ಬಂಡಿಗಣಿಯ ಮಠದ ಆವರಣದಲ್ಲಿ ದಾನೇಶ್ವರ ಶ್ರೀಗಳ ಅಂತ್ಯಸಂಸ್ಕಾರ

ಬಂಡಿಗಣಿಯ ಮಠದ ಆವರಣದಲ್ಲಿ ದಾನೇಶ್ವರ ಶ್ರೀಗಳ ಅಂತ್ಯಸಂಸ್ಕಾರ The last rites of Daneshwara Sri were performed at the premises of Bandigani Math

ಜಮಖಂಡಿ 06: ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು (76) ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದು. ಶ್ರೀಗಳು ಅಪಾರ ಭಕ್ತರ ಸಮೂಹವನ್ನು ಹೊಂದಿದ್ದರು.  

ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದಲ್ಲಿ ಡಿ,5ರಂದು ಶ್ರೀಗಳು ಇಹಲೋಕ ತ್ಯಜಿಸಿದ್ದ ಸುದ್ದಿ ಹರಡುತ್ತಿದಂತೆ. ತಾಲೂಕಿನ ಸುತ್ತ-ಮುತ್ತಲಿನ ಸಾವಿರಾರು ಭಕ್ತರು ಮಠದ ಆವರಣದಲ್ಲಿ ಜಮಾಯಿಸಿ. ಭಕ್ತರ ಕಣ್ಣಿನಲ್ಲಿ ನೀರಿನ ಹೊಳೆಯು ಹರಿಯುತ್ತಿದ್ದು. ಭಕ್ತರ ಅಕ್ರಂದಣ ಮುಗಿಲು ಮುಟ್ಟುವಂತೆ ಇತ್ತು. 

ಬೆಳಗಾವಿಯ ಖಾಸಗಿ ಆಸ್ಪತ್ರೆಯಿಂದ ಶ್ರೀಗಳ ಪಾರ್ಥಿವ ಶರೀರವನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಮಠದಲ್ಲಿ ಮಧ್ಯಾಹ್ನ ಭಕ್ತರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಂದ ರಾತ್ರಿ 10 ಗಂಟೆ ವೇಳೆಗೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠಕ್ಕೆ ಶ್ರೀಗಳ ಪಾರ್ಥಿವ ಶರೀರ ತರಲಾಗುತ್ತಿದ್ದು. ಅಂತಿಮ ದರ್ಶನಕ್ಕೆ ಮಠದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದ್ದು, ರಾತ್ರಿ 10 ರಿಂದ ಶನಿವಾರ ಸಂಜೆ 4 ರ ವರೆಗೆ ಭಕ್ತರು ಮತ್ತು ಸಾರ್ವಜನಿಕರು ದರ್ಶನಕ್ಕೆ ಮಠದ ಆವರದಲ್ಲಿ ವ್ಯವೆಸ್ಥೆ ಮಾಡಲಾಗಿದ್ದು ಭಕ್ತರು ದರ್ಶನ ಪಡೆಯಬಹುದಾಗಿದೆ. ಬಳಿಕ ಮಠದ ಆವರಣದಲ್ಲಿ ದಾನೇಶ್ವರ ಶ್ರೀಗಳ ಅಂತ್ಯಸಂಸ್ಕಾರ ನಡೆಯಲಿದೆ. 

ಲಕ್ಷಾಂತರ ಭಕ್ತರು ಸೇರುವ ನೀರೀಕ್ಷೆಯಿದ್ದು, ಪೊಲೀಸರನ್ನು ನಿಯೋಜಿಸಿ ಬಂದೋ ಬಸ್ತ್‌ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗಿದೆ. ಶ್ರೀಗಳ ಕೊನೆಯ ಸುಪುತ್ರ ಭಕ್ತರಲ್ಲಿ ಮನವಿ ಮಾಡಿಕೊಂಡು, ಶ್ರೀಗಳು ಕೇವಲ ದೇಹವನ್ನು ಬಿಟ್ಟಿದ್ದಾರೆ. ಆದರೆ ಅವರು ಎಲ್ಲ ಭಕ್ತರ ಮನ-ಮನುಸುಗಳಲ್ಲಿ ಇದ್ದಾರೆ. ಎಲ್ಲ ಭಕ್ತರು ಅವರ ನಾಮಸ್ಮರಣೆಯನ್ನು ಮಾಡಿಕೊಂಡು ದರ್ಶನವನ್ನು ಪಡೆದುಕೊಳ್ಳಬೇಕೆಂದು ಭಕ್ತರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.