ಭರದಿಂದ ಸಾಗಿದ ಶ್ರೀಮಠದ ಮಹಾದಾಸೋಹದ ಸಿದ್ಧತೆ ಕಾರ್ಯ
ಕೊಪ್ಪಳ 13: ದಕ್ಷಿಣ ಭಾರತದ ಕುಂಭಮೆಳ ಎಂದು ಪ್ರಖ್ಯಾತಿ ಪಡೆದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಜನೇವರಿ 15 ರಂದು ಜರುಗುವ ಪ್ರಯುಕ್ತ ಜಾತ್ರಾ ಸಿದ್ದತೆಗಳು ಭರದಿಂದ ಸಾಗುತ್ತಲಿವೆ. ಜಾತ್ರೆಗೆ ಬರುವ ಭಕ್ತರಿಗಾಗಿ ಮಠದ ಮಹಾದಾಸೋಹದ ಕೆಲಸ ಕಾರ್ಯಗಳು ಸಿದ್ಧತೆ ಹಂತದಲ್ಲಿವೆ.
ಬೃಹದಾಕಾರದ ಅಡುಗೆ ಕೋಣೆ, ಅಹಾರ ಸಂರಕ್ಷಣ ಕೋಣೆ, ಜಾತ್ರೆಯ ಆಕರ್ಷಣೆಯಲ್ಲಿ ಒಂದಾದ ರೊಟ್ಟಿ ಸಂಗ್ರಹ ಕೋಣೆ, ಮಾದಲಿ ಕಟ್ಟೆ, ಕುಡಿಯುವ ನೀರಿನ ತೊಟ್ಟಿಗಳು, ಮಹಾದಾಸೋಹದ ನಾಲ್ಕು ಎಕರೆ ವಿಶಾಲವಾದ ಮಹಾದಾಸೋಹ ಆವರಣ ಸ್ವಚ್ಛಗೊಳಿಸುವ ಮುಂತಾದ ಸಿದ್ಧತೆಯ ಕಾರ್ಯಗಳು ನಡೆಯುತ್ತಿವೆ. ಈ ಕಾರ್ಯಗಳು ಜಾತ್ರೆಗೆ ಆಗಮಿಸುವ ಭಕ್ತರಿಗೆ ಹೆಚ್ಚಿನ ಅನೂಕೂಲ ಮತ್ತು ಮೆರಗು ತಂದುಕೊಡಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದೆ.