ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವದೇ ರಾಜ್ಯ ಬರಹಗಾರರ ಸಂಘದ ಧ್ಯೇಯ : ಮಧುನಾಯ್ಕ ಲಂಬಾಣಿ
The mission of the State Writers' Association is to recognize and encourage artists: Madhu Nayak La
ಬೆಳಗಾವಿ 02 : ವಿಜಯನಗರ ಜೇಲ್ಲೆಯ ಹೂವಿನ ಹಡಗಲಿ ತಾಲೂಕಿನ ಪ್ರತಿಷ್ಠಿತ ಸಾಮಾಜಿಕಾಭಿವೃದ್ಧಿ, ಸೈಕ್ಷಣಿಕಾಭಿವೃದ್ಧಿ, ಹಾಗೂ ಕಲಾಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಗೂ ಬೆಳಗಾವಿಯ ಕ ರಾ ಬ ಸಂಘದ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಮಹಾಂತೇಶ ನಗರ ಮಹಾಂತ ಭವನದಲ್ಲಿ ಇದೇ ದಿನಾಂಕ 01/02/2026 ರ ಭಾನುವಾರ ಬೆಳಿಗ್ಗೆ 10 ಘಂಟೆಗೆ ರಾಜ್ಯ ಮಟ್ಟದ ಕನ್ನಡ ನುಡಿ ವೈಭವ 2026, ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಈ ಒಂದು ಅವಿಸ್ಮರಣೀಯ ಸಂಧರ್ಭದಲ್ಲಿ ಪ್ರಸ್ತಾವಿಕ ನುಡಿಯಲ್ಲಿ ಮಾತನಾಡಿದ ರಾಜ್ಯ ಸಂಘದ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ ಯವರು ಈ ಎಲೆ ಮರೆ ಕಾಯಿಯಂತೆ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಡುವ ಮಹಾದೋದ್ದೇಶದಿಂದ ಕಲಾವಿದರನ್ನು ಗುರುತಿಸಲು ಒಟ್ಟು ನಾಲ್ಕು ಹಂತಗಳಲ್ಲಿ 600 ಕ್ಕಿಂತಲೂ ಹೆಚ್ಚು ಕಲಾವಿದರನ್ನು ಅವರ ಪ್ರತಿಭೆಯನ್ನು ಪರೀಕ್ಷಿಸಲು ವಿಭಿನ್ನವಾದ ಚಿತ್ರ ರಚನೆಯ ವಿಷಯಗಳನ್ನು ನೀಡಿ, ಹಲವಾರು ಹಂತಗಳಲ್ಲಿ ಆಯ್ಕೆ ಮಾಡುತ್ತಾ ಬಂದು ಕೊನೆಯಲ್ಲಿ ಅಂತಿಮವಾಗಿ 10 ಜನ ಕನ್ನಡ ನುಡಿ ವೈಭವ 2026 ರ ರಾಜ್ಯಮಟ್ಟದ ಚಿತ್ರರತ್ನ-2026 ಕ್ಕೆ ಆಯ್ಕೆ ಮಾಡಲಾಯಿತು ಎಂದು ನುಡಿದರು.
ಕಾರ್ಯಕ್ರಮದ ಕೇಂದ್ರ ಬಿಂದುವಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ರಾಜ್ಯಮಟ್ಟದ ಪ್ರತಿಭಾ ಪುರಸ್ಕೃತರಾದ ಅ ರಾ. ಶಿವು ಕೋಟ ಗ್ರಾಮ, ರಮೇಶ್ ಎಚ್ ಕೋಟಾಗ್ರಾಮ ರಾಯಚೂರು, ಸಹನಾ, ಎಸ್ ಗುಂಡ್ಲುಪೇಟೆ. ಸೌಮ್ಯ ಎಸ್ ಹಾಸನ. ಗದಗ ಶಹರದ ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕುಮಾರಿ ಅನನ್ಯ ರಾಘವೇಂದ್ರ ಪಾಲನಕರ ಗದಗ. ಚೈತ್ರಾ ಗೋಪಳಪುರ ಯಾದಗಿರಿ. ರಮ್ಯಾ ದೇವಿದಾಸ್ ನಾಯಕ್ ಭಟ್ಕಳ ಉತ್ತರ ಕನ್ನಡ ಜಿಲ್ಲೆ. ರಘುವೀರ್ ಯಾದಗಿರಿ. ಜ್ಯೋತಿ ಆನಂದ ಚಂದುಕರ ಬಾಗಲಕೋಟ. ಶೈಲಜಾ ಕೆ ವಿ ಜೈಪುರ, ರಾಜಸ್ಥಾನ. ಕನ್ನಡ ನುಡಿ ವೈಭವ - 2026-ರ ಕಾರ್ಯಕ್ರಮದ ಅಡಿಯಲ್ಲಿರಾಜ್ಯಮಟ್ಟದ ಚಿತ್ರರತ್ನ-2026 ಯನ್ನು ನೀಡಿ ಸನ್ಮಾನಿಸಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಒಂದು ಅವಿಸ್ಮರಣೀಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ, ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆಂಜನೇಯ ಆರ್.ಕೆ., ಸಾಹಿತಿಗಳು ಹಾಗೂ ಕ.ರಾ.ಬ.ಸಂಘದ ಗೌರವ ಅಧ್ಯಕ್ಷರಾದ ಗೊರೂರು ಅನಂತರಾಜು, ಸಾಹಿತಿಗಳಾದ ಎಂ.ವೈ.ಮೆಣಸಿನಕಾಯಿ. ಡಾ.ಸುನೀಲ ಪರೀಟ, ರಾಜ್ಯಾಧ್ಯಕ್ಷರು ಕ.ಶಿ.ಸಂಘಗಳ ಪರಿಷತ್ತು ಸಂಗಮೇಶ ಖನ್ನಿನಾಯ್ಕರ, ತಾಲ್ಲೂಕು ಅಧ್ಯಕ್ಷರು, ಕ.ರಾ.ಪ್ರಾ.ಶಾ.ಶಿ.ಸಂಘ ಚಂದ್ರಶೇಖರ ಕೋಲಕಾರ, ಜಿಲ್ಲಾಧ್ಯಕ್ಷರು ಅಖಿಲ ಕ.ಸ.ಮಹಿಳಾ ನೌ.ಸಂಘ ರೇಖಾ ಅಂಗಡಿ, ಬರಹಗಾರರ ಸಂಘ ಬೆಳಗಾವಿ ಗ್ರಾಮೀಣ ಅಧ್ಯಕ್ಷರು ಎಸ್.ಎನ್.ಉಪ್ಪಿನ, ಜಿಲ್ಲಾಧ್ಯಕ್ಷರು ಎಸ್.ಸಿ.ಎಸ್.ಟಿ. ಸಮನಾಮನಸ್ಕ ಶಿಕ್ಷಕರ ವೇದಿಕೆ ಶ್ರೀಮತಿ ಸುಮಾ ದೊಡಮನಿ, ಮಹಾಂತ ಭವನ ಕಾರ್ಯದರ್ಶಿ ಸಂಜೀವ ಪಟ್ಟಣಶೆಟ್ಟಿ ಭಾಗವಹಿಸುವರು. ಕಾರ್ಯಕ್ರಮ ಪ್ರಧಾನ ಸಂಯೋಜಕರು ಮತ್ತು ಜಿಲ್ಲಾಧ್ಯಕ್ಷರು ಸುರೇಶ ಸಕ್ರೆಣ್ಣವರ, ಹಿರಿಯ ಶಿಕ್ಷಕರು, ಬೆಳಗಾವಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 