ಪ್ರಜಾಸೌಧ ಸ್ಥಳ ವಿರೋಧಿಸಿ ಏಳನೇ ದಿನಕ್ಕೆ ಮುಂದುವರೆದ ಧರಣಿ ಸತ್ಯಾಗ್ರಹ. ಭೋವಿ ವಡ್ಡರ ಸಮಾಜ ಸಾಥ್‌

ಪ್ರಜಾಸೌಧ ಸ್ಥಳ ವಿರೋಧಿಸಿ ಏಳನೇ ದಿನಕ್ಕೆ ಮುಂದುವರೆದ ಧರಣಿ ಸತ್ಯಾಗ್ರಹ. ಭೋವಿ ವಡ್ಡರ ಸಮಾಜ ಸಾಥ್‌ The sit-in protest against the Praja Soudha site continued for the seventh day. Bhovi Vaddara Samaj

ತಾಳಿಕೋಟೆ   03: ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಸುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಸೋಮುವಾರ ಆರನೇ ದಿನದ ಸತ್ಯಾಗ್ರಹವು ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ ತಾಳಿಕೋಟಿ ವತಿಯಿಂದ ಧರಣಿ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಭೋವಿ ಸಮಾಜದ ಹಿರಿಯರಾದ ಹುಲಗಪ್ಪ ಕಟ್ಟಿಮನಿ ಈ ಹೋರಾಟ ತಾಲೂಕಿನ ಎಲ್ಲಾ ಸಾರ್ವಜನಿಕರಿಗೆ ಅನಕೂಲವಾಗುವ ಹಾಗೆ ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ನಿರ್ಮಾಣ ವಾಗಬೇಕು.

ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕೂಡಲೇ ಈಗ ನಿಗದಿಪಡಿಸಿದ ಸ್ಥಳ ರದ್ದು ಪಡಿಸಬೇಕು ಹಾಗೂ ಪಟ್ಟಣದಲ್ಲಿರುವ ಜಾಗೆಗಳಲ್ಲಿ ಪ್ರಜಾಸೌಧವನ್ನು ನಿರ್ಮಾಣ ಮಾಡಿ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ, ಹಣಮಂತ ಕಟ್ಟಿಮನಿ, ನಾಗಪ್ಪ ಬಳವಾಟ, ದುರ್ಗಪ್ಪ ಕುಲಕರ್ಣಿ ಮುದುಕಪ್ಪ ಡವಳಗಿ, ತಿಮ್ಮಣ್ಣ ಹಗ್ಗಟಗಿ ಹುಲುಗಪ್ಪ ಗಿಡದಮನಿ, ದೇವಪ್ಪ ಹಗಟಗಿ ಬಸವರಾಜ್ ಕಾರಕೂರ, ದುರ್ಗಪ್ಪ ಕಾರ್ಕೂರ, ಪರಸಪ್ಪ ಕಾರ್ಕೂರ, ದುರ್ಗಪ್ಪ ಹಾದಿಮನಿ, ಶ್ರೀಕಾಂತ್ ಚಿಂಚೋಳಿ ಭೀಮಶಿ ಕಾರ್ಕೂರ, ರಾಜು ಹಾದಿಮನಿ, ಶಿವರಾಜ ಬಲವಾಟ ನಾಗರಾಜ್ ಕಟ್ಟಿಮನಿ, ನಾಗಪ್ಪ ಕಟ್ಟಿಮನಿ, ನಿಂಗರಾಜ್ ಬಂಡಿ ವಡ್ಡರ್, ಭೀಮಣ್ಣ ನಾಲತವಾಡ, ಶರಣಪ್ಪ ಬಂಡಿವಡ್ಡರ ಶ್ರೀನಿವಾಸ್ ಕುಲಕರ್ಣಿ, ದೇವಪ್ಪ ಕುಚಬಾಳ, ಸಾಬಣ್ಣ ಕಟ್ಟಿಮನಿ ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ,

ಎಸ್ ಬಿ ಕಟ್ಟಿಮನಿ, ಆರ್ ಎಸ್ ಪಾಟೀಲ (ಕೂಚಬಾಳ)ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ಮಸೂಮಸಾಬ್ ಕೆಂಬಾವಿ. ಮೆಹೆಬೂಬ ಚೋರಗಸ್ತಿ , ಕೊಡೇಕಲ್ ಸರ್, ಪ್ರಕಾಶ್ ಹಜೇರಿ, ದತ್ತು ಹೇಬಸುರ,ವಿಜಯಸಿಂಗ್ ಹಜೇರಿ, , ಮುದಕಪ್ಪ ಬಡಿಗೇರ,, ಮಹೇಶ್ ಚಲವಾದಿ, ಅಮಿತ್ ಮನಗೂಳಿ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ತಿಪ್ಪಣ್ಣ ಸಜ್ಜನ್, , ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ರಾಜು ಹಜೇರಿ, ನಿಂಗನಗೌಡ ದೇಸಾಯಿ , ಪ್ರಸಾದ್ ತಿವಾರಿ, ನಿತಿನ್ ವಿಜಾಪುರ, ಸಿರಸಕುಮಾರ್ ಹಜೇರಿ, ಹಾಗೂ ಪಟ್ಟಣದ ಎಲ್ಲಾ ಸಮಾಜದ ಗುರುಹಿರಿಯರು ಹಾಜರಿದ್ದರು.