ಸಾಹಿತ್ಯದ ವಾರಸುದಾರಿಕೆಯ ಅಗತ್ಯ: ಡಾ. ಎಚ್. ಬಿ. ಕೋಲ್ಕಾರ
The need for literary heritage: Dr. H. B. Kolkara
ಬೆಳಗಾವಿ 29: ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ‘ಮಂಜು ಪ್ರಕಾಶನ’ ಆಶ್ರಯದಲ್ಲಿ ಶಿ.ಗು.ಕುಸುಗಲ್ಲ ಇವರ ಮೂರು ಕೃತಿಗಳ ಲೋಕಾರೆ್ಣ ಹಾಗೂ ಹಿರಿಯ ಲೇಖಕಿಯರ ಸನ್ಮಾನ ಸಮಾರಂಭ ದಿ. 28ರಂದು ಏರಿ್ಡಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ. ಎಮ್. ಎಸ್. ಇಂಚಲ ಇವರು ವಹಿಸಿದ್ದರು. ಹೊಲಮನೆ ಅಸ್ತಿಯ ವಾರಸುದಾರಿಕೆಯಂತೆ ಹಿರಿಯರು ಮೈಗೂಡಿಸಿಕೊಂಡು ಬಂದ ಕಲೆ, ಸಾಹಿತ್ಯ ಮೊದಲಾದ ಆದರ್ಶಗಳ ವಾರಸುದಾರಿಕೆಯ ಅಗತ್ಯತೆ ಇದೆ. ವೃತ್ತಿಯೊಂದಿಗೆ ಮನೋ ನೆಮ್ಮದಿಗೆ ಮನೋ ವಿಕಾಸಕ್ಕೆ ಉನ್ನತ ಪ್ರವೃತ್ತಿಯ ಅಳವಡಿಕೆಯ ಅವಶ್ಯಕತೆ ಇದೆ ಎಂದು ಡಾ. ಎಚ್. ಬಿ. ಕೋಲ್ಕಾರ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಕುಸುಗಲ್ಲ ಇವರ ಸಾಹಿತ್ಯದಲ್ಲಿ ಮನುಷ್ಯ ಪ್ರೀತಿ, ಅನುಕಂಪ, ಸಾಮಾಜಿಕ ಕಳಕಳಿ, ಮನವರಳಿಸುವ ಬೋಧನೆ ಹಾಸುಹೊಕ್ಕಾಗಿದೆ ಎಂದು ಅವರು ಹೇಳಿದರು.
ಇಂದಿನ ಚಲನ ಚಿತ್ರ, ಕಿರು ತೆರೆ ಮೊದಲಾದ ದೃಶ್ಯ ಮಾಧ್ಯಮ ಪ್ರೇಕ್ಷಕರ ಬದಲಾದ ಅಭಿರುಚಿಗೆ ತಕ್ಕಂತೆ ನಿರ್ಮಾಣಗೊಳ್ಳುತ್ತಿವೆ. ಇಂದು ಓದುವ ಸಂಸ್ಕೃತಿ ಕಡಿಮೆಯಾಗಿ ನೋಡುವ ಸಂಸ್ಕೃತಿ ಅಧಿಕವಾಗುತ್ತಿದೆ ಎಂದು ಮೂಡಲ ಮನೆ ಖ್ಯಾತಿಯ ನಟ ಸಂತೋಷರಾಜ್ ಝಾವರೆ ಅತಿಥಿಯಾಗಿ ಮಾತನಾಡಿದರು. ಬದುಕು ಬರಹ ಒಂದಾಗಿರಿಸಿದ ಶರಣ ಭಾವದ ಕುಸುಗಲ್ಲ ಇವರ ಸಾಹಿತ್ಯದಲ್ಲಿ ಸತ್ಯ ಹಾಗೂ ಸತ್ವವಿದೆ ಎಂದು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.
ಕುಸುಗಲ್ಲ, ಇವರ ಬರಹ ಕಲ್ಪನೆಗಿಂತಲೂ ವಾಸ್ತವಕ್ಕೆ ಅತಿ ಹತ್ತಿರವಾಗಿದೆ ಎಂದು ಕೃತಿಗಳನ್ನು ಪರಿಚಯಿಸಿ ಸಾಹಿತಿ, ಸಂಘಟಕರಾದ ಆಶಾ ಯಮಕನಮರಡಿ ತಿಳಿಸಿದರು. ಹಿರಿಯ ಲೇಖಕಿಯರಿಗೆ ಸನ್ಮಾನಿಸಲಾಯಿತು. ಮಂಜು ಪ್ರಕಾಶನದ ಸಂಚಾಲಕ ಮಂಜುಳಾ ಕುಸುಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಕಾರ ಕುಸುಗಲ್ಲ ಇವರು ಬದುಕಿನ ಅನುಭವವೆ ಸಾಹಿತ್ಯ ರಚನೆಗೆ ಸ್ಪೂರ್ತಿ ಎಂದರು. ಪೂರ್ವಿ ಕೆಂಚಕ್ಕನವರ ವಂದನೆ ಸಲ್ಲಿಸಿದರು. ವಿನಾಯಕ ನಂದಿ ನಿರೂಪಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 