ಪ್ರಜಾಸೌಧ ಸ್ಥಳ ವಿರೋಧಿಸಿ ಒಂಬತ್ತನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಪ್ರಜಾಸೌಧ ಸ್ಥಳ ವಿರೋಧಿಸಿ ಒಂಬತ್ತನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ The sit-in protest against the Praja Soudha site has entered its ninth day

ತಾಳಿಕೋಟೆ 04 : ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟ ಅವಧಿ ಧರಣಿ ಸತ್ಯಾಗ್ರಹವು ಬುಧವಾರ ಎಂಟನೇ ದಿನದ ಸತ್ಯಾಗ್ರಹವು ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮಾಜ ತಾಳಿಕೋಟಿ ವತಿಯಿಂದ ಧರಣಿ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ತಾಲೂಕಾ ಹೋರಾಟ ಸಮಿತಿ ಉಪಾಧ್ಯಕ್ಷ ವಿಜಯಸಿಂಗ್ ಹಜೇರಿ ಮಾತನಾಡಿ ಈ ಹೋರಾಟ ತಾಲೂಕಿನ ವಯೋವೃದ್ಧರ, ಮಹಿಳೆಯರ, ಅಂಗವಿಕಲರ, ರೈತರ ಹಾಗೂ ತಾಲೂಕಿನ ಸರ್ವರಿಗೂ ಅನಕೂಲವಾಗಲೆಂದು ಈ ಹೋರಾಟನೇ ಹೊರತು ಯಾರ ವಿರುದ್ಧವು ಅಲ್ಲಾ.

ಈ ಹೋರಾಟ ಎಷ್ಟೋ ದಿನಗಳಿಂದ ನಡೆದಿದ್ದರೂ ಸಹ ಜಿಲ್ಲಾ ಆಡಳಿತದಿಂದ ಯಾವುದೇ ರೀತಿಯ ಸ್ಪಂದನೆ ಸಿಗದೆ ಇರುವುದರಿಂದ ಈ ಹೋರಾಟ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ತಲುಪುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ತಾಲೂಕಿನ ಎಲ್ಲಾ ಸಾರ್ವಜನಿಕರಿಗೆ ಅನಕೂಲವಾಗುವ ಹಾಗೆ ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣ ವಾಗಬೇಕು.ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕೂಡಲೇ ಈಗ ನಿಗದಿಪಡಿಸಿದ ಸ್ಥಳವನ್ನು ರದ್ದು ಪಡಿಸಿ ತಾಳಿಕೋಟಿ ಪಟ್ಟಣದಲ್ಲಿರುವ ಸರ್ಕಾರಿ ಜಾಗೆಗಳಲ್ಲಿ ಪ್ರಜಾಸೌಧವನ್ನು ನಿರ್ಮಾಣ ಮಾಡಿ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮಾಜದ ಅಧ್ಯಕ್ಷ ಲಕ್ಷ್ಮಣ ಕಲಾಲ ಮಾತನಾಡಿದರು ಈ ಸಂದರ್ಭದಲ್ಲಿ ಹಿರಿಯರಾದ, ಕೃಷ್ಣಾಜಿ ಕಲಾಲ, ರಾಜು ರಾಜಪುರಿ, ಸಿದ್ದು ಆಕಸಕಾನಿ ಸಚಿನ್, ಆಕಸಕಾನಿ, ಅನಿಲ್ ಕಲಾಲ, ಆನಂದ ಕಲಾಲ, ಅಂಬಾಜಿ ಕಲಾಲ, ರಾಜು ಹಂಚಾಟೆ, ಸಂಗಮೇಶ್ ಕುಂಬಾರ, ಬಸ್ಸು ಅಂಬಿಗೇರ, ಶಿವು ಪಾಟೀಲ,

ಶಶಿ ಮಡಿವಾಳರ, ಜ್ಯೋತಿ ಮಾಂತಾರ, ಮಲ್ಲಮ್ಮ ಬೂದಿಹಾಳ ಕಸ್ತೂರಿ ಕೊನ್ನೂರ, ಶಾರದಾ ಕಟ್ಟಿಮನಿ, ರೇಣುಕಾ, ಸುವರ್ಣ ಕಂಬಾರ, ಬಸಲಿಂಗಮ್ಮ ತಾರ್ನಾಳ, ಮಂಜುಳ ಚೌಹಾಣ್ ಗೌತಮಿ ಚಲವಾದಿ, ಶಾಂತಮ್ಮ ವಜ್ಜಲ, ಲಕ್ಷ್ಮಿ ಮಾದರ, ವಿಜಯಲಕ್ಷ್ಮಿ ಬಿರಾದಾರ, ಅಕ್ಷತಾ ಮಲಗಾಣ, ಸರಸ್ವತಿ ಹುಣಸಗಿ, ಶಕುಂತಲಾ ಹಿರೇಮಠ, ಸಂಗೀತ ಹೊಸಮನಿ, ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್ ಬಿ ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಕಾಸಿನಾಥ ಮುರಾಳ ವಾಸುದೇವ ಹೇಬಸುರ, ಪರಶುರಾಮ ತಂಗಡಗಿ, ಸಂಭಾಜಿ ವಾಡಕರ, ಅಬ್ದುಲ್ ಆಜಿಜ್ ಬಾಗವಾನ, ರಫೀಕ್ ಅತ್ತಾರ,ರಾಜಣ್ಣ ಸೊಂಡೂರ ದಸ್ತಾಗೀರಸಾಬ್ ಕೆಂಭಾವಿ, ಮುರಿಗೆಪ್ಪ ಸರಶೆಟ್ಟಿ, ಮಸೂಮಸಾಬ್ ಕೆಂಬಾವಿ. ಮೆಹೆಬೂಬ ಚೋರಗಸ್ತಿ ,ಅಶೋಕ ಚಿನಗುಡಿ , ಮಂಜು ಶೆಟ್ಟಿ, ಸದ್ದಾಂ ಬೀಳಗಿ, ಪ್ರಕಾಶ್ ಹಜೇರಿ ವಿಠ್ಠಲ್ ಹಜೇರಿ , ಮುದಕಪ್ಪ ಬಡಿಗೇರ, ಮುತ್ತು ಕಶೆಟ್ಟಿ , ಅಮಿತ್ ಮನಗೂಳಿ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ತಿಪ್ಪಣ್ಣ ಸಜ್ಜನ್, , ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ರಾಜು ಹಜೇರಿ , , ಸಿರಸಕುಮಾರ್ ಹಜೇರಿ, ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಗೂ ಮುಖಂಡರು ಭಾಗವಸಿದ್ದರು.