಶೇಖರ ಸೊರಗಾಂವಿ, ಡಾ. ರವಿ ಜಮಖಂಡಿ, ಬ್ರಿಜ್‌ಮೋಹನ ಡಾಗಾ, ಭುಜಬುಲಿ ಕೆಂಗಾಲಿ, ಈರ್ಪ ಹಿಪ್ಪರಗಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 