ಸರಣಿ ರಸ್ತೆ ಅಪಘಾತಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣ - ರವೀಂದ್ರಗೌಡ ಪಾಟೀಲ ಆರೋಪ
The officials concerned are responsible for the series of road accidents - Ravindra Gowda Patil all
ರಾಣೇಬೆನ್ನೂರು 25: ದಿನನಿತ್ಯ ಹೆಚ್ಚುತ್ತಿರುವ ಸರಣಿ ರಸ್ತೆ ಅಪಘಾತಗಳಿಂದ ಆಗುತ್ತಿರುವ ಸಾವು-ನೋವುಗಳಿಗೆ ಸಂಬಂಧಪಟ್ಟ ಇಲಾಖೆಗಳ ಬೇಜಾವಬ್ದಾರಿತನವೇ ಮುಖ್ಯ ಕಾರಣವಾಗಿದ್ದು ಈ ಸಾವುಗಳ ಹೊಣೆಯನ್ನು ಸಂಬಂಧಪಟ್ಟ ಇಲಾಖೆಯವರೆ ಹೊರಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಪಾಟೀಲ ಹೇಳಿದರು. ಅವರು ನಿನ್ನೆಯ ದಿವಸ ರಾಣೇಬೆನ್ನೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾವಣಗೆರೆ ತಾಲೂಕಿನ ‘ಪುಗಟಗೇರಿ’ ತಾಂಡಾದ ಯುವಕ ಆಕಾಶ ತಂದೆ ತಿಪ್ಪೇಶ ನಾಯಕ (17) ಶವವಿಟ್ಟು ಸರಣಿ ರಸ್ತೆ ಅಪಘಾತಗಳು ಘಟಿಸಲಿಕ್ಕೆ ಮುಖ್ಯ ಕಾರಣವಾದ ಸಂಬಂಧಪಟ್ಟ ಇಲಾಖೆಗಳ ಬೇಜವಬ್ದಾರಿತನ ಖಂಡಿಸಿ ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕರು ಹಾಗೂ ಅವರ ಸಂಬಂಧಿಕರು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಕಳೆದ ಒಂದು ವಾರದ ಹಿಂದೆ ಬೀರೂರು-ಸಮ್ಮಸ್ಸಗಿ ರಸ್ತೆಯಲ್ಲಿ ಎಂ. ಸ್ಯಾಂಡ್ ಹೊಡೆಯುತ್ತಿದ್ದ ಲಾರಿಯೊಂದು ಮುಷ್ಟೂರು ಗ್ರಾಮದ ಯುವ ರೈತ ಕುಮಾರನ ಮೇಲೆ ಹಾದು ಆತ ಸ್ಥಳದಲ್ಲೇ ಮೃತಪಟ್ಟರೆ, ಕಳೆದ ರಾತ್ರಿ ದಾವಣಗೆರೆ ತಾಲೂಕು ‘ಪುಗಟಗೇರಿ’ ತಾಂಡಾದ ಆಕಾಶ ಎನ್ನುವ ಯುವಕ ‘ಹಾಲಿಹೌಸ್’ ನಿರ್ಮಿಸುವ ಕೂಲಿ ಕೆಲಸಕ್ಕೆಂದು ಹೆಡಿಯಾಲ ಹತ್ತಿರ ಬೈಕನಲ್ಲಿ ತೆರಳುತ್ತಿದ್ದಾಗ ಲಾರಿ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟರೆ ಉಳಿದವನು ಸಾವು ಬದುಕಿನ ಮಧ್ಯ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಒಟ್ಟಾರೆ ವಾರದಲ್ಲಿ 8 ರಿಂದ 10 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಸರಣಿ ರಸ್ತೆ ಅಪಘಾತಗಳಿಗೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಪೊಲೀಸ್ ಇಲಾಖೆ, ಆರ್.ಟಿ.ಓ ಇಲಾಖೆಗಳೇ ಕಾರಣವಾಗಿದ್ದು ಈ ಇಲಾಖೆಯವರು ತಮ್ಮ ಜವಾಬ್ದಾರಿಯನ್ನು ಅರಿತು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಇರುವುದು ರಸ್ತೆಗಳಲ್ಲಿ ಸಿಗ್ನಲ್‌ಗಳ ಅಳವಡಿಕೆ, ಮಾರ್ಕಿಂಗ್ ಎದ್ವಾತದ್ವಾ ರಸ್ತೆ ಹಮ್ಮುಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಇಂತಹ ಅವೈಜ್ಞಾನಿಕ ನೀತಿಯಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ. ಪೋಷಕರಾದರೂ ಕೂಡ ತಮ್ಮ ಮಕ್ಕಳಿಗೆ ಬೈಕಗಳನ್ನು ಕೊಡುವಾಗ ಜವಾಬ್ದಾರಿ ವಹಿಸಬೇಕು. ರಸ್ತೆ ಚನ್ನಾಗಿದೆ ಎಂದು ಅತೀಯಾದ ವೇಗದಿಂದ ಬೈಕ್ ಡ್ರೈವಿಂಗ್ ಮಾಡುವ ಯುವಕರೆ ಅತೀ ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇಂದು ಆಕಾಶನಿಗೆ ಆದ ಸ್ಥಿತಿ ನಾಳೆ ನಿಮ್ಮ ಮಕ್ಕಳಿಗೆ ಆಗ ಬಹುದೆಂದು ಪೋಷಕರನ್ನು ಎಚ್ಚರಿಸಿದ ಪಾಟೀಲರು ಲಾರಿ ಚಾಲಕರ ಸಭೆ ಕರೆದು ಆಯಾ ತಾಲೂಕಿನಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯವರು, ಆರ್.ಟಿ.ಓ ಇಲಾಖೆಯವರು, ತಹಶೀಲ್ದಾರರು ಸಾರ್ವಜನಿಕರೊಂದಿಗೆ ಜನಜಾಗೃತಿ ಸಭೆ ನಡೆಸಬೇಕೆಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದು ಕನ್ನಪ್ಪಳವರ, ನಾಗರಾಜ ಕುಸಗೂರ, ರಮೇಶ ಲಮಾಣಿ, ಗಣೇಶ ಲಮಾಣಿ, ಪರಶುರಾಮ ನಾಯಕ, ತಿಪ್ಪೇಶ ನಾಯಕ, ಶಿವ ನಾಯಕ, ರುದ್ರೇಶ ಲಮಾಣಿ, ಹನುಮಂತಪ್ಪ ಲಮಾಣಿ, ಎಚ್. ಎಲ್. ನಾಯಕ, ಹರೀಶ ಅಮರಾವತಿ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 