ಸಂಸ್ಕಾರವಂತರಾಗಿ ದೇವರ ಮನೆಯ ನಂದಾದೀಪದಂತೆ ಮನೆಯನ್ನು ಬೆಳಗಬೇಕು: ಶಿವಾಚಾರ್ಯ
ರಾಣಿಬೆನ್ನೂರ 15: ಮಹಾತ್ಮರ ಬಾಲ್ಯ ಅದ್ಭುತ ಹಾಗೂ ಅವರ ಜೀವನ ಅನುಕರಣೆಯ ಮನುಷ್ಯನಿಗೆ ಸಂಸ್ಕಾರ ಮತ್ತು ಮಾನವೀಯತೆ ಇರಬೇಕು. ಸಂಸ್ಕಾರವಂತರಾಗಿ ದೇವರ ಮನೆಯ ನಂದಾದೀಪದಂತೆ ಮನೆಯನ್ನು ಬೆಳಗಬೇಕು ಎಂದು ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸೋಮವಾರ ರಾತ್ರಿ ಇಲ್ಲಿನ ಮೃತ್ಯುಂಜಯನಗರದ ಹೊನ್ನಾಳಿ ಚೆನ್ನಮಲ್ಲಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು (ರಿ) ಚೆನ್ನೇಶ್ವರ ಮಠ, ಲಿಂಗೈಕ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಚಿತ್ ಬೆಳಕಿನಲ್ಲಿ ನಡೆದ ಹೊಸ್ತಲ ಹುಣ್ಣಿಮೆ ಜ್ಞಾನವಾಹಿನಿ 288ರ ಮಾಸಿಕ ಧರ್ಮಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪರಸ್ಪರ ಸಂವಹನಕ್ಕಾಗಿ ಹುಟ್ಟಿಕೊಂಡ ಮೊಬೈಲ್ ಇಂದು ಜನರ ಜೀವನವನ್ನೇ ಆಪೋಷಿಸಿದೆ. ಜೀವನಕ್ಕೆ ಮನರಂಜನೆ ಇರಬೇಕು ಆದರೆ ಮನರಂಜನೆಯೇ ಜೀವನ ಆಗಬಾರದು. ಉಳಿದೆಲ್ಲ ಉಪವಾಸಗಳಿಗಿಂತ ಇಂದಿನ ದಿನಗಳಲ್ಲಿ ಡಿಜಿಟಲ್ ಉಪವಾಸ ಅಗತ್ಯವಾಗಿದೆ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ಸ್ವರ್ಗ ಮನೆಯಾಗಬೇಕು. ನಂಬಿದ ಭಕ್ತರನ್ನು ಕೈಬಿಡದೆ ದೈವ ಮಹಾತಪಸ್ವಿ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ಬೂತ ಭವಿಷ್ಯತ್ತನ್ನು ಅರ್ಥ ಮಾಡಿಕೊಂಡು ನಮ್ಮನ್ನೆಲ್ಲ ಮಾರ್ಗದರ್ಶಿಸಿದ್ದಾರೆ. ಮಕರ ಸಂಕ್ರಾಂತಿಯ ನಮ್ಮ ಒಂದು ದಿನದ ಪವಿತ್ರ ಸ್ನಾನ ಜಲಚರಗಳಿಗೆ ಹಾನಿಯಾಗದಿರುವ ಹಾಗೆ ನಮ್ಮ ಸಂಕ್ರಾಂತಿಯ ಸ್ನಾನವಿರಲಿ ಎಂದು ನುಡಿದರು.
ರೋಟರಿ ಕ್ಲಬ್ ಅಧ್ಯಕ್ಷ ರಾಜಣ್ಣ ಮೋಟಗಿ, ಅಮೃತಗೌಡ ಹಿರೇಮಠ, ಜಗದೀಶ ಮಳೆಮಠ, ಚನವೀರಗೌಡ ಪಾಟೀಲ, ಚಂದ್ರಶೇಖರ ರಾಮಾಳದ, ಹೇಮಲತಾ, ನಿರ್ಮಲಾ, ಶಿವಯೋಗಪ್ಪ ಬಸವರಾಜಪ್ಪ ರಾಮಾಳದ, ಶೀಲಾ, ವಿಜಯಕುಮಾರ ರಾಮಾಳದ, ಮಂಜುಳಾ ಪಾಟೀಲ, ಶೈಲಾ, ಕೊಟ್ರೇಶ ರಾಮಾಳದ, ರಶ್ಮಿ, ಪ್ರಭುಕುಮಾರ ರಾಮಾಳದ, ನಿಖಿತಾ, ಮಹೇಶ ರಾಮಾಳದ, ಉಮೇಶಣ್ಣ ಗುಂಡಗಟ್ಟಿ, ರಾಜಣ್ಣ ತಿಳುವಳ್ಳಿ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ ಗೌರಿಶಂಕರ ಸ್ವಾಮಿ ನೆಗಳೂರುಮಠ, ಎಂ.ಕೆ ಹಾಲಸಿದ್ದಯ್ಯಾ ಶಾಸ್ತ್ರೀಜಿ, ಸುನಂದಾಮ್ಮ ತಿಳುವಳ್ಳಿ. ಭಾಗ್ಯಮ್ಮ ಗುಂಡಗಟ್ಟಿ ಇದ್ದರು.
ಕಲಾವಿದ ಗಣಪ್ಪ ಕುಲಕರ್ಣಿ, ರಜನಿ ಕರಿಗಾರ, ಯುವರಾಜ ಹಿರೇಮಠ ಸಂಗೀತ ಸೇವೆಯನ್ನು ಸಲ್ಲಿಸಿದರು. ಗಾಯತ್ರಿ ಕುರುವತ್ತಿ ಪ್ರಾಥಿಸಿದರು. ಕಸ್ತೂರೆಮ್ಮ ಪಾಟೀಲ ನಿರೂಪಿಸಿದರು. ಬಿದ್ದಾಡಪ್ಪ ಚಕ್ರಸಾಲಿ ಸ್ವಾಗತಿಸಿದರು.
ಫೋಟೊ15ಆರ್ಎನ್ಆರ್02ರಾಣಿಬೆನ್ನೂರ:ಇಲ್ಲಿನ ಮೃತ್ಯುಂಜಯನಗರದ ಚೆನ್ನೇಶ್ವರ ವ್ಮಠದಲ್ಲಿ ಹೊಸ್ತಲ ಹುಣ್ಣಿಮೆ ಜ್ಞಾನವಾಹಿನಿ 288ರ ಮಾಸಿಕ ಧರ್ಮಸಭೆಯನ್ನು ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿದರು.