ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ:ಯೋಗಾನಂದ ಲೇಬಗೇರಿ

 ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ:ಯೋಗಾನಂದ ಲೇಬಗೇರಿ The role of parents is important in educational progress: Yogananda Lebageri

                  ಕೊಪ್ಪಳ 14:  ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ ಎಂದು ಬಹದ್ದೂರಬಂಡಿ ಗ್ರಾಮ  ಪಂಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಹೇಳಿದರು. ಅವರು ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಾಲಕ-ಪೋಷಕರ ಹಾಗೂ ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ,ಶೈಕ್ಷಣಿಕ ಪ್ರಗತಿಯಲ್ಲಿ ಕೇವಲ ಇಲಾಖೆ,ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ.ಸಂಪೂರ್ಣ ಶೈಕ್ಷಣಿಕವಾಗಿ ಪ್ರಗತಿಯಾಗಬೇಕಾದರೆ ಪಾಲಕರು ಹಾಗೂ ಸಂಪೂರ್ಣ ಸಹಕಾರದ ಅಗತ್ಯವಿದೆ. ಪಾಲಕರಾದವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮಾತ್ರ ಅವರ ಕಾರ್ಯವಲ್ಲ.ಅವುಗಳ ಜೊತೆಯಲ್ಲಿ ಪಾಲಕರು ತಮ್ಮದೆಯಾದ ಕರ್ತವ್ಯಗಳನ್ನು ಪಾಲನೆ ಮಾಡಬೇಕು.ಶಿಕ್ಷಕರು ಕೂಡಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವುದ ಶ್ಲಾಘನೀಯ ಕಾರ್ಯವಾಗಿದೆ.ಸರಕಾರ ನೀಡುವ ಸೌಲಭ್ಯಗಳನ್ನು ಕೂಡಾ ಮಕ್ಕಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. 

                          ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ ಪ್ರಸ್ತಾವಿಕವಾಗಿ ಮಾತನಾಡಿ,ಒಂದು ಶಾಲೆಯ ಅಭಿವೃದ್ದಿಗೆ ಕೇವಲ ಇಲಾಖೆಯನ್ನು ಆಧರಿಸಿದರೆ ಸಾಲದು ಇಲಾಖೆ ಹಾಗೂ ಸರಕಾರದ ಅನುದಾನದ ಜೊತೆಯಲ್ಲಿ ದಾನಿಗಳ ಸಹಕಾರವನ್ನು ಪಡೆದು ಕೂಡಾ ಶಾಲೆಯ ಅಭಿವೃದ್ದಿಯನ್ನು ಮಾಡಬಹುದು. ಶಾಲೆಯ ಭೌತೀಕ ಸೌಲಭ್ಯಗಳಿಗಾಗಿ ಅನೇಕ ದೇಣಿಗೆಯನ್ನು ನೀಡುವ ಕಾರ್ಯವನ್ನು ಕೂಡಾ ಸ್ಮರಿಸಲಾಯಿತು.ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮನೆಯಲ್ಲಿ ಪಾಲಕರು ಕೂಡಾ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಪ್ರತಿದಿನ ಅವಲೋಕಿಸಬೇಕು ಎಂದು ಹೇಳಿದರು. 

                        ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ ಮಾತನಾಡುತ್ತಾ,ಸರಕಾರವು ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಅವುಗಳನ್ನು ಪಾಲಕರು ಸರಿಯಾದ ರೀತಿಯಲ್ಲಿ ಬಳಿಸಿಕೊಳ್ಳುವುದರ ಜೊತೆಯಲ್ಲಿ ತಿಂಗಳಿಗೊಮ್ಮೆ ಶಾಲೆಗೆ ಆಗಮಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ತಿಳಿಯುವ ಕೆಲಸ ಮಾಡಬೇಕು ಎಂದು ಹೇಳಿದರು. 

               ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಮಹಮ್ಮದರಫಿ ಹಿರೇಮಸೂತಿ,ಸಿ.ಆರ್‌.ಪಿ.ಮುದ್ದು ಬಸವ,ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ಮೈಲಪ್ಪ ಕಂಬದಮನಿ,ಬಾಬಾ ಕಿಲ್ಲೇದಾರ,ಬಸವರಾಜ ಮತ್ತೂರು, ಮಾಬುಬಿ ಮುಲ್ಲಾ,ಸಲೀಂಮಾಬೇಗಂ,ಚಿನ್ನಮ್ಮ ಶೆಟ್ಟರ್, ಶಿವಪ್ಪ ಕಬ್ಬೇರ,ಮಲ್ಲೇಶ, ಸರಕಾರಿ ನೌಕರರ ಸಂಘದ ಸದಸ್ಯರಾದ ಭಾರತಿ ಹವಳೆ, ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಪೂಣೀರ್ಮಾ ತುಪ್ಪದ ಶಿಕ್ಷಕರಾದ ಶರಣಪ್ಪ ಕೇಳಗಿನಗೌಡರು, ಜ್ಯೋತಿಲಕ್ಷ್ಮೀ,ಗಂಗಮ್ಮ ಕಪರಶೆಟ್ಟರ್, ಮೇರಾಜುನ್ನಿಸ್, ಮಾಧವಿ ಅಂಗಡಿ,ನಗ್ಮಾ,ರುಬೀನಾ, ಜಲಜಾಕ್ಷಿ, ವೀಣಾ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಮಮತಾ.ಬಿ.ಕೆ.ಎಂ.ನಿರೂಪಿಸಿದರು. ಶಿಕ್ಷಕರಾದ ಭಾರತಿ ಉಪಾಧ್ಯಾ ಪ್ರಾರ್ಥನೆ ನಿರ್ವಹಿಸಿದರು. ಶಿಕ್ಷಕರಾದ ಹನುಮಂತಪ್ಪ ಕಬ್ಬೇರ ಸ್ವಾಗತಿಸಿ,ರಾಜಾ ಹುಸೇನ ವಂದಿಸಿದರು