ಜನಮನ ಸೆಳೆದ ಜೋಕುಮಾರ ಮಹಿಮೆ’ ಕಿರುನಾಟಕ
The mini-drama 'Jokumar Mahime' attracted attention
ಹೂವಿನ ಹಡಗಲಿ 08 : ಮಹಾಮಹಿಮ ಗವಿಸಿದ್ದೇಶ್ವರರ 31 ನೇ ಜಾತ್ರಾ ಮಹೋತ್ಸವದ ರಥೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಅಕ್ಕನ ಬಳಗದವರು ಪ್ರದರ್ಶಿಸಿದ ’ಜೋಕುಮಾರ ಮಹಿಮೆ’ ಕಿರುನಾಟಕ ಜನಮನಸೆಳೆಯಿತು.ಕೃಷಿ ಪ್ರಧಾನ ಹಳ್ಳಿಗಳಜನಸಾಮಾನ್ಯರ ಬದುಕನ್ನು ರೈತ ಮಹಿಳೆಯರು ಜೋಕುಮಾರ ಸ್ವಾಮಿ ಕಥೆ ಆಧಾರಿತವಾಗಿ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದರು.ಗ್ರಾಮೀಣ ಸೊಗಡಿನ ಭಾಷೆ ಕಾವ್ಯಮಯ ಪದಗಳು ನಾಟಕಕ್ಕೆ ಮೆರುಗು ತಂದವು.ಮಳೆ ಬೆಳೆ ಸುಗ್ಗಿ ಹಬ್ಬ ಮೊದಲಾದ ವಿಷಯಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಆಕರ್ಷಕವಾಗಿ ಮೂಡಿ ಬಂದಿತು.
ದೈನಂದಿನ ಬದುಕಿನ ನಿರ್ವಹಣೆ ಮರೆತು ಸಾಮಾಜಿಕ ಜಾಲತಾಣಗಳು ಧಾರಾವಾಹಿ ನೋಡುವುದರಲ್ಲಿಯೇ ಜನರು ಅತ್ಯಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಅನಾವರಣಗೊಳಿಸಿದರು.ಶ್ರೀ ಗವಿಸಿದ್ದೇಶ್ವರ ಅಕ್ಕನ ಬಳಗದ ಮುಖ್ಯಸ್ಥೆ ಕಲಾವಿದೆ ಸವಿತಾ ಕುಂಬಾರಿ ನಿರ್ದೇಶನದಲ್ಲಿ ಎಲ್ಲಾ ಮಹಿಳೆಯರು ಮನೋಜ್ಞ ಅಭಿನಯ ನೀಡಿದರು.ಕಲಾವಿದೆಯರಾದ ಶಶಿಕಲಾ ಹಿರೇಮಠ, ಮೇಘಾ, ಪುಷ್ಪಾ,ಕೊಟ್ರಮ್ಮ, ಹಿರಿಯರಾದ ಚೆನ್ನಮ್ಮ, ರತ್ನ ಇತರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದರು.ಗ್ರಾಮೀಣ ಸೊಗಡಿನ ವೇಷಭೂಷಣ ಕಣ್ಮನ ಸೆಳೆದವು.ನಾಟಕಕ್ಕೆ ಪೂರಕವಾದ ಹಾಡು ಸಂಗೀತ ಉತ್ತಮವಾಗಿತ್ತು.ಎಂ ಪಿ ಎಂ ಪ್ರೇಮಾ ಪ್ರಸಾಧನ ಅಲಂಕಾರ ಅದ್ಭುತವಾಗಿತ್ತು.ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಗವಿಸಿದ್ದೇಶ್ವರ ಅಕ್ಕನ ಬಳಗದ ವತಿಯಿಂದ ಮೂಡಿ ಬಂದ ಕಿರುನಾಟಕ ಜನಮನಸೆಳೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 