ಸಮಾಜದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಪ್ರಮುಖ
The role of voluntary organizations in society is important
ರಾಣೇಬೆನ್ನೂರು 28 : ಸಮಾಜದಲ್ಲಿ ಅನೇಕ ರೀತಿಯಲ್ಲಿ ಸಾರ್ವಜನಿಕ ಸೇವೆಗಳಿವೆ ಅವುಗಳನ್ನು ಸಮರ್ಕವಾಗಿ ತಲುಪಬೇಕಾದರೆ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಮತ್ತು ಕಾರ್ಯಕರ್ತರು ನಿರಂತರ ಕ್ರಿಯಾಶೀಲರಾದಾಗ ಮಾತ್ರ ಯಾವುದೇ ಸಂಸ್ಥೆಗಳು ಬೆಳೆಯುವುದರ ಜೊತೆಗೆ ಸಮಾಜವು ಸಹ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ಫೆವಾರ್ಡ್ ಕೆ. ರಾಜ್ಯ ಉಪಾಧ್ಯಕ್ಷ ಎಚ್.ಎಫ್.ಅಕ್ಕಿ ಹೇಳಿದರು.
ಅವರು ಇಲ್ಲಿನ ನೀಡ್ಸ್ ಸೇವಾ ಸಂಸ್ಥೆಯ ಸಭಾಭವನದಲ್ಲಿ ನಡೆದ ಸ್ವಯಂ ಸೇವಾ ಸಂಸ್ಥೆಗಳ ಹಾವೇರಿ ಜಿಲ್ಲಾ ಒಕ್ಕೂಟದ ಸರ್ವ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ ಸಂಘ ಸಂಸ್ಥೆಗಳ ಒಕ್ಕೂಟವನ್ನು ಮತ್ತಷ್ಟು ಬಲಪಡಿಸಲು ನಾವೆಲ್ಲರೂ ಒಂದಾಗಿ, ಒಗ್ಗಟ್ಟಾಗಿ ಅತ್ಯಂತ ಪರಿಶ್ರಮದಿಂದ ಇತರೆ ಸಂಘ ಸಂಸ್ಥೆಗಳನ್ನು ಗುರುತಿಸಿ ಅವುಗಳ ಪುನರ್ ಚೇತನಕ್ಕೆ ಮುಂದಾಗಬೇಕಾದ ಅಗತ್ಯವಿದೆ ಎಂದರು.
ಮಹತ್ವಪೂರ್ಣವಾಗಿ ನಡೆದ ಸಭೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮುಖಂಡರಾದ, ಮಾವಿನ ತೋಪ, ಮುತ್ತುರಾಜ್ ಮಾದರ, ಎಸ್.ಎಚ್. ಮಜೀದ್, ಏಕಾಂತ ಮುದಿಗೌಡರ, ಎಂ. ಎನ್. ಸಣ್ಣಿಗಣ್ಣನವರ, ಬಿ.ಜಿ. ಸಾಲಿ, ಕೆ.ಎಸ್. ನಾಗರಾಜ್, ಸುಶೀಲಾ ಪಾಟೀಲ್, ಶ್ರೀಧರ್ ಗಾಯಕವಾಡ, ನವೀನ್ ಫಕ್ಕಿರೇಶ್ ಸೇರಿದಂತೆ ಮತ್ತಿತರರು ಸಂಘಟನೆ ಕುರಿತು ಸಾಧ್ಯಂತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನೈಸರ್ಗಿಕ ಪರಿಸರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಘ, ಸಂಸ್ಥೆಗಳಿಗೆ ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಕೋಡಮಾಡುವ ಪ್ರತಿಷ್ಠಿತ
ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪುರಸ್ಕೃತ ನೀಡ್ಸ್ ಅಧ್ಯಕ್ಷ, ಹೆಚ್.ಎಫ್. ಅಕ್ಕಿ ವನಸಿರಿ ಅಧ್ಯಕ್ಷ ಎಸ್. ಡಿ ಬಳೀಗಾರ ಮತ್ತು ರಟ್ಟಿಹಳ್ಳಿ ತಾಲೂಕಿನ ಕರಿಬಸಪ್ಪ ಕಾಗಿನೆಲ್ಲಿ ಅವರನ್ನು, ಜಿಲ್ಲೆಯ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಹಾರ್ದಿಕವಾಗಿ ಅಭಿನಂದಿಸಿ ಗೌರವಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 