ಲೋಕದರ್ಶನ ವರದಿ
ಬೆಳಗಾವಿ 8: ಡಿಸೆಂಬರ 10 ರಿಂದ ಸುವರ್ಣ ಸೌಧದಲ್ಲಿ ನಡೆಯಲಿರುವ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ ಸೇರಿದಂತೆ ಉತ್ತರ ಕನರ್ಾಟಕದ ಬೇಡಿಕೆಗಳ ಬಗ್ಗೆ ಯಾವುದೆ ಪ್ರತಿಭಟನೆ ಮಾಡುವದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಹಿಂದೆ ಭರವಸೆ ನೀಡಿದಂತೆ ಅಧಿವೇಶನ ಮುಗಿಯುವದರೊಳಗಾಗಿ ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಉತ್ತರ ಕನರ್ಾಟಕದ ಮಠಾಧೀಶರು ಆಗ್ರಹಿಸಿದ್ದಾರೆ.
ಶನಿವಾರದಂದು ಉತ್ತರ ಕನಾಟಕ ವಿಕಾಸ ವೇದಿಕೆ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉತ್ತರ ಕನರ್ಾಟಕ ಮಠಾಧೀಶರ ಒಕ್ಕೂಟದ ಪರವಾಗಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿಗಳು, ರಾಜ್ಯ ಸರಕಾರ ಈ ನಮ್ಮ ಬೇಡಿಕೆ ಈಡೇರಿಸದಿದ್ದರೇ ಮುಂದಾಗುವ ಬೆಳವಣಿಗೆಗಳಿಗೆ ರಾಜ್ಯ ಸರಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಇಂದಿಗೂ ಸಮಗ್ರ ಕನರ್ಾಟಕದ ಪರವಾಗಿದ್ದೇವೆ. ಇಂದಿಗೂ ಸರಕಾರದ ಮೇಲೆ ಭರವಸೆ ಹೊಂದಿದ್ದೇವೆ. ಪ್ರತ್ಯೇಕತೆಯ ಹೋರಾಟ ನಡೆಸದಂತೆ ಹೋರಾಟಗಾರರ ಮನವೊಲಿಸಿದ್ದೇವೆ. ನಮ್ಮ ನಿರೀಕ್ಷೆಗಳು ಹುಸಿಯಾದರೆ ಹೋರಾಟಗಾರರು ಕೈಗೊಳ್ಳುವ ನಿರ್ಣಯಕ್ಕೆ ಸ್ವಾಮೀಜಿಗಳು ಬದ್ದರಾಗುತ್ತೇವೆ. ಇನ್ನಷ್ಟು ದಿನ ಹೋರಾಟಗಾರರನ್ನು ತಡೆಯಲಿಕ್ಕೆ ಆಗುವದಿಲ್ಲ. ಜನರ ಪ್ರಶ್ನೆಗಳಿಗೂ ಉತ್ತರಿಸಲಿಕ್ಕೆ ಆಗುವದಿಲ್ಲ. ಅಂತಹ ಹೋರಾಟದ ಅಪಾಯವನ್ನು ರಾಜ್ಯ ಸರಕಾರ ತಂದಿಡಬಾರದು ಎಂದು ಕಿವಿ ಮಾತು ಹೇಳಿದರು.
ಈ ಭಾಗದ ಎಲ್ಲ 13 ಜಿಲ್ಲೆಗಳ ಶಾಸಕರುಗಳು ಎಲ್ಲ 10 ದಿನಗಳ ಕಾಲ ಅಧಿವೇಶನಕ್ಕೆ ಹಾಜರಾಗಬೇಕು. ಅಧಿವೇಶನದಲ್ಲಿ ಪಕ್ಷ ಬೇಧ ಮರೆತರು ತಮ್ಮ ಭಾಗದ ಸಮಸ್ಯೆಗಳ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ನ್ಯಾಯ ದೊರಕಿಸಬೇಕು. ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದು ಮನವಿ ಮಾಡಿದ ಅವರು, ಸರಕಾರ ಮತ್ತು ಶಾಸಕರುಗಳು ತಮ್ಮ ಪಾಲಿನ ಕರ್ತವ್ಯ ಪಾಲಿಸದಿದ್ದರೇ ಅವರ ವಿರುದ್ಧವೇ ಹೋರಾಟ ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುತ್ನಾಳದ ಶಿವಾನಂದ ಸ್ವಾಮೀಜಿಗಳು ಮಾತನಾಡಿ, ಹೊರಗಿನ ಹೋರಾಟಕ್ಕಿಂತ ಸದನದ ಒಳಗಿನ ಹೋರಾಟ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಶಾಸಕರುಗಳು ಸದನದ ಒಳಗೆ ಉತ್ತರ ಕನರ್ಾಟಕದ ಒಕ್ಕೂರಲಿನ ಧ್ವನಿ ಎತ್ತುವ ಮೂಲಕ ತಮಗೆ ಮತ ನೀಡಿದ ಜನತೆಯ ಋಣ ತೀರಿಸಬೇಕು. ಋಣ ತೀರಿಸುವ ಕರ್ತವ್ಯ ಪಾಲಿಸದಿದ್ದರೆ ಜನಾಂದೋಲನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೇದಿಕೆಯ ಅಧ್ಯಕ್ಷ ಅಶೋಕ ಪೂಜಾರಿ ಮಾತನಾಡಿ, ಅಧಿವೇಶದ ಸಮಯದಲ್ಲಿ ಮುಖ್ಯಮಂತ್ರಿಗಳೇ ಮಠಾಧೀಶರನ್ನು ಕರೆದು ಅವರ ಬೇಡಿಕೆಗಳನ್ನು ಆಲಿಸುವ ಸೌಜನ್ಯ ತೋರಬೇಕು. ಬೇಡಿಕೆಗಳನ್ನು ಆಲಿಸಿ ಅವುಗಳನ್ನು ಈಡೇರಿಸಬೇಕು. ಸ್ವಾಮೀಜಿಗಳ ಸಲಹೆಯೆಂತೆ ಅಧಿವೇಶನದ ಸಮಯದಲ್ಲಿ ಯಾವ ಪ್ರತಿಭಟನೆ ಮಾಡುವದಿಲ್ಲ. ನಾವು ಇಟ್ಟ ಭರವಸೆ ಈಡೇರದಿದ್ದರೆ ನಿಣರ್ಾಯಕ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.
ಭೀಮಪ್ಪ ಗಡಾದ ಅವರು ಮಾತನಾಡಿ, ಹೋರಾಟಗಾರರ ಮತ್ತು ಜನತೆಯ ಸಹನೆಗೂ ಒಂದು ಮಿತಿ ಇರುತ್ತದೆ ಎಂಬುದನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು. ಇದೆ ಅಧಿವೇಶನದಲ್ಲಿ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರದಿದ್ದರೇ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರ್.ಎಸ್.ದಗರ್ೆ, ಪ್ರವೀಣ ಪಾಟೀಲ. ನಾಗೇಶ ಗೋಲಶೆಟ್ಟಿ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.