ಜನ ಜಾಗೃತಿಯ ಆಂದೋಲನ ವಚನ ಚಳುವಳಿ

ಬೆಂಗಳೂರು 15: ವಚನ ಚಳವಳಿಯು ಜನ ಜಾಗೃತಿಯ ಆಂದೋಲನವಾಗಿದ್ದು ವಿಶ್ವದ ಇತಿಹಾಸದಲ್ಲಿ ಮೊದಲನೆಯದಾಗಿದೆ ಎಂದು ಹಿರಿಯ ಚಿಂತಕ ಡಾ. ಗೊ.ರು. ಚನ್ನಬಸಪ್ಪ ಹೇಳಿದರು. 

  ಮೈಕೋ ಬಸವೇಶ್ವರ ಸಮಿತಿ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು ಸಾಮಾಜಿಕ, ಧಾರ್ಮಿಕ ಸಾಹಿತ್ಯಿಕ, ಆರ್ಥಿಕ, ಹೀಗೆ ಎಲ್ಲ ರಂಗಗಳ ಸಮಾಜೋಧಾಮರ್ಿಕ ಆಂದೋಲನ ಸ್ವರೂಪವನ್ನು ವಚನ ಚಳವಳಿ ಪಡೆದಿದ್ದು ಬಸವಣ್ಣನವರು ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಕರೆದುಕೊಂಡು ನಡೆಸಿದರು ಎಂದು ಬಣ್ಣಿಸಿದರು.

 ನೈತಿಕವಾಗಿ ಹಾಳಾಗಿಹೋಗುತ್ತಿರುವ ಸಂದರ್ಭದಲ್ಲಿ ಬಸವ ಜಯಂತಿಯ ನೆಪದಲ್ಲಿ ನೈತಿಕ ಮೌಲ್ಯಗಳನ್ನು ಮನಸ್ಸಿನಲ್ಲಿ ಪ್ರತಿಷ್ಠಾಪಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿದ್ದು, ಕಾಮರ್ಿಕ ದಿನಾಚರಣೆಯನ್ನು ಕಾಯಕ ದಿನಾಚರಣೆಯನ್ನಾಗಿ ಆಚರಿಸುವುದರ ಮೂಲಕ ದೇಶದ ಪುರೋಭಿವೃದ್ದಿಗೆ ಕಾರಣವಾಗಿರುವ ಕಾರ್ಮಿಕ  ವರ್ಗಕ್ಕೆ ಮಾನ್ಯತೆ ನೀಡಬೇಕಾಗಿದೆ ಎಂದು ಹೇಳಿದ ಅವರು ಬಾಷ್ ಆಗಿ ಪರಿವರ್ತಿತವಾಗಿರುವ ಮೈಕೋದ ಕಾರ್ಮಿಕ  ಬಂಧುಗಳು ನಡೆಸುತ್ತಿರುವ ಬಸವ ಜಯಂತಿ ಅರ್ಥಪೂರ್ಣವಾಗಿದ್ದು  ರಾಜಧಾನಿಯಲ್ಲಿ ನಿರಂತರವಾಗಿ ಸಾಹಿತ್ಯ 

-ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ವಚನಜ್ಯೋತಿ ಬಳಗದ ಎಸ್. ಪಿನಾಕಪಾಣಿ ಮತ್ತು ಅರ್ಥಪೂರ್ಣ ಮಹಿಳಾ ಮಹಾಪೌರರಾದ ಗಂಗಾಂಬಿಕ ರನ್ನು ಸನ್ಮಾನಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು. 

  ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ - ಬಸವಣ್ಣ ಧಿಕ್ಕರಿಸಿದ ವೈದಿಕ ಆಚರಣೆಯನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಷಾದನೀಯ; ವೇದಘೋಷದ ಬದಲಿಗೆ ವಚನಘೋಷವನ್ನು ನಡೆಸಬೇಕು, ವಚನಗಳನ್ನು ಆನು ಒಲಿದಂತೆ ಹಾಡಬೇಕು; ವಚನಗಳ ತತ್ತ್ವಸಾರವನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.   ಮನಸ್ಸಿನ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ ಬಸವಣ್ಣ 850 ವರ್ಷಗಳ ಹಿಂದೆಯೇ ಸ್ವಚ್ಛ ಕಲ್ಯಾಣವನ್ನು ರೂಪಿಸಿದ್ದು ನಮ್ಮ ನಮ್ಮ ತನು - ಮನಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಕುಟುಂಬ, ಪರಿವಾರ, ಗ್ರಾಮ, ನಗರ, ರಾಜ್ಯ ಸ್ವಚ್ಛವಾಗಿ ಕಲ್ಯಾಣ ರಾಜ್ಯ ರೂಪುಗೊಳ್ಳುತ್ತದೆ ಎಂದು ಹೇಳಿದರು. 

   ಮೇಯರ್ ಗಂಗಾಂಬಿಕ ಮಲ್ಲಿಕಾಜರ್ುನ್, ಬಾಷ್ ತಾಂತ್ರಿಕ ವಿಭಾಗದ ಉಪಾಧ್ಯಕ್ಷ ರಾಜೇಂದ್ರ, ಚಿಕ್ಕಮಗಳೂರಿನ ಸಾಹಿತಿ ಪುಟ್ಟರಾಜು, ಸರ್ಪಭೂಷಣ ಮಠದ ಮಲ್ಲಿಕಾರ್ಜುನ  ದೇವರು, ಮೈಕೋ ಬಸವ ಸಮಿತಿಯ ಪುಟ್ಟರಾಜು, ರವಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಿತಿಯ ವಿಶ್ರಾಂತ ಅಧ್ಯಕ್ಷರುಗಳನ್ನು ಗೌರವಿಸಲಾಯಿತು ಮತ್ತು ಪ್ರತಿಭಾ ಪುರಸ್ಕಾರ ನೀಡಲಾಯಿತು.