ಸಂಸ್ಕೃತಿಯನ್ನು ಕಾಪಾಡುವ ಶಕ್ತಿ ಸಂಸ್ಕಾರದಲ್ಲಿದೆ- ಹಾಲಸ್ವಾಮಿ ಶ್ರೀಗಳು
The power to preserve culture lies in rituals - Halaswamy Sri
ರಾಣೇಬೆನ್ನೂರು 06: ದುಷ್ಟರನ್ನ ಶಿಷ್ಟರನ್ನಾಗಿ ಮಾಡುವ ಶಕ್ತಿ ಜಗದ್ಗುರು ಮಹಾತಪಸ್ವಿ ವೀರಗಂಗಾಧರ ಸ್ವಾಮಿಗಳಿಗೆ ಇತ್ತು. ಸ್ವಾಮಿಗಳು ದೈವಿಕ ಶಕ್ತಿ, ಶಾಂತ ಚಿತ್ತ, ಶ್ರದ್ಧಾ ಭಕ್ತಿ ಮತ್ತು ತಪಸ್ಸಿನ ಪ್ರತಿಮೆಯಾಗಿದ್ದರು. ಜನಜಾಗೃತಿ, ಶಾಂತಿ, ಶರಣಮಾರ್ಗ ಮತ್ತು ಮಾನವೀಯತೆಯ ಪ್ರೇರಕರೂ ಆಗಿದ್ದರು.ಅವರ ಸಂದೇಶಗಳು ಕಾಲಾತೀತವಾಗಿದ್ದು, ಇಂದಿಗೂ ನಮ್ಮ ಬದುಕಿಗೆ ದಾರಿ ದೀಪಗಳಾಗಿವೆ ಎಂದು ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿಗಳವರು ನುಡಿದರು ಇಲ್ಲಿನ ಮೃತ್ಯುಂಜಯ ನಗರದ ಹೊನ್ನಾಳಿ ಚೆನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ಆಯೋಜಿಸಿದ್ದ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯರ್, 299ನೇ, ಗೌರಿ ಹುಣ್ಣಿಮೆ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತೀಯರು ವೇದ ಇತಿಹಾಸ ಕಾಲಗಳಿಂದಲೂ, ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಂದವರಾಗಿದ್ದಾರೆ. ಧರ್ಮದ ಹಾದಿ ಸದಾಕಾಲವೂ ಶಾಂತಿ ಮತ್ತು ನೆಮ್ಮದಿ ಕರುಣಿಸುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ, ಗ್ರಾಮಾಂತರ ಠಾಣಾ ಪಿಎಸ್‌ಐ ಎನ್.ಸಿ. ಕಾಡದೇವರ ಮಾತನಾಡಿ, ಸಮಾಜದಲ್ಲಿ ಇಂದು ಅನೇಕ ರೀತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ವಿಶೇಷವಾಗಿ ದರೋಡೆ, ಸೈಬರ್ ಕ್ರೈಂ, ಮತ್ತಿತರ ಚಟುವಟಿಕೆಗಳು ಬಿಂಬಿಸುತ್ತಿವೆ. ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯ ಯುವ ಸಮುದಾಯ ಇಂಥ ಚಟುವಟಿಕೆಗಳ ವಿರುದ್ಧ ಎದ್ದು ನಿಂತು ಪ್ರತಿಭಟಿಸುವಂತಾಗಬೇಕು. ಜನ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದರು. ಗೌರಿ ಹುಣ್ಣಿಮೆ ನಿಮಿತ್ತ, ಗೌರಿಯನ್ನು ಪ್ರತಿಷ್ಠಾಪಿಸಲಾಗಿತ್ತು. ದೈವಜ್ಞ ಮಹಿಳಾ ಮಂಡಳಿಯ, ಜ್ಞಾನೇಶ್ವರಿ ಭಜನಾ ಮಂಡಳಿಯ ಸದಸ್ಯರು ಲಲಿತ ಸಹಸ್ರನಾಮ ಪಠನ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಅಮೃತಗೌಡ ಪಾಟೀಲ, ಕ. ಸಾ.ಫ ಗೌರವ ಕಾರ್ಯದರ್ಶಿ ಜಗದೀಶ್ ಮಳಿಮಠ, ಬಿದ್ದಾಡೆಪ್ಪ ಚಕ್ರಸಾಲಿ, ಚಂದ್ರಣ್ಣ ರಮಾಳದ, ಸಿ.ವ್ಹಿ. ಪಾಟೀಲ, ಉಮೇಶ್ ಗುಂಡಗಟ್ಟಿ, ಪಾರ್ವತಮ್ಮ ಪುಟ್ಟನಗೌಡ ಪಾಟೀಲ, ವಿಜಯ್ ಮುರಿಗೆಪ್ಪ ಮುಂಡಾಸದ, ವೀಣಾ ಕುಮಾರಸ್ವಾಮಿ ಯೋಗಿಮಠ, ಗೌರಮ್ಮ ಕೊಟ್ಟೂರ, ಶಸೋಮನಾಥ ಹಿರೇಮಠ, ಮುತ್ತಣ್ಣ ಪಾಟೀಲ್, ಸಿದ್ದಯ್ಯ ಶಾಸ್ತ್ರಿಗಳು, ಗಾಯಿತ್ರಮ್ಮ ಕುರುವತ್ತಿ, ಶಕುಂತಲಮ್ಮ, ಭಾಗ್ಯಮ್ಮ, ಕವಿತಾ ರಾಯ್ಕರ್, ಪದ್ಮಾವತಿ ದೈವಜ್ಞ, ವಿದ್ಯಾ ಶೇಜವಾಡಕರ, ರಾಧಾ ವಿಠಲಕರ, ಕಾಂಚನ ರಾಯ್ಕರ್,ಸೇರಿದಂತೆ ಮತ್ತಿತರ ಗಣ್ಯರು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಉಮೇಶ ಗುಂಡಗಟ್ಟಿ ಸ್ವಾಗತಿಸಿ,ಕಸ್ತೂರಮ್ಮ ಪಾಟೀಲ ನಿರೂಪಿಸಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 