ರಾಣೆಬೆನ್ನೂರಲ್ಲಿ ಸಂಸ್ಕೃತಿ ಪ್ರತಿಬಿಂಬಿಸಿದ ಜಾನಪದ ಸಾಂಸ್ಕೃತಿಕ ಕಲಾ ವೈಭವ

ರಾಣೆಬೆನ್ನೂರಲ್ಲಿ  ಸಂಸ್ಕೃತಿ ಪ್ರತಿಬಿಂಬಿಸಿದ ಜಾನಪದ ಸಾಂಸ್ಕೃತಿಕ ಕಲಾ ವೈಭವ The splendor of folk cultural art reflecting culture in Ranebennur

                 ರಾಣೆಬೆನ್ನೂರು 18: ಇಂದಿನ ಆಧುನಿಕ ಬದುಕಿನ  ಪಾಚ್ಚಿಮಾತ್ಯ  ಸಂಸ್ಕೃತಿಯ ಆಡಂಬರದ ಭರಾಟೆಯಲ್ಲಿ ನಮ್ಮ ನಿಜ ಸಂಸ್ಕೃತಿಯ ಜಾನಪದ ಕಲೆ, ಸಾಹಿತ್ಯ,ಸಂಗೀತ, ನಾಟಕ, ಗೀಗಿ,ಲಾವಣಿ ಸಾಂಪ್ರದಾಯಿಕ ಪದಗಳು ಸೇರಿದಂತೆ ಬಹು ಸಂಸ್ಕೃತಿಯ ಸಮೃದ್ಧ ಸಂಸ್ಕೃತಿ  ನೇಪಥಕ್ಕೆ ಸರಿಯುವಂತಾಗಿದೆ. ಎಂದು ಶಹರ ಠಾಣಾ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರು ಆತಂಕ ವ್ಯಕ್ತಪಡಿಸಿದರು.  ಅವರು ನಗರದ ಹಳೆ ಅಂತರವಳ್ಳಿ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ತಿಕೋತ್ಸವದ ನಿಮಿತ್ತ, ಅನುರಾಗ ಸಂಗೀತ  (ಪ.ಪಂ.) ಮಹಿಳಾ ಕಲಾ ಸಂಸ್ಥೆ ಆಯೋಜಿಸಿದ್ದ, ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.    ನಾಟಕ ನೋಡಿ ನೀತಿ ಕಲೀತರು.ಸಿನಿಮಾ ನೋಡಿ ದಾರಿಬಿಟ್ಟರು ಎನ್ನುವ ಗಾದೆ ಮಾತು ಗ್ರಾಮಾಂತರದಲ್ಲಿ ಇಂದಿಗೂ ಹರಿದಾಡುತ್ತಿದೆ. 

               ಇದು ಕೇವಲ ಗಾದೆ ಮಾತಲ್ಲ ವಾಸ್ತವಿಕ ಸತ್ಯ. ಹಿರಿಯರ ಅನುಭವದ ಮಾತುಗಳು ಇವುಗಳು ಗ್ರಾಮ ಸಂಸ್ಕೃತಿಯ ಪ್ರತಿಕಗಳಾಗಿವೆ ಎಂದರು. ಪಾಚ್ಚಿ ಮಾತ್ಯ ಸಂಸ್ಕೃತಿ ಕ್ಷಣಿಕ  ಸುಖ ನೀಡುವುದು. ಆದರೆ, ನಮ್ಮ ನಿಜ ಸಂಸ್ಕೃತಿಯ ಜಾನಪದ ಕಲೆಗಳು ಶಾಶ್ವತ ಸುಖ ನೀಡುವುದರ ಮೂಲಕ, ಭವಿಷ್ಯದ ಮಕ್ಕಳು ತಮ್ಮ ನಿತ್ಯದ ಬದುಕಿನಲ್ಲಿ ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಗಡ್ಡೇಪ್ಪ ಗುಂಜುಟಿಗಿ ಅವರು ಸಾಧ್ಯಂತವಾಗಿ ವಿವರಿಸಿ ಮಾತನಾಡಿದರು.   ಕಲೆ ಉಳಿಯಬೇಕಾದರೇ, ತಮ್ಮ ಬದುಕಿನಲ್ಲಿ ನೈಜ ಸಂಸ್ಕೃತಿಯ ಜನಪದ ಕಲೆಯನ್ನು ಅಳವಡಿಸಿಕೊಂಡಿರುವ ನಿಜ ಮತ್ತು ನೈಜ ಕಲಾವಿದರು ಉಳಿದಾಗ ಮಾತ್ರ ಸಮೃದ್ಧ ಜಾನಪದ ಸಂಸ್ಕೃತಿ  ಉಳಿಯಲು ಸಾಧ್ಯ ಎಂದ ಅವರು ಸಮಾಜ ಇಂತಹ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರೋತ್ಸಾಹಿಸಬೇಕಾದ ಇಂದಿನ ಅಗತ್ಯವಿದೆ ಎಂದರು.

                  ಜಾನಪದ ವಿದ್ವಾಂಸ ಡಾ. ಕೆ. ಸಿ. ನಾಗರಜ್ಜಿ ಅವರು, ಭಾರತೀಯ ಸಂಸ್ಕೃತಿಯಲ್ಲಿ ಜನಪದಗಳ ಕಲೆ ಮತ್ತು ಸಂಸ್ಕಾರ ಕುರಿತು ಮಾತನಾಡಿದರು.    ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷ ಮಂಜುನಾಥ ಮಣೇಗಾರ, ಅವರು ಅಧ್ಯಕ್ಷತೆ ವಹಿಸಿದ್ದರು.     ಮುಖ್ಯ ಅತಿಥಿಗಳಾಗಿ ದೊಡ್ಡಪೇಟೆ  ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ್ ಜಂಬಗಿ, ನ್ಯಾಯವಾದಿ ಗೋಪಾಲ ಗುತ್ತಲ, ಯುವನಾಯಕರಾದ ತಮ್ಮಣ್ಣ ಕೊಪ್ಪದ, ವಿನಯಗೌಡ ಬಾಳನ ಗೌಡ್ರ, ಸೋಮಣ್ಣ ಹಡಗಲಿ, ಸೇವೆಕಿ  ಪ್ರೇಮಾ, ನಾಟ್ಯ ವಿದುಷಿ ಮಮತಾ ನಾಡಿಗೇರ, ಸಂಗೀತ ಶಿಕ್ಷಕಿ ಯಶೋಧ ಗುಡಿಗುಡಿ,  ನ್ಯೂಸ್ ಪಲ್ಸ್‌ ವಾಹಿನಿಯ ಮಾರುತಿ ಮುಂಡರಗಿ, ಸಂಗೀತಾ ಪಾಟೀಲ, ವಿನಾಯಕ ತಳವಾರ ಮತ್ತಿತರರು ಉಪಸ್ಥಿತರಿದ್ದರು. ನಂತರ ನಡೆದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದಲ್ಲಿ ಲಕ್ಷ್ಮಿ ಬೇವಿನಹಳ್ಳಿ ಶಾಷ್ಟ್ರೀಯ ಸಂಗೀತ,

               ಮಲ್ಲೇಶಪ್ಪ ಮೆಣಸಿನಹಾ ಳ ಸಂಗಡಿಗರ ಭಜನೆ, ಗುಡ್ಡರಾಜ ಹಲಗೇರಿ  ಜನಪದ ಸಂಗೀತ, ಕರಬಸಪ್ಪ ಮಾವಿನತೋ ಪ ತಬಲಾ ವಾದನ, ಪ್ರವೀಣ ಶಿವಪ್ಪನವರ ತತ್ವಪದಗಳು, ಜ್ಯೋತಿ- ರಕ್ಷಿತಾ  ಸಂಗಡಿಗರ ಸಾಂಪ್ರದಾಯಕ ಪದಗಳು, ಸವಿತಾ ಸಂಗಡಿಗರ ಆದಿವಾಸಿಗಳ ನೃತ್ಯ, ಮಾರ್ತಾಂಡ ಭೈರವ ಶಾಲಾ ವಿದ್ಯಾರ್ಥಿಗಳ ಶಾಸ್ತ್ರೀಯ ನೃತ್ಯ ಸೇರಿದಂತೆ ಇತರೆ ಸಂಸ್ಕೃತಿ ಪ್ರತಿಬಿಂಬಿತ  ಕಲೆಗಳ  ಪ್ರದರ್ಶನ, ಸಾರ್ವಜನಿಕರ ಗಮನ ಸೇಳೆದವು. ಚನ್ನಪ್ಪನವರ್ ಪ್ರಾರ್ಥಿಸಿದರು. "ಅಭಿರುಚಿ" ಕೆ.ಎಸ್‌. ನಾಗರಾಜ, ಸ್ವಾಗತಿಸಿ ನಿರೂಪಿಸಿದರು. ಗಣೇಶ್ ಗುಡಿಗುಡಿ, ವಂದಿಸಿದರು. ನಂತರ ಅಯ್ಯಪ್ಪ ಸ್ವಾಮಿ ದೇವಾಲಯದ ಧರ್ಮದರ್ಶಿ ಮಂಜುನಾಥ ಮಣೇಗಾರ ಹಾಗೂ ಭಕ್ತರು ಸಾಮೂಹಿಕವಾಗಿ ಕಾರ್ತಿಕೋತ್ಸವದ ಸಾವಿರಾರು  ದೀಪಗಳನ್ನು ಪ್ರಜ್ವಲನಗೊಳಿಸಿದರು.