ಭರದಿಂದ ಸಾಗಿದ ಶ್ರೀ ಗವಿಮಠದ ಮಹಾ ದಾಸೋಹದ ಕಾರ್ಯ ಸಿದ್ಧತೆ

The preparations for the Maha Dasoha of Sri Gavi Math went on in full swing

ಭರದಿಂದ ಸಾಗಿದ ಶ್ರೀ ಗವಿಮಠದ ಮಹಾ ದಾಸೋಹದ ಕಾರ್ಯ ಸಿದ್ಧತೆ  

ಕೊಪ್ಪಳ 14: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದ  ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಬರುವ ತಿಂಗಳ ಜನವರಿ 15ರಂದು ಜರಗುವ ಪ್ರಯುಕ್ತ ಜಾತ್ರಾ ಸಿದ್ಧತೆಗಳು ಹಾಗೂ ಮಹಾ ದಾಸೋಹದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಶ್ರೀಗವಿ ಮಠದ ಮಹಾ ದಾಸೋಹದ ಕೆಲಸ ಕಾರ್ಯಗಳು ಸಿದ್ಧತೆ ಹಂತದಲ್ಲಿವೆ, ಬೃಹದಾಕಾರದ ಅಡುಗೆ ಕೋಣೆ ಆಹಾರ ಸಂರಕ್ಷಣ ಕೋಣೆ ,ಜಾತ್ರೆಯ ಆಕರ್ಷಣೆಯಲ್ಲಿ ಒಂದಾದ ರೊಟ್ಟಿ ಸಂಗ್ರಹ ಕೋಣೆ, ಮಾದಲಿ ಕಟ್ಟೆ ,ಕುಡಿಯುವ ನೀರಿನ ತೊಟ್ಟಿಗಳು ,ಮಹಾದಾಸೋಹದ ನಾಲ್ಕು ಎಕರೆ ವಿಶಾಲವಾದ ಮಹಾದಾಸೋಹ ಆವರಣ ಸ್ವಚ್ಛಗೊಳಿಸುವ ಮುಂತಾದ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ.