ಜಾನಪದ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದು,-ಕುಲಪತಿ ಬಿಕೆ ರವಿ

ಜಾನಪದ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದು,-ಕುಲಪತಿ ಬಿಕೆ ರವಿ The original nature of folklore should not be compromised, says Vice Chancellor BK Ravi

ಜಾನಪದ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದು,-ಕುಲಪತಿ ಬಿಕೆ ರವಿ 

ಕೊಪ್ಪಳ  16: ಜಾನಪದದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜಾನಪದವನ್ನು  ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು ಹಾಗೂ  ಜಾನಪದ  ಮುಂದಿನ ಪೀಳಿಗೆಗೆ  ದೊರೆಯುವಂತೆ ಮಾಡಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ ರವಿಯವರು ಕರೆ ನೀಡಿದರು.ಕೊಪ್ಪಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿಂದು  ಪ್ರದರ್ಶನ ಕಲಾ ವಿಭಾಗವನ್ನು ಸಾಂಪ್ರದಾಯಿಕ  ವಾದ್ಯವಾದ ಡೊಳ್ಳು ಭಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದೇಶಿಯರೆಲ್ಲ ಭಾರತೀಯ ಕಲಾ ಶ್ರೀಮಂತಿಕೆಗೆ ತಲೆ ತೂಗಿದ್ದಾರೆ. ಭಾರತೀಯರೆಲ್ಲರಲ್ಲಿ ಕಲೆ ರಕ್ತವಾಗಿದ್ದು, ಒಂದಷ್ಡು ಆಸಕ್ತಿ ವಹಿಸಿದಲ್ಲಿ ಕಲೆ ಯಲ್ಲಿ ನೈಪುಣ್ಯತೆ  ದೊರೆಯಲಿದೆ. ಕಾರಣ ಎಲ್ಲರೂ  ಈ ಕಲೆಯ ಶ್ರೀಮಂತಿಕೆಯನ್ಮು ಹೆಚ್ಚಿಸಲು ಶ್ರಮಿಸಬೇಕೆಂದು  ತಿಳಿಸಿದರು. ಕೊಪ್ಪಳ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಕಲಾವಿದರ ಸಂಖ್ಯೆ ಹೆಚ್ಚಿದೆ ಹೀಗಾಗಿ  ಪ್ರದರ್ಶನ ಕಲೆ ವಿಭಾಗವನ್ನು  ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಈ  ನಾಡಿನ ಜನರ  ಪ್ರದರ್ಶನ ಕಲೆಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಯೊಬ್ಬರುಜಾನಪದ ಸಂಸ್ಕ್ರತಿ ಯನ್ನು  ಪ್ರೋತ್ಸಾಹಿಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಮುಳುಗಿರುವದನ್ನು ಬಿಟ್ಟು ಅಧ್ಯಯನಶೀಲರಾಗಿ ಮುಂದೆ ಬರಬೇಕೆಂದರು.ಇದಕ್ಕೂ ಮುನ್ನ ಮಾತನಾಡಿದ ಅಧ್ಯಕ್ಷತೆ ವಹಿಸಿದ್ದ ವಿ.ವಿ.ಯ  ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿರವರು ಪ್ತದರ್ಧನ ಕಲೆಯು ನಾಡಿನ ಸಂಸ್ಕೃತಿ, ಪರಂಪರೆಯನ್ನು  ಬೆಳೆಸುವ ಕಲೆಯಾಗಿದ್ದು, ಈ ಕಲೆಯನ್ನು ಪ್ರತಿಯೊಬ್ಬರು ಉಳಿಸಿಕೊಂಡು ಹೋಗಬೇಕಿದೆ. ಈ ದಿಸೆಯಲ್ಲಿ ವಿ.ವಿಯ ಕುಲಪತಿಗಳನ್ನು ಕೊಪ್ಪಳದಲ್ಲಿ ಪ್ತದರ್ಶನ ಕಲೆ ವಿಭಾಗವನ್ನು  ಆರಂಭಿಸಿದ್ದಾರೆ. ಅದು ನಮ್ಮ ಕುಲಪತಿಗಳ ಕನಸು. , ಇದನ್ನು ಪ್ರತಿಯೊಬ್ಬರೂ  ಉಳಿಸಿ, ಬೆಳೆಸಿಕೊಂಡು ಹೋಗಲು ಶ್ರಮಿಸಬೇಕೆಂದರು.ನಂತರದ 2ನೇ ಹಂತದ ಗೋಷ್ಠಿಯಲ್ಲಿ ವಿ.ವಿ. ಕುಲಪತಿಗಳಾದ ಪ್ರೊ. ಬಿ.ಕೆ.ರವಿರವರು ವಿದ್ಯಾರ್ಥಿಗಳಿಗೆ ಕೆ.ಸೆಟ್ ಪರೀಕ್ಷೆಯ ಕುರಿತು ಹಾಗೂ ರೀಸರ್ಚ ಸ್ಕಿಲ್ಸ್‌, ವರ್ಗ ಬೋಧನೆ, ಸಂವಹನ, ಉನ್ನತ ಶಿಕ್ಷಣ ಸೇರಿದಂತೆ ಹಲವು ವಿಷಯಗಳ ಬಗ್ಗೆ      ತಿಳುವಳಿಕೆ ನೀಡಿದರು.ಆರಂಭದಲ್ಲಿ ಕಂಸಾಳೆ ನೃತ್ಯ ರೂಪಕ ಪ್ರದರ್ಶನ ನಡೆಯಿತು. ನಂತರ ಕುಲಪತಿಗಳು ಸಂವಿಧಾನ ಪೀಠಿಕೆಯನ್ನು  ಪ್ರತಿಯೊಬ್ಬರಿಗೂ ಬೋಧಿಸಿದರು. ಈ ವೇಳೆ ಗಾಯಕಿ ಗೌರಿ ತಂಡದವರು ಹಲವು ಜಾನಪದ ಗೀತೆಗಳನ್ನು ಹಾಡಿದರು.ಪ್ರದರ್ಶನ ಕಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೀರೇಶ ಉತ್ತಂಗಿ ನಿರೂಪಿಸಿದರು. ಅನಂತಕುಮಾರ ದೊರೆ ಸ್ವಾಗತಿಸಿದರು. ಶಂಕರ ಮೇಟಿ ವಂದಿಸಿದರು.