ಸ್ವಾಮಿ ವಿವೇಕಾನಂದ ಹಾಗೂ ಸಂಗೋಳ್ಳಿ ರಾಯಣ್ಣರ ಆದರ್ಶ ತತ್ವಗಳು ವಿದ್ಯಾರ್ಥಿಗಳಿಗೆ ದಾರಿ ದೀಪ : ಶಶಿಕಾಂತ್ ಗುರೂಜಿ
The ideals and principles of Swami Vivekananda and Sangolli Rayanna are a guiding light for student
ರಾಯಬಾಗ 28 : ಸ್ವಾಮಿ ವಿವೇಕಾನಂದ ಹಾಗೂ ಸಂಗೋಳ್ಳಿ ರಾಯಣ್ಣರಂತ ಮಹಾನ ವ್ಯಕ್ತಿಗಳ ಆದರ್ಶ ತತ್ವಗಳು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕೆಂದು ರೈತ ಹೋರಾಟಗಾರ ಶಶಿಕಾಂತ್ ಗುರೂಜಿ ಹೇಳಿದರು. ಶುಕ್ರವಾರ ಸಾಯಂಕಾಲ ತಾಲೂಕಿನ ಹಿಡಕಲ್ ಗ್ರಾಮದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಅಜ್ಞಾನದ ಕತ್ತಲೆ ಹೋಗಲಾಡಿಸಿ ಸುಜ್ಞಾನದ ಮಹಾ ಬೆಳಕನ್ನು ಹಚ್ಚಬೇಕೆಂದರು.
ಹಾರೂಗೇರಿಯ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಸಾಹಿತಿ ಟಿ.ಎಸ್.ವಂಟಗೂಡಿ ಮಾತನಾಡಿ, 10 ದೇವಾಲಯಗಳನ್ನು ನಿರ್ಮಿಸುವುದಕ್ಕಿಂತ ಒಂದು ಮುತ್ತಿನಂತಹ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣರಾದ ಶಿಕ್ಷಣ ಪ್ರೇಮಿ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿಠಲ ಗಲಗಲಿಯವರ ಶೈಕ್ಷಣಿಕ ಸೇವೆ ಶ್ಲಾಘನೀಯವಾಗಿದೆ, ವಿದ್ಯಾರ್ಥಿಗಳು ಸತತ ಪ್ರಯತ್ನ, ಏಕಾಗ್ರತೆ, ಸಮಯಪ್ರಜ್ಞೆ ಅಳವಡಿಸಿಕೊಂಡು ಸಾಧನೆ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿಠ್ಠಲ ಗಲಗಲಿ ವಹಿಸಿದ್ದರು.
ಹಾರೂಗೇರಿಯ ಯುನಿವರ್ಸಲ್ ಮಹಾವಿದ್ಯಾಲಯದ ಪ್ರಾಚಾರ್ಯ ಲಕ್ಷ್ಮಣ ಪಾಟೀಲ, ವಾಸುದೇವ ಗಲಗಲಿ, ಪುಂಡಲಿಕ ಕುಳ್ಳೊಳ್ಳಿ, ಸಚಿನ ಘಂಟಿ, ಮಹಾದೇವ ಗಾಣಿಗೇರ, ಚೇತನ ಪೂಜಾರಿ, ಜೊತೆಪ್ಪ ಎತ್ತಿನಮನಿ, ಶಿವಾನಂದ ವಡ್ಡರ, ಪ್ರಭು ಸಣ್ಣಕ್ಕಿನವರ, ದಯಾನಂದ ಕೊಕಟನೂರ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು. ಶಿಕ್ಷಕಿ ಲಕ್ಷ್ಮಿ ಕ್ಯಾತಪ್ಪಗೋಳ ಸ್ವಾಗತಿಸಿದರು, ಭವಾನಿ ಗಲಗಲಿ ನಿರೂಪಿಸಿದರು, ಅಶ್ವಿನಿ ಕುರಾಡಿ ವಂದಿಸಿದರು.ಫೋಟೊ ಶೀರ್ಷಿಕೆ: ರಾಯಬಾಗ: ತಾಲೂಕಿನ ಹಿಡಕಲ್ ಗ್ರಾಮದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ರೈತ ಹೋರಾಟಗಾರ ಶಶಿಕಾಂತ್ ಗುರೂಜಿ ಅವರನ್ನು ಗಣ್ಯರು ಸತ್ಕರಿಸುತ್ತಿರುವುದು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 