ದೇವರ ಆಲಯದಲ್ಲಿ ಸಿಗುವ ಮನಸ್ಸಿನ ನೆಮ್ಮದಿ ಬೇರೆ ಎಲ್ಲಿ ಸಿಗುವುದಿಲ್ಲ : ರಮೇಶ ಶ್ರೀ

ದೇವರ ಆಲಯದಲ್ಲಿ ಸಿಗುವ ಮನಸ್ಸಿನ ನೆಮ್ಮದಿ ಬೇರೆ ಎಲ್ಲಿ ಸಿಗುವುದಿಲ್ಲ : ರಮೇಶ ಶ್ರೀ The peace of mind found in the temple of God cannot be found anywhere else: Ramesh Sri

        ಶಿಗ್ಗಾವಿ 28 : ಹೃದಯಭಾಗದಲ್ಲಿರುವ ಮೈಲಾರಲಿಂಗನ ಆಲಯಕ್ಕೆ ಬಂದಾಗ ಸಿಗುವ ಮನಸ್ಸಿನ ನೆಮ್ಮದಿ ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದುಗೋನಾಳದ ರಮೇಶ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಮೈಲಾರಲಿಂಗೇಶ್ವರ ಚರಿತ್ರೆಯ ಪ್ರವಚನ ಮಾಡಿದ ಅವರು ದೇವರು ಗರ್ಭಗುಡಿ ಬಿಟ್ಟು ದುಶ್ಟಟ್ಟರನ್ನು ಸಂಹಾರ ಮಾಡಲಿಕ್ಕೆ ಹಾಗೂ ನಿರ್ಗತಿಕರ ರಕ್ಷಣೆಗೆ ಹೋರಗಡೆ ಹೋಗುತ್ತಾನೆ ಭಗವಂತನು ನೀರಿನ ಹಾಗೆ ಕರಗಿದ ಕಲ್ಲು ಸಕ್ಕರೆ ರೂಪದಲ್ಲಿ ಬರುತ್ತಾನೆ, ಭಗವಂತ ಎಲ್ಲ ಕಡೆ ಇದ್ದಾನೆ ಅಂದರೆ ಹಿಡಿದಿಟ್ಟು ಕೊಳ್ಳುವ ಸುಪ್ತ ಮನಸ್ಸಿನಲ್ಲಿದ್ದಾನೆ ಕೆಲವು ಮೌಡ್ಯಗಳನ್ನು ನಾಶ ಮಾಡಬೇಕು ಅಂದಾಗ ಮಾತ್ರ ದೇವರನ್ನು ಕಾಣಬಹುದು ಎಂದರು.ಮಾನವ ಜನ್ಮದಲ್ಲಿ ಶ್ರೇಷ್ಠವಾದ ಜನ್ಮ ಮನುಷ್ಯ ಜನ್ಮ ಆದ್ದರಿಂದ ನಾವು ಮಾಡುವ ಕೆಲಸಗಳು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಇರಬೇಕು ಅಲ್ಲದೇ ನಿಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಅಂದಾಗ ಮಾತ್ರ ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳು ಇನ್ನೂ ಸ್ವಲ್ಪ ದಿನ ಉಳಿಯುತ್ತವೆ ಇಲ್ಲದಿದ್ದರೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಬೇಕಾಗುತ್ತದೆ ಎಂದರು. 

        ಈ ಸಂದರ್ಭದಲ್ಲಿ ಸಮಿತಿ ಪ್ರಭಾರ ಅಧ್ಯಕ್ಷ ಸಂಗಣ್ಣ ಕಂಕನವಾಡ, ಉಪಾಧ್ಯಕ್ಷ ನಿಂಗಪ್ಪ ಇಂಗಳಗಿ, ನಿಂಗಪ್ಪ ಯಲವಿಗಿ, ನಿಂಗಪ್ಪ ಯಲಿಗಾರ, ರಾಜಣ್ಣಾ ಗಾಣಗೇರ, ಸುರೇಶ ಯಲಿಗಾರ, ಮಂಜುನಾಥ ಬ್ಯಾಹಟ್ಟಿ, ಮಂಜುನಾಥ ಕಟ್ಟಿಮನಿ, ಮಹಾಂತೇಶ ಕಂಕನವಾಡ, ಮಲ್ಲೇಶಪ್ಪ ಅತ್ತಿಗೇರಿ, ತಿರಕಪ್ಪ ಅಂದಲಗಿ, ಸೋಮಣ್ಣ ಮತ್ತೂರ, ಮಹಾಂತೇಶ ಯಲಿಗಾರ, ಸೇರಿದಂತೆ ಮೈಲಾರಲಿಂಗೇಶ್ವರ ಸಮಿತಿ ಸರ್ವ ಸದಸ್ಯರು ಹಾಗೂ ಪಟ್ಟಣದ ಸಧ್ಬಕ್ತರು ಉಪಸ್ಥಿತರಿದ್ದರು. ಜೋಡಿ ಬಸವೇಶ್ವರ ಕಲಾ ಬಳಗದವರಿಂದ ವಿಶೇಷ ಕಲಾ ಸೇವೆ ಜರುಗಿದವು. ಪ್ರೋ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು, ಪ್ರೋ ಶರೀಫ ಮಾಕಪ್ಪನವರ ವಂದಿಸಿದರು.