ನರೇಗಾ ಯೋಜನೆ ಪಾರದರ್ಶಕವಾಗಿ ಅನುಷ್ಠಾನ ಮಾಡುವಲ್ಲಿ ಮೇಟ್ಗಳ ಪಾತ್ರ ಬಹಳ ಮಹತ್ವದ್ದು
ಬ್ಯಾಡಗಿ 16: ಜನವರಿ 16ನರೇಗಾ ಯೋಜನೆ ಗ್ರಾಮೀಣ ಭಾಗದಲ್ಲಿ ಪಾರದರ್ಶಕವಾಗಿ ಅನುಷ್ಠಾನಗೊಳಿಸುವಲ್ಲಿ ಮೇಟ್ ಗಳ ಪಾತ್ರ ಬಹಳ ಮಹತ್ವದ್ದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿಗಳಾದ ಹೆಚ್ ವೈ ಮೀಸೆ ಕರೆ ನೀಡಿದರು ಅವರು ಗುರುವಾರ ಬೆಳಗ್ಗೆ 10 ಗಂಟೆಗೆ ಬ್ಯಾಡಗಿ ತಾಲೂಕ ಪಂಚಾಯಿತಿ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಜಿಲ್ಲಾ ಪಂಚಾಯತ್ ಹಾವೇರಿ ತಾಲೂಕ ಪಂಚಾಯತ್ ಬ್ಯಾಡಗಿ ಹಾಗೂ ಗ್ರಾಮ ಸ್ವರಾಜ್ಯ ಅಭಿಯಾನ ಕರ್ನಾಟಕ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಶ್ರಯದಲ್ಲಿ ತಾಲೂಕ ಮಟ್ಟದ ಕಾಯಕ ಬಂಧುಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನರೇಗಾ ಯೋಜನೆ ಅಡಿ ಕಾಯಕ ಬಂಧುಗಳು ಸಮುದಾಯ ಹಾಗೂ ಗ್ರಾಮ ಪಂಚಾಯಿತಿಯ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಮೂರು ದಿನದ ತರಬೇತಿಯಲ್ಲಿ ತಮ್ಮ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಕ್ಷೇತ್ರ ಭೇಟಿ ಮಾಡಿ ಕೂಲಿ ಕಾರ್ಮಿಕರೊಂದಿಗೆ ಅನುಭವ ಹಂಚಿಕೆ ಒಂದು ದಿನದಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುವ ಅಳತೆ ಹಾಜರಾತಿ ದಾಖಲಾತಿ ನಿರ್ವಹಣೆ ಇತ್ಯಾದಿ ವಿಷಯಗಳನ್ನು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು .
ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಎಸ್ ಡಿ ಬಳೆಗಾರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮ ಸ್ವರಾಜ್ ಅಭಿಯಾನದಡಿ ಒಡಂಬಡಿಕೆ ಮಾಡಿಕೊಂಡು ರಾಜ್ಯದಲ್ಲಿ 20 ಜಿಲ್ಲೆ 50 ತಾಲೂಕುಗಳಲ್ಲಿ ನರೇಗಾ ಯೋಜನೆ ಅಡಿ ಮೇಟ್ಸ್ ಗಳಿಗೆ ಯೋಜನೆ ಕುರಿತು ಮಾಹಿತಿ ನೀಡಿ ಸುಸ್ಥಿರ ಕೂಲಿ ಕಾರ್ಮಿಕರ ಸಂಘಟನೆ ಮಾಡುವುದರೊಂದಿಗೆ ದೀರ್ಘಕಾಲ ಆಸ್ತಿಗಳ ಸೃಜನೇ ಮಾಡುವುದು ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಪರಶುರಾಮ ಅಗಸನಹಳ್ಳಿ ತಾಲೂಕ ಯೋಜನಾಧಿಕಾರಿಗಳಾದ ಅಗಸರ್ ಪಿ ಆರ್ ಇ ಡಿ ಸಹಾಯಕ ನಿರ್ದೇಶಕರಾದ ಗೋಪಾಲ್ ಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾದ ದಿಂಗಾಲೇಶ್ ಅಂಗೂರ್ ನಾಗರಾಜ್ ಬಿದರಿ ದಾದಾಪೀರ್ ಫಕೀರಮ್ಮ ಶೃತಿ ಮತ್ತು ತಾಂತ್ರಿಕ ಸಂಯೋಜಕರಾದ ಸಂತೋಷ್ ಕುಮಾರ್ ನಾಯಕ ಎಂಐಎಸ್ ಸಂಯೋಜಕರಾದ ಸಿದ್ಲಿಂಗಮ್ಮ ಎಸ ಮತ್ತು ಬಿ ಎಫ್ ಟಿ ಗಳಾದ ಮಹೇಶ್ ಕುಪ್ಪೇಲೂರ್ ಕರೇಗೌಡ ಪುಟ್ಟನಗೌಡ್ರು ಉಪಸ್ಥಿತರಿದ್ದರುತರಬೇತಿ ಕಾರ್ಯಕ್ರಮವನ್ನು ಐ ಇ ಸಿ ಸಂಯೋಜಕರಾದ ಅಕ್ಷಯ್ ದೇಶಪಾಂಡೆ ಸ್ವಾಗತಿಸಿದರು ಡಿಟಿಸಿ ರಾಜು ಕಳಕಮನಿ ವಂದಿಸಿದರು ಈ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 40 ಜನ ಮೇಟ್ಸ್ ಗಳು ಭಾಗವಹಿಸಿದ್ದರು