ದುಷ್ಟ ಗುಣ ಸಂಹರಿಸಿ ,ಸದ್ಗುಣ ಧರಿಸುವದೇ ನವ ರಾತ್ರಿಯ ಉದ್ದೇಶ: ಯೋಗಿನಿ ಅಕ್ಕ ನವರು
The purpose of Navaratri is to destroy evil qualities and acquire virtue: Yogini Akka
ಕೊಪ್ಪಳ 30: ದುಷ್ಟ ಗುಣಗಳನ್ನು ಸಂಹರಿಸಿ ಸದ್ಗುಣಗಳನ್ನು ಧರಿಸುವುದೇ ನವರಾತ್ರಿಯ ಉದ್ದೇಶ ಸರ್ವಶಕ್ತಿವಂತ ಪರಮಾತ್ಮ ಶಿವನಿಂದ ಶಕ್ತಿ ಪಡೆದು ಅಸುರಿ ಗುಣಗಳನ್ನು ನಾಶ ಮಾಡುವವರೇ ಶಿವಶಕ್ತಿಯರು ದೇವಿಯರು ಎಂದು ಕೊಪ್ಪಳ ಈಶ್ವರಿಯ ವಿಶ್ವ ವಿದ್ಯಾಲಯ ಸೇವಾ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು.
ಅವರು ನಾಡಹಬ್ಬ ದಸರಾ ಅಂಗವಾಗಿ ವರ್ಣೇಕರ್ ಚಾಳ್ನಲ್ಲಿ ದುರ್ಗಾ ಮಿತ್ರ ಮಂಡಳಿಯವರು ಏರಿ್ಡಸಿದ ಕಾರ್ಯಕ್ರಮದಲ್ಲಿ ನವರಾತ್ರಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸುತ್ತಾ ಕಾಮ,ಕ್ರೋಧ,ಲೋಭ, ಮೋಹ,ಅಹಂಕಾರ, ದುರಾಭಿಮಾನ, ದ್ವೇಷ, ಈರ್ಷೆ, ಮದ, ಮತ್ಸರ ಎಂಬ ಹತ್ತು ತಲೆಯ ರಾವಣನ ಮೇಲೆ ವಿಜಯ ಸಾಧಿಸುವುದೇ ವಿಜಯದಶಮಿ ಎಂದರು. ನಾವೆಲ್ಲರೂ ಜೀವನದಲ್ಲಿ ವಿಜಯ ಸಾಧಿಸಲು ಹಾಗೂ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತರಾಗಲು ತಮ್ಮನ್ನ ಆತ್ಮ ಎಂದು ತಿಳಿದು ಪರಮಾತ್ಮನನ್ನು ನೆನಪು ಮಾಡಿ. ಅವನೇ ಈಶ್ವರ, ಅಲ್ಲಾ, ಗಾಡ್, ಅರಿಹಂತ, ಜೆಹೊವಾ, ದಿವ್ಯಜೋತಿ ಪರಮಾತ್ಮನ ನೆನಪಿನಿಂದಲೇ ಸುಖ, ಶಾಂತಿ, ಆರೋಗ್ಯ, ಸರ್ವಪ್ರಾಪ್ತಿ ಎಂದರು. ಈಶ್ವರಿಯ ವಿಶ್ವ ವಿದ್ಯಾಲಯದ ದೈವೀ ಪರಿವಾರದವರಿಂದ ದಶಕಂಠ ರಾವಣನ ಸಂಹಾರ ಚೈತನ್ಯ ದೇವಿಯರ ದರ್ಶನ ರೂಪಕ ಹಾಗೂ ವಿಶ್ವಪಿತನಿಗೆ ರಾಷ್ಟ್ರಗೀತೆ ರೂಪಕ ಹಾಗೂ ಜ್ಞಾನ ನೃತ್ಯ ಸರ್ವರ ಮನವನ್ನು ಹರ್ಷಿತಗೊಳಿಸಿತು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅರುಣ್ ಶೆಟ್ಟಿ, ದುರ್ಗಾ ಮಿತ್ರ ಮಂಡಳಿಯ ಅಂಬರೀಶ್, ಸಂಗಯ್ಯ ಮುಂತಾದವರಿದ್ದರು ಬಿಕೆ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 